Dead Body Found in Mysuru : ಮೈಸೂರು ವಸ್ತು ಪ್ರದರ್ಶನ ಮೈದಾನದಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೃತದೇಹ ಪತ್ತೆಯಾಗಿದೆ.

ಮೈಸೂರು ದಸರಾದಲ್ಲಿ ಬಲೂನ್ ಮಾರಲು ಬಂದಿದ್ದ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೃತದೇಹವು ವಸ್ತು ಪ್ರದರ್ಶನ ಮೈದಾನದಲ್ಲಿ ಪತ್ತೆಯಾಗಿದ್ದು, ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಕಲಬುರಗಿ ಮೂಲದ ಬಾಲಕಿ ಬಲಿಗೆ
ಮೃತ ಬಾಲಕಿ ಸುಮಾರು 9ರಿಂದ 10 ವರ್ಷದೊಳಗಿನವಳಾಗಿದ್ದು, ಕಲಬುರಗಿ ಮೂಲದವಳೆಂದು ಗುರುತಿಸ ಲಾಗಿದೆ. ಮೈಸೂರು ದಸರಾ ಸಂದರ್ಭದಲ್ಲಿ ತನ್ನ ಪೋಷಕರ ಜೊತೆ ಬಲೂನ್ ಮಾರಲು ಬಂದಿದ್ದ ಆಕೆ, ದೊಡ್ಡಕೆರೆ ಮೈದಾನದಲ್ಲಿ ವಾಸ್ತವ್ಯ ಹೂಡಿದ್ದರು.
ಇದನ್ನು ನೋಡಿ : ಸರ್ಕಾರಿ ಶಾಲಾ ಶಿಕ್ಷಕನಿಂದಲೇ ಅಕ್ರಮ ಗಣಿಗಾರಿಕೆ- ಅಧಿಕಾರಿಗಳು ಅಕ್ರಮದಲ್ಲಿ ಶಾಮೀಲಾಗಿದ್ದಾರಾ..?

ತಾಯಿಯೊಂದಿಗೆ ಮಲಗಿದ್ದ ಬಾಲಕಿ ಬೆಳಿಗ್ಗೆ ಕಾಣೆ
ನೆನ್ನೆ (ಬುಧವಾರ) ಚಾಮುಂಡಿ ಬೆಟ್ಟದಲ್ಲಿ ನಡೆದ ಶ್ರೀ ಚಾಮುಂಡೇಶ್ವರಿ ತೆಪ್ಪೋತ್ಸವದ ನಂತರ ರಾತ್ರಿ ಬಾಲಕಿ ತನ್ನ ತಾಯಿಯೊಂದಿಗೆ ಟೆಂಟ್ನಲ್ಲಿ ಮಲಗಿದ್ದಳು. ಆದರೆ ಮುಂಜಾನೆ ಎದ್ದು ತಾಯಿ ತನ್ನ ಮಗಳನ್ನು ನೋಡಿದಾಗ ಬಾಲಕಿ ಕಾಣೆಯಾಗಿದ್ದಳು.
50 ಮೀಟರ್ ದೂರದಲ್ಲಿ ಶವ ಪತ್ತೆ
ಇನ್ನು ಕಾಣೆಯಾದ ಬಾಲಕಿಯನ್ನು ಪೋಷಕರು ಹುಡುಕಾಟ ನಡೆಸಿದಾಗ, ಟೆಂಟ್ನಿಂದ 50 ಮೀಟರ್ ದೂರದ ಮಣ್ಣಿನ ರಾಶಿಯ ಬಳಿ ಬಾಲಕಿಯ ಶವ ಪತ್ತೆಯಾಗಿದೆ ಎನ್ನಲಾಗಿದೆ. ಇನ್ನು ಬಾಲಕಿಗೆ ಲೈಂಗಿಕ ದೌರ್ಜನ್ಯ ನಡೆಸಿ ಬಳಿಕ ಕೊಲೆ ಮಾಡಲಾಗಿದೆ ಎಂಬ ಶಂಕೆ ಇದೆ.
ಇದನ್ನು ಓದಿ : ಪತಿಯಿಂದಲೇ ಪತ್ನಿಯ ಬರ್ಬರ ಹತ್ಯೆ

ಪೊಲೀಸರು ಶೋಧ ಕಾರ್ಯದಲ್ಲಿ ತೊಡಗಿದ್ದಾರೆ
ಇನ್ನು ಘಟನಾ ಸ್ಥಳಕ್ಕೆ ಶ್ವಾನದಳ ಮತ್ತು ಪೊಲೀಸ್ ಸಿಬ್ಬಂದಿ ಭೇಟಿ ನೀಡಿದ್ದು, ಘಟನೆಗೆ ಸಂಬಂಧಿಸಿದಂತೆ ತೀವ್ರ ತನಿಖೆ ಆರಂಭಿಸಲಾಗಿದೆ. ಮೈಸೂರಿನಲ್ಲಿ ದಸರಾ ಹಬ್ಬದ ಮಧ್ಯೆ ಈ ಘಟನೆ ಭಾರೀ ಚರ್ಚೆಗೆ ಕಾರಣವಾಗಿದೆ.




