Murder In Gadag : ಶೀಲ ಶಂಕಿಸಿ ಪತ್ನಿಯನ್ನು ಪತಿ ಬರ್ಬರವಾಗಿ ಹತ್ಯೆಗೈದ ದಾರುಣ ಘಟನೆ ಗದಗ ತಾಲೂಕಿನ ಬಿಂಕದಕಟ್ಟಿ ಗ್ರಾಮದಲ್ಲಿ ನಡೆದಿದೆ.

ಪತ್ನಿಯ ಭೀಕರ ಹತ್ಯೆ
ಹತ್ಯೆಯಾದ ಮಹಿಳೆಯನ್ನು ಯಲ್ಲಮ್ಮ ಅಲಿಯಾಸ್ ಸ್ವಾತಿ (37) ಎನ್ನಲಾಗಿದೆ. ಆರೋಪಿ ರಮೇಶ್ ನರಗುಂದ ಯಲ್ಲಮ್ಮನ ಪತಿ. KSRTC ಗದಗ ಡಿಪೋನಲ್ಲಿ ನಿರ್ವಾಹಕನಾಗಿ ಕೆಲಸ ಮಾಡುತ್ತಿದ್ದ ರಮೇಶ್ ಈ ಕೃತ್ಯಕ್ಕೆ ಎಸೆಗಿದ್ದಾನೆ.
ಹತ್ಯೆ ವಿವರ
ನೆನ್ನೆ (ಬುಧವಾರ) ಸಂಜೆ, ಯಲ್ಲಮ್ಮರ ತಲೆಯ ಮೇಲೆ ರಮೇಶ್ ಒಳಕಲ್ಲು ಎತ್ತಿಹಾಕಿದ ಬಳಿಕ ಚಾಕುವಿನಿಂದ ಇರಿದು ಹತ್ಯೆಗೈದಿದ್ದಾನೆ ಎನ್ನಲಾಗಿದೆ. ರಮೇಶ್ ಮತ್ತು ಯಲ್ಲಮ್ಮ ದಂಪತಿಗೆ ಮೂವರು ಮಕ್ಕಳು ಇದ್ದರು. ಕೆಲವು ವರ್ಷಗಳಿಂದ ಪತ್ನಿ ಮೇಲೆ ಶೀಲ ಶಂಕೆ ಇಟ್ಟುಕೊಂಡಿ ದ್ದ ರಮೇಶ್, ಒಂದು ವರ್ಷದ ಹಿಂದೆ ಕೂಡಾ ಯಲ್ಲಮ್ಮರನ್ನು ಕೊಲ್ಲಲು ಯತ್ನಿಸಿದ್ದ. ಆಗ ಹಿರಿಯರ ಸಮ್ಮುಖದಲ್ಲಿ ವಿವಾದ ಬಗೆಹರಿಸಲಾಗಿತ್ತು.
ಇದನ್ನು ನೋಡಿ : ಹಾಲುಣಿಸುವ ಕೇಂದ್ರ ಕಟ್ಟಡ ಸಿದ್ಧ – ಆದರೆ ಉದ್ಘಾಟನೆ ಇನ್ನೂ ಇಲ್ಲ! ಏಕೆ?

ಕುಡಿತ ಮತ್ತು ಕಿರುಕುಳ
ಇತ್ತೀಚೆಗಿನ ದಿನಗಳಲ್ಲಿ ರಮೇಶ್ ಮದ್ಯಪಾನ ಮಾಡಿ ಪತ್ನಿಗೆ ನಿಯಮಿತವಾಗಿ ಕಿರುಕುಳ ನೀಡುತ್ತಿದ್ದನೆಂದು ಸ್ಥಳೀಯರು ತಿಳಿಸಿದ್ದಾರೆ. ಶೀಲ ಶಂಕೆ, ಕುಡಿತ ಮತ್ತು ಗೃಹ ಕಲಹ ಈ ಹತ್ಯೆಗೆ ಕಾರಣಗಳಾಗಿ ಕಾಣಿಸುತ್ತಿವೆ.
ಪೊಲೀಸರಿಂದ ಪರಿಶೀಲನೆ
ಇನ್ನು ಘಟನೆಯ ನಂತರ ಗದಗ ಗ್ರಾಮೀಣ ಠಾಣೆಯ ಪೊಲೀಸರು ಹಾಗೂ ಎಸ್ಪಿ ರೋಹನ್ ಜಗದೀಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆರೋಪಿಯನ್ನು ಬಂಧಿಸಿ ತನಿಖೆ ಮುಂದುವರಿಸಲಾಗಿದೆ. ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಗತ್ಯ ಕಾನೂನು ಕ್ರಮ ಜರುಗಿಸಲಾಗುತ್ತಿದೆ.
ಇದನ್ನು ಓದಿ : Kantara ದೈವಾರಾಧನೆ ಬಳಕೆ ವಿರುದ್ಧ ಸಿಡಿದೆದ್ದ ದೈವಾರಾಧಕರು





