
ಸಿದ್ದರಾಮಯ್ಯ ವಿರುದ್ಧ STING OPERATION ಪ್ರಕರಣ – ಕೈ ನಾಯಕಿ ಕೃಪಾ ಆಳ್ವಾ ವಿಚಾರಣೆ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕಿ ಕೃಪಾ ಆಳ್ವಾ ವಿಚಾರಣೆ ಎದುರಿಸಿದ್ದಾರೆ.
READ THIS : ಶತ್ರುವಿನ ಶತ್ರು ಮಿತ್ರ ಸೂತ್ರಕ್ಕೆ ಮುಂದಾದ್ರಾ ಕೇಂದ್ರ ಸಚಿವ ಕುಮಾರಸ್ವಾಮಿ?

ನೋಟಿಸ್ ನೀಡುವ ಮೊದಲೇ ಹಾಜರಾಗಿರೋ ಕೃಪಾ ಅಳ್ವಾ
ಹೌದು.. ಬೆಂಗಳೂರಿನ ಸಿಸಿಬಿ ಕಚೇರಿಗೆ ಆಗಮಿಸಿದ ಕೃಪಾ ಆಳ್ವಾ, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇನ್ನು ಪೊಲೀಸರು ನೋಟಿಸ್ ನೀಡುವ ಮೊದಲೇ ಕೃಪಾ ಆಳ್ವಾ ವಿಚಾರಣೆಗೆ ಹಾಜರಾಗಿದ್ದು, ಸ್ಟಿಂಗ್ ಆಪರೇಷನ್ಗೆ ಸಂಬಂಧಿಸಿದ ವಿಚಾರಗಳ ಕುರಿತು ಸೈಬರ್ ಕ್ರೈಂ ಪೊಲೀಸರು ಅವರಿಂದ ಮಾಹಿತಿ ಸಂಗ್ರಹಿಸಿದ್ದಾರೆ.

ಸೈಬರ್ ಕ್ರೈಂ ಪೊಲೀಸರಿಂದ ಕೃಪಾ ಅಳ್ವಾ ವಿಚಾರಣೆ
ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣದ ತನಿಖೆಯನ್ನು ಪೊಲೀಸರು ಮುಂದುವರಿಸಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಮಾಹಿತಿ ಕಲೆಹಾಕುತ್ತಿದ್ದಾರೆ.
MUST WATCH : ತುಮಕೂರಲ್ಲಿ ಭತ್ತದ ಲಾರಿ ಪಲ್ಟಿ… ಸ್ಥಳಕ್ಕೆ ಟ್ರಾಫಿಕ್ ಪೊಲೀಸರ ಭೇಟಿ




