Job Alert : ರೈಲ್ವೆಯಲ್ಲಿ ನೇಮಕಾತಿ; 4,098 ಜೂನಿಯರ್ ಎಂಜಿನಿಯರ್ ಹುದ್ದೆಗೆ ಅರ್ಜಿ ಆಹ್ವಾನ

ಭಾರತೀಯ ರೈಲ್ವೆಯ ವಿವಿಧ ವಲಯಗಳಲ್ಲಿ ಖಾಲಿ ಇರುವ ತಾಂತ್ರಿಕ ಹುದ್ದೆಗಳ ಭರ್ತಿಗಾಗಿ ರೈಲ್ವೆ ನೇಮಕಾತಿ ಮಂಡಳಿ (RRB) ಮತ್ತೊಂದು ಬೃಹತ್ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ. ಈ ಸಂಬಂಧ ಕೇಂದ್ರೀಕೃತ ಉದ್ಯೋಗ ಕಿರು ಅಧಿಸೂಚನೆ (CEN 04/2026) ಪ್ರಕಟಿಸಲಾಗಿದ್ದು, ದೇಶಾದ್ಯಂತ ಒಟ್ಟು 4,098 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.
ಈ ನೇಮಕಾತಿ ಪ್ರಕ್ರಿಯೆಯಡಿ ಜೂನಿಯರ್ ಎಂಜಿನಿಯರ್ (JE), ಡಿಪೋ ಮೆಟೀರಿಯಲ್ ಸೂಪರಿಂಟೆಂಡೆಂಟ್ ಹಾಗೂ ಕೆಮಿಕಲ್ ಮತ್ತು ಮೆಟಲರ್ಜಿಕಲ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗುತ್ತದೆ.
ಶೈಕ್ಷಣಿಕ ಅರ್ಹತೆ
ಅಭ್ಯರ್ಥಿಗಳು ಸಂಬಂಧಿತ ವಿಭಾಗದಲ್ಲಿ ಎಂಜಿನಿಯರಿಂಗ್ ಡಿಪ್ಲೊಮಾ, ಬಿ.ಇ./ಬಿ.ಟೆಕ್ ಪದವಿ ಅಥವಾ ಬಿ.ಎಸ್ಸಿ ವಿದ್ಯಾರ್ಹತೆ ಹೊಂದಿರಬೇಕು. ಹುದ್ದೆವಾರು ಅರ್ಹತೆಗಳ ಸಂಪೂರ್ಣ ವಿವರ ಪೂರ್ಣ ಅಧಿಸೂಚನೆಯಲ್ಲಿ ಪ್ರಕಟವಾಗಲಿದೆ.
ಇದನ್ನು ಓದಿ : ರೈಲ್ವೆ ಉದ್ಯೋಗಾಂಕ್ಷಿಗಳಿಗೆ ಗುಡ್ ನ್ಯೂಸ್ – RRB ಯಲ್ಲಿ 119 ಹುದ್ದೆಗಳ ಭರ್ತಿ

ವಯೋಮಿತಿ ಮತ್ತು ವೇತನ
ಅರ್ಜಿ ಸಲ್ಲಿಸಲು ಅಭ್ಯರ್ಥಿಗಳ ವಯಸ್ಸು 18 ರಿಂದ 33 ವರ್ಷಗಳ ನಡುವೆ ಇರಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ₹35,400 ಆರಂಭಿಕ ಮೂಲ ವೇತನದೊಂದಿಗೆ ನಿಯಮಾನುಸಾರ ಇತರೆ ಭತ್ಯೆಗಳೂ ದೊರೆಯಲಿವೆ.
ಆಯ್ಕೆ ಪ್ರಕ್ರಿಯೆ
ಅಭ್ಯರ್ಥಿಗಳ ಆಯ್ಕೆ ಕೆಳಕಂಡ ಹಂತಗಳ ಆಧಾರದ ಮೇಲೆ ನಡೆಯಲಿದೆ:
- CBT-1 (ಕಂಪ್ಯೂಟರ್ ಆಧಾರಿತ ಪರೀಕ್ಷೆ)
- CBT-2 (ಕಂಪ್ಯೂಟರ್ ಆಧಾರಿತ ಪರೀಕ್ಷೆ)
- ದಾಖಲೆಗಳ ಪರಿಶೀಲನೆ
- ವೈದ್ಯಕೀಯ ಪರೀಕ್ಷೆ
ಪ್ರಮುಖ ದಿನಾಂಕಗಳು
- ಪೂರ್ಣ ಅಧಿಸೂಚನೆ ಬಿಡುಗಡೆ: 13 ಆಗಸ್ಟ್ 2026
- ಆನ್ಲೈನ್ ಅರ್ಜಿ ಆರಂಭ: 14 ಆಗಸ್ಟ್ 2026
- ಅರ್ಜಿ ಸಲ್ಲಿಸಲು ಕೊನೆಯ ದಿನ: 16 ಸೆಪ್ಟೆಂಬರ್ 2026
- CBT-1 ಪರೀಕ್ಷೆಯ ದಿನಾಂಕ: ಶೀಘ್ರದಲ್ಲೇ ಪ್ರಕಟಿಸಲಾಗುವುದು

ಹುದ್ದೆಗಳ ಪ್ರಾದೇಶಿಕ ಹಂಚಿಕೆ, ವಿಭಾಗವಾರು ಖಾಲಿ ಹುದ್ದೆಗಳು, ಮೀಸಲಾತಿ ವಿವರ, ಪರೀಕ್ಷಾ ಪಠ್ಯಕ್ರಮ ಹಾಗೂ ಇತರೆ ನಿಯಮಗಳ ಕುರಿತು ಸಂಪೂರ್ಣ ಮಾಹಿತಿ ಆಗಸ್ಟ್ 13ರಂದು ಪ್ರಕಟವಾಗುವ ವಿವರವಾದ ಅಧಿಸೂಚನೆಯಲ್ಲಿ ಲಭ್ಯವಾಗಲಿದೆ.
ಇದನ್ನು ನೋಡಿ : ಇಕ್ಬಾಲ್ ಅನ್ಸಾರಿ ಹೇಳಿಕೆಗೆ ತಂಗಡಗಿ ಗರಂ ಗಾಳಿಯಲ್ಲಿ ಗುಂಡು ಹೊಡಿಬೇಡಿ ಎಂದು ಕಿಡಿ

