ತ್ರಿಕೋನ ಪ್ರೇಮ ಪ್ರಕರಣಕ್ಕೆ IT ಉದ್ಯೋಗಿ ಬಲಿ? ಲೈವ್ ವಿಡಿಯೋ ಮಾಡಿ ಯುವತಿ ಸೂಸೈಡ್

ಖಾಸಗಿ ಫೋಟೋಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಕ್ಕೆ IT ಉದ್ಯೋಗಿಯಾಗಿದ್ದ ಯುವತಿ, ಲೈವ್ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಬಳ್ಳಾರಿಯಲ್ಲಿ ನಡೆದಿದೆ.
‘ಫೋಟೋ ವೈರಲ್ ಮಾಡ್ತೀನಿ’ ಎಂಬ ಬೆದರಿಕೆ?
ಬಳ್ಳಾರಿಯ ಕೌಲಬಜಾರ್ನ ನಿವಾಸಿಯಾಗಿರೋ ಫಿರ್ದೋಸ್ ಎಂಬ ಯುವತಿ ಬೆಂಗಳೂರಿನ ಖಾಸಗಿ ಐಟಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು. ಯುವತಿ ಫಿರ್ದೋಸ್, ಕೌಲಬಜಾರ್ ನಿವಾಸಿ ಅಜೀಂ ಎಂಬ ಯುವಕನನ್ನು ಪ್ರೀತಿ ಮಾಡ್ತಾ ಇದ್ಳು. ಆದ್ರೆ ಅಜೀಂನ ವರ್ತನೆಯಿಂದ ಬೇಸತ್ತ ಯುವತಿ ಫೀರ್ದೋಸ್ ಆತನಿಂದ ದೂರ ಉಳಿದಿದ್ದಳು. ಇವರ ಪ್ರೀತಿ ಬ್ರೇಕಪ್ ಆದ ನಂತರ ಯುವತಿ ಫಿರ್ದೋಸ್, ಅಜೀಂನ ಸ್ನೇಹಿತ ಸೋಹೈಲ್ ಜೊತೆ ಫಿರ್ದೋಸ್ ಸ್ನೇಹ ಬೆಳೆಸಿ, ಮದುವೆಯಾಗಲು ನಿರ್ಧರಿಸಿದ್ದಳು ಎಂದು ಹೇಳಲಾಗ್ತಿದೆ.
ಇನ್ನು ಈ ವಿಷಯ ಅದ್ಯಾವಾಗ ಮಾಜಿ ಲವ್ವರ್ ಅಜೀಂಗೆ ಗೊತ್ತಾಯ್ತೋ, ತನ್ನ ಬಳಿ ಇರುವ ಖಾಸಗಿ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ನಂತೆ. ಇದ್ರಿಂದ ಮಾನಸಿಕ ಒತ್ತಡಕ್ಕೆ ಸಿಲುಕಿದ್ದ ಯುವತಿ ಫಿರ್ದೋಸ್ ಆತ್ಮಹತ್ಯೆ ನಿರ್ಧಾರ ತೆಗೆದುಕೊಂಡಿದ್ದಳು.
ಇದನ್ನು ಓದಿ : ಪ್ರೇಯಸಿ ಕಾಲ್ ಮೇಸೆಜ್ಗೆ ರಿಪ್ಲೆ ಮಾಡದಿದ್ದಕ್ಕೆಮನನೊಂದ ಪ್ರಿಯಕರ Suicide…!

ಲೈವ್ ವಿಡಿಯೋ ಮಾಡಿ ಆತ್ಮಹತ್ಯೆ
ಇನ್ನು, ಯುವತಿ ಫಿರ್ದೋಸ್ ಆತ್ಮಹತ್ಯೆಗೂ ಮುನ್ನ ಮದುವೆ ಆಗಲು ನಿರ್ಧರಿಸಿದ್ದ ಸುಹೇಲ್ಗೆ ಕರೆ ಮಾಡಿ ತಿಳಿಸಿದ್ದಾಳೆ. ಬಳಿಕ ಲೈವ್ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಫಿರ್ದೋಸ್ ಸಾವಿಗೆ ಅಜೀಂ ಕಾರಣ ಎಂದು ಆರೋಪ
ಇನ್ನು ಫಿರ್ದೋಸ್ ಸಾವಿಗೆ ಅಜೀಂ ಕಾರಣ ಎಂದು ಮೃತ ಯುವತಿ ಪೋಷಕರು ಗಂಭೀರ ಆರೋಪ ಮಾಡ್ತಾ ಇದ್ದಾರೆ. ಪ್ರೀತಿಯ ಹೆಸರಲ್ಲಿ ತಲೆಕೆಡಿಸಿ ಅವಳನ್ನು ದುರುಪಯೋಗ ಪಡಿಸಿಕೊಂಡಿದ್ದಾನೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ರು. ಅಜೀಂ ಹಾಗೂ ಸುಹೇಲ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಯುವತಿಯ ಪೋಷಕರು ಆಗ್ರಹಿಸಿದ್ರು.
ತನಿಖೆ ಮುಂದುವರಿಕೆ
ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಜೀಂ ಹಾಗೂ ಸುಹೈಲ್ ತಲೆಮರೆಸಿಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ. ತ್ರಿಕೋನ ಪ್ರೇಮಕಥೆ ಯುವತಿಯ ಬಾಳನ್ನು ಕಸಿದುಕೊಂಡಿದ್ದು, ಯುವತಿಯ ಪೋಷಕರು ಕಣ್ಣೀರಿಡುತ್ತಿದ್ದಾರೆ.

ಇದನ್ನು ನೋಡಿ : ಇನ್ಮುಂದೆ ಅಧಿಕಾರಕ್ಕೆ ಯಾರ ಮನೆ ಬಾಗಿಲಿಗೂ ಹೋಗಲ್ಲಾ YASHVANTHRAY PATIL ಬೇಸರ




