ಬೆಂಗಳೂರು ನಗರದಲ್ಲಿ ಸಂಚಲನ ಮೂಡಿಸಿದ್ದ CJ Roy ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ SIT ತನಿಖೆ ಪೂರ್ಣಗೊಂಡಿದೆ.

ಕಾನ್ಫಿಡೆಂಟ್ ಗೂಪ್ ಸಂಸ್ಥೆಯ ಮುಖ್ಯಸ್ಥರಾಗಿದ್ದ ರಾಯ್ CJ Roy ಆತ್ಮಹತ್ಯೆ ಪ್ರಕರಣದ ತನಿಖೆ ಪೂರ್ಣಗೊಂಡಿದೆ. ಮಾನಸಿಕ ಖಿನ್ನತೆಯಿಂದ ಸಿಜೆ ರಾಯ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ತೀರ್ಮಾನಕ್ಕೆ ವಿಶೇಷ ತನಿಖಾ (SIT) ತಂಡ ಬಂದಿದೆ.
ಮಾನಸಿಕ ಖಿನ್ನತೆಯಿಂದ ಸಿಜೆ ರಾಯ್ Suicide
ಆದಾಯ ತೆರಿಗೆ ಅಧಿಕಾರಿಗಳ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪಗಳ ಹಿನ್ನೆಲೆ ಸರ್ಕಾರ ಈ ಪ್ರಕರಣವನ್ನು SITಗೆ ವಹಿಸಿತ್ತು. ಇನ್ನು ತನಿಖೆ ವೇಳೆ ಹಲವು ವಿಚಾರಗಳು ಬೆಳಕಿಗೆ ಬಂದಿದ್ದವು. ಈ ಸಂಬಂಧ ಹಲವು ತಿಂಗಳ ಕಾಲ ಖಿನ್ನತೆಗೆ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಆದರೆ ಕೆಲ ತಿಂಗಳಿನಿಂದ ಚಿಕಿತ್ಸೆ ಪಡೆಯುವುದನ್ನು ನಿಲ್ಲಿಸಿದ್ದರು.

READ THIS : PUC ಫಲಿತಾಂಶದ ದಿನವೇ ವಿದ್ಯಾರ್ಥಿನಿ ನಿಗೂಢ ಸಾವು!
ನ್ಯಾಯಾಲಯಕ್ಕೆ ಚಾರ್ಚ್ಶೀಟ್ ಸಲ್ಲಿಸುವ ಸಾಧ್ಯತೆ
ಮೃತಪಡುವ ಒಂದು ತಿಂಗಳ ಹಿಂದೆಯಿಂದ ರಾಯ್ ಮಾತ್ರೆ ಸೇವನೆ ಮಾಡುತ್ತಿರಲಿಲ್ಲ. ಈ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನು ಮಾನಸಿಕ ಖಿನ್ನತೆಗೆ ನಿಖರವಾದ ಕಾರಣ ಪತ್ತೆಯಾಗಿಲ್ಲ. ಆತ್ಮಹತ್ಯೆಗೆ ಯಾವುದೇ ಒತ್ತಡವೂ ಕಾರಣವಲ್ಲಎನ್ನುವುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ. SIT ತನಿಖೆ ಪೂರ್ಣಗೊಂಡಿದ್ದು, ನ್ಯಾಯಾಲಯಕ್ಕೆ ಚಾರ್ಚ್ಶೀಟ್ ಸಲ್ಲಿಸುವ ಸಾಧ್ಯತೆಯಿದೆ.
CJ Roy ಗುಂಡು ಹಾರಿಸಿಕೊಂಡು ಆತ್ಮಹತ್ಯೆ
ಜನವರಿ 30ರಂದು ಬೆಂಗಳೂರಿನ ರಿಚ್ಮಂಡ್ ರಸ್ತೆಯಲ್ಲಿರುವ ತಮ್ಮ ಕಚೇರಿಯಲ್ಲಿ ಆದಾಯ ತೆರಿಗೆ ಅಧಿಕಾರಿಗಳ ವಿಚಾರಣೆ ನಡೆಯುತ್ತಿದ್ದ ವೇಳೆ ರಾಯ್ ತಮ್ಮ ಕೊಠಡಿಗೆ ತೆರಳಿ ಪಿಸ್ತೂಲಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು.

MUST WATCH : POLICE ಕಾನ್ಸ್ಟೇಬಲ್ಸ್ ಕುಟುಂಬಸ್ಥರ ಗೋಳು – 10 ವರ್ಷದಿಂದ ಟ್ರಾನ್ಸ್ಫರ್ ಮಾಡದ ಸರ್ಕಾರ




