IPL 2026 : ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ನಡುವೆ ಬಿಸಿಸಿಐ ಐದು ಹೊಸ ನಿಯಮಗಳನ್ನು ಜಾರಿಗೊಳಿಸಿದೆ.

IPL 2026 : ಇಂಡಿಯನ್ ಪ್ರೀಮಿಯರ್ ಲೀಗ್ 19ನೇ ಆವೃತ್ತಿಯಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಪಂದ್ಯಗಳ ಶಿಸ್ತು ಹಾಗೂ ಸಮಯಪಾಲನೆಯನ್ನು ಕಟ್ಟುನಿಟ್ಟಾಗಿ ಅನುಸರಿಸಲು ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ವಿಶೇಷವಾಗಿ ‘ಬೆಂಚ್ ಆಟಗಾರರ’ ಅನಗತ್ಯ ಓಡಾಟಕ್ಕೆ BCCI ಕಡಿವಾಣ ಹಾಕಿದೆ.
ಪ್ರಮುಖ ಹೊಸ ನಿಯಮಗಳು
ಮೈದಾನ ಪ್ರವೇಶಕ್ಕೆ ನಿರ್ಬಂಧ
ತಂಡದಲ್ಲಿ ಆಯ್ಕೆಗೊಂಡಿರುವ 16 ಆಟಗಾರರಿಗೆ (ಇಂಪ್ಯಾಕ್ಟ್ ಪ್ಲೇಯರ್ ಸೇರಿ) ಮಾತ್ರ ಮೈದಾನದ ಒಳಗೆ ಪ್ರವೇಶಕ್ಕೆ ಅನುಮತಿ. ಉಳಿದ ಆಟಗಾರರು ಡ್ರಿಂಕ್ಸ್ ತರುವುದು, ಬ್ಯಾಟ್ ನೀಡುವುದು ಅಥವಾ ಸಂದೇಶ ರವಾನಿಸುವುದಕ್ಕೂ ಮೈದಾನಕ್ಕೆ ಬರಲು ಅವಕಾಶವಿಲ್ಲ.
ಬೌಂಡರಿ ಲೈನ್ ಬಳಿ ಕೇವಲ ಐವರು
ಪಂದ್ಯದ ವೇಳೆ ಬೌಂಡರಿ ಗೆರೆಯ ಸುತ್ತ ತರಬೇತಿ ಬಿಬ್ಸ್ ಧರಿಸಿ ಓಡಾಡುವ ಆಟಗಾರರ ಸಂಖ್ಯೆಯನ್ನು ಐದಕ್ಕೆ ಮಾತ್ರ ಸೀಮಿತಗೊಳಿಸಲಾಗಿದೆ.
ಡಗೌಟ್ ನಿಯಮ ಕಡ್ಡಾಯ
ಬಿಬ್ಸ್ ಧರಿಸಿದ ಐವರು ಆಟಗಾರರನ್ನು ಹೊರತುಪಡಿಸಿ, ಉಳಿದ ಎಲ್ಲರು ತಂಡದ ಡಗೌಟ್ನಲ್ಲೇ ಇರಬೇಕು.
ಜಾಹೀರಾತು ಫಲಕಗಳ ರಕ್ಷಣೆ
ಬೌಂಡರಿ ಲೈನ್ ಮತ್ತು LED ಜಾಹೀರಾತು ಫಲಕಗಳ ನಡುವಿನ ಜಾಗದಲ್ಲಿ ಅನಗತ್ಯ ಓಡಾಟಕ್ಕೆ ನಿಷೇಧ. ಜೊತೆಗೆ ಯಾವುದೇ ಆಟಗಾರ ಅಥವಾ ಸಿಬ್ಬಂದಿ LED ಬೋರ್ಡ್ ಮುಂದೆ ಕುಳಿತುಕೊಳ್ಳುವುದಕ್ಕೂ ಅವಕಾಶವಿಲ್ಲ.

READ THIS : ಜಿಯೋ ಮಾರ್ಟ್ ವೇರ್ ಹೌಸ್ನಲ್ಲಿ ಭಾರಿ ಅಗ್ನಿ ಅವಘಡ!
ಈಗಾಗಲೇ ಜಾರಿಯಲ್ಲಿರುವ ನಿಯಮಗಳು
ಪಂದ್ಯ ದಿನದ ಅಭ್ಯಾಸ ನಿಷೇಧ
ಮ್ಯಾಚ್ ನಡೆಯುವ ದಿನ ಮುಖ್ಯ ಪಿಚ್ ಸುತ್ತ ಅಭ್ಯಾಸ ನಡೆಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಸಮವಸ್ತ್ರ ಸಂಹಿತೆ
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಆಟಗಾರರು ಸ್ಲೀವ್ಲೆಸ್ ಜೆರ್ಸಿ ಅಥವಾ ಫ್ಲಾಪಿ ಹ್ಯಾಟ್ ಧರಿಸುವಂತಿಲ್ಲ.
ಖಾಸಗಿ ವಾಹನಗಳಿಗೆ ನೋ ಎಂಟ್ರಿ
ಆಟಗಾರರು ಕ್ರೀಡಾಂಗಣಕ್ಕೆ ಕಡ್ಡಾಯವಾಗಿ ತಂಡದ ಬಸ್ ಮೂಲಕವೇ ಬರಬೇಕು. ಖಾಸಗಿ ವಾಹನ ಬಳಕೆಗೆ ಅವಕಾಶವಿಲ್ಲ.
BCCI ಹೇಳಿದ್ದೇನು..?
ಐಪಿಎಲ್ ಜಾಗತಿಕ ಮಟ್ಟದಲ್ಲಿ ದೊಡ್ಡ ಪ್ರಭಾವ ಹೊಂದಿರುವ ಟೂರ್ನಿಯಾಗಿರುವುದರಿಂದ, ಪಂದ್ಯಗಳ ಘನತೆ ಮತ್ತು ವೃತ್ತಿಪರತೆಯನ್ನು ಕಾಪಾಡಲು ಈ ಕ್ರಮಗಳು ಅಗತ್ಯ ಎಂದು ಬಿಸಿಸಿಐ ಅಭಿಪ್ರಾಯಪಟ್ಟಿದೆ. ನಿಯಮ ಉಲ್ಲಂಘನೆ ಮಾಡಿದ ತಂಡಗಳಿಗೆ ಕಠಿಣ ದಂಡ ವಿಧಿಸುವ ಸಾಧ್ಯತೆಯೂ ಇದೆ.

MUST WATCH : ಕಾರು, ಟಾಟಾ ಏಸ್ ನಡುವೆ ಮುಖಾಮುಖಿ ಡಿಕ್ಕಿ ಮೂವರಿಗೆ ಗಂಭೀರ ಗಾಯ




