Bengaluru | ಇಂದೇ ರಾಜ್ಯದ ನೂತನ ಸಚಿವರಿಗೆ ಖಾತೆ ಹಂಚಿಕೆ ಸಾಧ್ಯತೆ: ಯಾರಿಗೆ ಯಾವುದು? ಇಲ್ಲಿದೆ ಸಂಭಾವ್ಯ ಪಟ್ಟಿ

Bengaluru : ಸಚಿವ ಸಂಪುಟಕ್ಕೆ ಸೇರ್ಪಡೆಯಾಗಿರುವ 19 ನೂತನ ಸಚಿವರಿಗೆ ಬಹುನಿರೀಕ್ಷಿತ ಖಾತೆ ಹಂಚಿಕೆ ಪ್ರಕ್ರಿಯೆ ಇಂದು ಅಂತಿಮಗೊಳ್ಳುವ ಸಾಧ್ಯತೆ ಇದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ನಾಯಕರೊಂದಿಗೆ ನಡೆಸಿದ ಚರ್ಚೆಯ ಬಳಿಕ ಅಂತಿಮ ಪಟ್ಟಿಗೆ ರೂಪುರೇಷೆ ಸಿದ್ಧವಾಗಿದ್ದು, ಇಂದು ರಾತ್ರಿ ವೇಳೆಗೆ ಅಧಿಕೃತ ಆದೇಶ ಹೊರಬೀಳುವ ನಿರೀಕ್ಷೆಯಿದೆ.
ಹೈಕಮಾಂಡ್ ನಾಯಕರೊಂದಿಗೆ ಸುದೀರ್ಘ ಸಭೆ
ಖಾತೆ ಹಂಚಿಕೆ ಕುರಿತು ಮುಖ್ಯಮಂತ್ರಿ ಅವರು ಮಂಗಳವಾರ ತಡರಾತ್ರಿ ಹೈಕಮಾಂಡ್ ನಾಯಕರೊಂದಿಗೆ ಸುದೀರ್ಘ ಸಭೆ ನಡೆಸಿ ಪ್ರಾಥಮಿಕ ಚರ್ಚೆ ಪೂರ್ಣಗೊಳಿಸಿದ್ದಾರೆ. ಇಂದು ಮತ್ತೊಂದು ಸುತ್ತಿನ ಅಂತಿಮ ಮಾತುಕತೆಯ ನಂತರ ಖಾತೆಗಳ ಪಟ್ಟಿಯನ್ನು ರಾಜಭವನಕ್ಕೆ ರವಾನಿಸುವ ಸಾಧ್ಯತೆ ಇದೆ.
ಇದನ್ನು ಓದಿ : ಹೊಸ ಸಚಿವರ ಪಟ್ಟಿ ಬಿಡುಗಡೆ ಬೆನ್ನಲ್ಲೇ ಸಂಪುಟ ವಂಚಿತ ನಾಯಕರ ಆಕ್ರೋಶ

ಅಸಮಾಧಾನಕ್ಕೆ ಅವಕಾಶ ಕೊಡದಂತೆ ಹೈಕಮಾಂಡ್ ಸೂಚನೆ
ಖಾತೆ ಹಂಚಿಕೆಯ ನಂತರ ಸಚಿವರಲ್ಲಿ ಅಸಮಾಧಾನ ವ್ಯಕ್ತವಾಗುವ ಸಾಧ್ಯತೆಯನ್ನು ಮನಗಂಡಿರುವ ಕಾಂಗ್ರೆಸ್ ಹೈಕಮಾಂಡ್, ನೂತನ ಸಚಿವರಿಗೆ ಸ್ಪಷ್ಟ ಸಂದೇಶ ರವಾನಿಸಿದೆ ಎನ್ನಲಾಗಿದೆ. ಯಾವುದೇ ಇಲಾಖೆ ನೀಡಿದರೂ ಜವಾಬ್ದಾರಿಯಿಂದ ನಿರ್ವಹಿಸಬೇಕು, ಸಾರ್ವಜನಿಕವಾಗಿ ಅಸಮಾಧಾನ ವ್ಯಕ್ತಪಡಿಸಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಸಂಭಾವ್ಯ ಖಾತೆ ಹಂಚಿಕೆ
ಮೂಲಗಳ ಪ್ರಕಾರ, ನೂತನ ಸಚಿವರಿಗೆ ಈ ಕೆಳಕಂಡ ಇಲಾಖೆಗಳು ಹಂಚಿಕೆಯಾಗುವ ಸಾಧ್ಯತೆ ಇದೆ:
- ಪಿ.ಎಂ. ನರೇಂದ್ರಸ್ವಾಮಿ – ಸಮಾಜ ಕಲ್ಯಾಣ
- ಬಸವರಾಜ ರಾಯರೆಡ್ಡಿ – ಕಾನೂನು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ
- ಎಸ್.ಎನ್. ಮಲ್ಲಿಕಾರ್ಜುನ – ತೋಟಗಾರಿಕೆ ಹಾಗೂ ಗಣಿ-ಭೂವಿಜ್ಞಾನ
- ಎನ್. ಚಲುವರಾಯಸ್ವಾಮಿ – ಕೃಷಿ
- ಕೆ.ಎಂ. ಶಿವಲಿಂಗೇಗೌಡ – ವಸತಿ
- ಲಕ್ಷ್ಮಣ ಸವದಿ – ಸಹಕಾರ ಹಾಗೂ ಸಕ್ಕರೆ
- ಮಧು ಬಂಗಾರಪ್ಪ – ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
- ಜಮೀರ್ ಅಹಮದ್ ಖಾನ್ – ವಕ್ಫ್, ಹಜ್ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ
- ಕೆ.ಎನ್. ಬಸವರಾಜಪ್ಪ – ಪೌರಾಡಳಿತ
- ವಿಜಯಾನಂದ ಕಾಶಪ್ಪನವರ್ – ಕೈಮಗ್ಗ, ಜವಳಿ ಹಾಗೂ ಕೃಷಿ ಮಾರುಕಟ್ಟೆ
- ಅಜಯ್ ಸಿಂಗ್ – ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ವಲಯ ಉದ್ಯಮಗಳು
- ರುದ್ರಪ್ಪ ಲಮಾಣಿ – ಅಬಕಾರಿ
- ಹೆಚ್.ಸಿ. ಬಾಲಕೃಷ್ಣ – ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ
- ರಿಜ್ವಾನ್ ಅರ್ಷದ್ – ಉನ್ನತ ಶಿಕ್ಷಣ
- ಪುಟ್ಟರಂಗಶೆಟ್ಟಿ – ಪಶುಸಂಗೋಪನೆ ಹಾಗೂ ರೇಷ್ಮೆ
- ಬಿ. ನಾಗೇಂದ್ರ – ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ
- ಸಂತೋಷ್ ಎಸ್. ಲಾಡ್ – ಕಾರ್ಮಿಕ
- ಶಿವರಾಜ ತಂಗಡಗಿ – ಹಿಂದುಳಿದ ವರ್ಗ, ಕನ್ನಡ ಮತ್ತು ಸಂಸ್ಕೃತಿ
- ಟಿ. ರಘುಮೂರ್ತಿ – ಪರಿಶಿಷ್ಟ ಪಂಗಡಗಳ ಕಲ್ಯಾಣ

ಸಂಜೆ ವೇಳೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನೂತನ ಸಚಿವರ ಖಾತೆ ಹಂಚಿಕೆ ಕುರಿತು ಅಧಿಕೃತ ಪ್ರಕಟಣೆ ಹೊರಡಿಸುವ ಸಾಧ್ಯತೆ ಇದೆ.
ಇದನ್ನು ನೋಡಿ : ತ್ರಿಕೋನ ಪ್ರೇಮ ಪ್ರಕರಣಕ್ಕೆ ಯುವತಿ ಬ* – ಲೈವ್ ವಿಡಿಯೋ ಮಾಡಿ ಯುವತಿ ಸೂಸೈ*




