ಟಿ20 ಕ್ರಿಕೆಟ್ನಲ್ಲಿ Sunil Narine ಹೊಸ ದಾಖಲೆಯೊಂದನ್ನು ಬರೆದಿದ್ದಾರೆ.

ಗುರುವಾರ ಕೋಲ್ಕತ್ತಾದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಐಪಿಎಲ್ 2026 ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಸುನಿಲ್ ನರೈನ್ (Sunil Narine) ನಾಲ್ಕು ಓವರ್ ಬೌಲಿಂಗ್ ಮಾಡಿ 13 ರನ್ ನೀಡಿ 1 ವಿಕೆಟ್ ಪಡೆದರು. ತಮ್ಮ ಸ್ಪೆಲ್ನ ಕೊನೆಯ ಎಸೆತದಲ್ಲಿ ಮೊಹಮ್ಮದ್ ಶಮಿ ಅವರನ್ನು ಔಟ್ ಮಾಡುವ ಮೂಲಕ ಪಂದ್ಯದ ಏಕೈಕ ವಿಕೆಟ್ ಪಡೆದರು. ಈ ವಿಕೆಟ್ ಮೂಲಕ ಅವರು ಐಪಿಎಲ್ನಲ್ಲಿ 200 ವಿಕೆಟ್ ಪೂರ್ತಿಗೊಳಿಸಿದರು.
200 ಟಿ20 ವಿಕೆಟ್ಗಳನ್ನು ಪಡೆದ ಮೊದಲ ವಿದೇಶಿ ಆಟಗಾರ
ಈ ವಿಕೆಟ್ನೊಂದಿಗೆ ನರೈನ್ ಭಾರತದಲ್ಲಿ 200 ಟಿ20 ವಿಕೆಟ್ಗಳನ್ನು ಪಡೆದ ಮೊದಲ ವಿದೇಶಿ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈಡನ್ ಗಾರ್ಡನ್ಸ್ನಲ್ಲಿ ನಡೆದ ಈ ಪಂದ್ಯವು ಭಾರತದಲ್ಲಿ ಅವರ 183ನೇ ಟಿ20 ಪಂದ್ಯವಾಗಿತ್ತು.
ಅತಿ ಹೆಚ್ಚು ಟಿ20 ವಿಕೆಟ್ಗಳ ದಾಖಲೆ ಯಾರ ಹೆಸರಿನಲ್ಲಿದೆ?
ಇನ್ನೊಂದೆಡೆ, ಭಾರತದಲ್ಲಿ ಅತಿ ಹೆಚ್ಚು ಟಿ20 ವಿಕೆಟ್ಗಳ ದಾಖಲೆ ಯಜುವೇಂದ್ರ ಚಹಲ್ ಹೆಸರಿನಲ್ಲಿದೆ. ಚಹಲ್ 296 ವಿಕೆಟ್ಗಳನ್ನು ಪಡೆದಿದ್ದಾರೆ. ಅವರ ನಂತರ ಪಿಯೂಷ್ ಚಾವ್ಲಾ, ಭುವನೇಶ್ವರ ಕುಮಾರ್, ಅಮಿತ್ ಮಿಶ್ರಾ ಮತ್ತು ಹರ್ಷಲ್ ಪಟೇಲ್ ಇದ್ದಾರೆ.

READ THIS : SIT ತನಿಖೆ ಪೂರ್ಣ – ಮಾನಸಿಕ ಖಿನ್ನತೆಯಿಂದ ಸಿಜೆ ರಾಯ್ Suicide
ಭಾರತದಲ್ಲಿ ಅತಿ ಹೆಚ್ಚು ಟಿ20 ವಿಕೆಟ್ ಪಡೆದ ವಿದೇಶಿ ಆಟಗಾರರು
ಸುನಿಲ್ ನರೈನ್-200*
ಡ್ವೇನ್ ಬ್ರಾವೊ-190
ರಶೀದ್ ಖಾನ್-188
ಲಸಿತ್ ಮಾಲಿಂಗ-156
ಟ್ರೆಂಟ್ ಬೌಲ್ಡ್-128
ಭಾರತದಲ್ಲಿ ಅತಿ ಹೆಚ್ಚು ಟಿ20 ವಿಕೆಟ್ ಪಡೆದ ಬೌಲರ್ಗಳು
ಯಜುವೇಂದ್ರ ಚಹಲ್-296
ಪಿಯೂಷ್ ಚಾವ್ಲಾ-289
ಭುವನೇಶ್ವರ್ ಕುಮಾರ್-266
ಅಮಿತ್ ಮಿಶ್ರಾ-248

MUST WATCH : ರಾಜ್ಯಕ್ಕೆ ಮೂರನೇ ಸ್ಥಾನ ಪಡೆದ ರೋಹನ್ EXCLUSIVE ಮಾತು




