electric wire ಸ್ಪರ್ಶಿಸಿ ತೋಟದಲ್ಲಿ ಕಾಡಾನೆ ಸಾವು ಶಂಕೆ.!

ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದಿದ್ದ ಕಾಡಾನೆ ಇದೀಗ ತೋಟವೊಂದರಲ್ಲಿ ಶವವಾಗಿ ಪತ್ತೆಯಾಗಿದೆ. ವಿದ್ಯುತ್ ತಂತಿ ಸ್ಪರ್ಶಿಸಿದ ಪರಿಣಾಮ ಆನೆ ಮೃತಪಟ್ಟಿರಬಹುದೆಂಬ ಶಂಕೆ ವ್ಯಕ್ತವಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
electric wire ಸ್ಪರ್ಶಿಸಿ ಕಾಡಾನೆ ಸಾವು ಶಂಕೆ..!
ಹೌದು.. ಗೋಣಿಕೊಪ್ಪ-ಪೊನ್ನಂಪೇಟೆ ತಾಲೂಕಿನ ಮಡಿಕೆಬೀಡು ಗ್ರಾಮದ ಮಾಯಾಮುಡಿ ಸಮೀಪದ ಆಪ್ಪಟ್ಟೀರ ದೇವಯ್ಯ ಬೇಬಿ ಅವರಿಗೆ ಸೇರಿದ ತೋಟದಲ್ಲಿ ಅಂದಾಜು 30 ವರ್ಷ ಪ್ರಾಯದ ಗಂಡಾನೆಯೊಂದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಂಗಳವಾರ ರಾತ್ರಿ ವಿದ್ಯುತ್ ತಂತಿ ಸ್ಪರ್ಶಿಸಿದ ಪರಿಣಾಮ ಆನೆ ಮೃತಪಟ್ಟಿರಬಹುದು ಎನ್ನಲಾಗಿದೆ.
ಇದನ್ನೂ ಓದಿ: Bus ಡಿಕ್ಕಿಯಾಗಿ ಭೀಕರ ಅಪಘಾತ.. ಮಗು ಸೇರಿ ಮೂವರು ಸಾವು

ಕಾಡಾನೆ ಸಾವಿನ ಸ್ಥಳಕ್ಕೆ ಅರಣ್ಯಾಧಿಕಾರಿಗಳ ಭೇಟಿ
ಇನ್ನು ಕಾಡಾನೆ ಮೃತಪಟ್ಟಿರುವ ಮಾಹಿತಿ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಆನೆಯ ಸಾವಿಗೆ ವಿದ್ಯುತ್ ತಂತಿ ಕಾರಣವೇ ಅಥವಾ ಬೇರೆ ಯಾವುದಾದರೂ ಕಾರಣವಿದೆಯೇ ಅನ್ನೋ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಮರಣೋತ್ತರ ಪರೀಕ್ಷೆ ಬಳಿಕ ಆನೆಯ ಸಾವಿಗೆ ನಿಖರ ಕಾರಣ ಏನು ಅನ್ನೋದು ಸ್ಪಷ್ಟವಾಗಲಿದೆ. ಸದ್ಯ ತೋಟದಲ್ಲಿ ಕಾಡಾನೆ ಮೃತಪಟ್ಟಿರುವ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
MUST WATCH: ಕೃಷ್ಣಾ ನದಿಯಲ್ಲಿ ಬೃಹತ್ ಮೊಸಳೆ ಪ್ರತ್ಯಕ್ಷ – ಮೊಸಳೆ ಕಂಡು ಜನರಲ್ಲಿ ಹೆಚ್ಚಿದ ಆತಂಕ




