ಪ್ರಧಾನಿ ನರೇಂದ್ರ ಮೋದಿ ಪೋಟೋಗೆ ಅವಹೇಳನಕಾರಿ ಸ್ಟಿಕ್ಕರ್ – BJP ಯಿಂದ ಪ್ರೊಟೆಸ್ಟ್.!

ಬಳ್ಳಾರಿಯಲ್ಲಿ ಸರ್ಕಾರಿ ಜಾಹೀರಾತಿನಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರಕ್ಕೆ ಸ್ಟೀಕರ್ ಅಂಟಿಸಿದ ಆರೋಪ ಕೇಳಿಬಂದಿದೆ.
ಬ್ಯಾನರ್ಗೆ ಸ್ಟಿಕ್ಕರ್ ಅಂಟಿಸಿ ಅವಹೇಳನ
ನಗರದ ಫಸ್ಟ್ಗೇಟ್ ಬಳಿಯ ಹೆಚ್ಪಿ ಪೆಟ್ರೋಲ್ ಬಂಕ್ ಬಳಿ ಘಟನೆ ನಡೆದಿದ್ದು, ಪ್ರಕರಣ ಖಂಡಿಸಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಅವಾಸ್ ಯೋಜನೆಗೆ ಸಂಬಂಧಿಸಿದ ಪ್ರಚಾರ ಬ್ಯಾನರ್ನಲ್ಲಿ ಮೋದಿ ಅವರ ಭಾವಚಿತ್ರ ಅಳವಡಿಸಲಾಗಿತ್ತು. ಈ ಬ್ಯಾನರ್ಗೆ ಸ್ಟಿಕ್ಕರ್ ಅಂಟಿಸಿ ಅವಹೇಳನ ಮಾಡಲಾಗಿದೆ ಎಂದು BJP ಆರೋಪಿಸಿದೆ.
ಇದನ್ನು ಓದಿ : ನಟ ಕಿಚ್ಚ ಸುದೀಪ್ ವಿರುದ್ದ ಅವಹೇಳನ | ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರು

‘ಜೆನ್-ಝಡ್ಗೆ ಹೆದರಿದ ಬೂಮರ್ ಮೋದಿ’
ಸ್ಟೀಕರ್ನಲ್ಲಿ ‘ಜೆನ್-ಝಡ್ಗೆ ಹೆದರಿದ ಬೂಮರ್ ಮೋದಿ’ ಎಂಬ ರೀತಿಯ ಬರಹವಿತ್ತು ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ. ಇನ್ನು ಈ ಕೃತ್ಯವನ್ನು ವಿದ್ಯಾರ್ಥಿಗಳು ಮಾಡಿಲ್ಲ. ಯೂತ್ ಕಾಂಗ್ರೆಸ್ ಕಾರ್ಯಕರ್ತರೇ ಸ್ಟೀಕರ್ ಅಂಟಿಸಿದ್ದಾರೆ ಎಂದು ಬಿಜೆಪಿ ಮುಖಂಡರು ಆರೋಪಿಸಿದ್ದಾರೆ. ಪ್ರಧಾನಿ ಮೋದಿ ಅವರಿಗೆ ಅವಮಾನ ಮಾಡಿರುವವರ ವಿರುದ್ಧ ಕೂಡಲೇ ಎಫ್ಐಆರ್ ದಾಖಲಿಸಿ, ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನು ನೋಡಿ : PRAJWAL BARRACK ಮೇಲೆ CCB ದಾಳಿ – PRIYANK KHARGE SHOCKING ಹೇಳಿಕೆ





