ನೆಲಮಂಗಲದ ಬಳಿ ಭಾರೀ Fire Incident – ಕೋಟ್ಯಾಂತರ ರೂ. ಮೌಲ್ಯದ ವಸ್ತುಗಳು ಸುಟ್ಟು ಭಸ್ಮ.

Fire Incident : ನೆಲಮಂಗಲ ತಾಲೂಕಿನ ಅಡಕಮಾರನಹಳ್ಳಿ ಸಮೀಪದ ಆಂಜನೇಯ ದೇವಸ್ಥಾನ ಬಳಿ ಇರುವ ರಿಲಯನ್ಸ್ಗೆ ಬಾಡಿಗೆಗೆ ನೀಡಿದ್ದ ಜಿಯೋ ಮಾರ್ಟ್ ವೇರ್ ಹೌಸ್ನಲ್ಲಿ ಏಕಾಏಕಿ ಭಾರೀ ಬೆಂಕಿ ಕಾಣಿಸಿಕೊಂಡಿದ್ದು, ಧಗಧಗನೇ ಹೊತ್ತಿ ಉರಿದಿರುವ ಘಟನೆ ನಡೆದಿದೆ.
ಸಂಪೂರ್ಣ ವೇರ್ ಹೌಸ್ ಸುಟ್ಟು ಭಸ್ಮ
ಇನ್ನು ರಾತ್ರಿ ಸುಮಾರು 10.40ರ ವೇಳೆಗೆ ಏಕಾಏಕಿ ವೇರ್ ಹೌಸ್ನಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡಿರುವ ಶಂಕೆ ವ್ಯಕ್ತವಾಗ್ತಿದೆ. ಇನ್ನು ಕ್ಷಣ ಕ್ಷಣಕ್ಕೂ ಬೆಂಕಿಯ ಜ್ವಾಲೆ ವ್ಯಾಪಿಸಿದ್ದು, ಸಂಪೂರ್ಣ ವೇರ್ ಹೌಸ್ ಸುಟ್ಟು ಭಸ್ಮವಾಗಿದೆ. ಸುಮಾರು ಒಂದೂವರೆ ಎಕರೆ ವ್ಯಾಪ್ತಿಯಲ್ಲಿ ನಿರ್ಮಾಣಗೊಂಡಿದ್ದ ಈ ಜಿಯೋ ಮಾರ್ಟ್ ಗೋದಾಮು ಹಾಗೂ ಅದರಲ್ಲಿದ್ದ ವಸ್ತುಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದ್ದು, ಬೆಂಕಿಯ ತೀವ್ರತೆಗೆ ಇಡೀ ಕಟ್ಟಡವೇ ಗುರುತಿಸಲಾಗದ ಮಟ್ಟಿಗೆ ಸುಟ್ಟು ಹೋಗಿದೆ.
READ THIS : ಆಟವಾಡುತ್ತಾ ಮೂರನೇ ಮಹಡಿಯಿಂದ ಕೆಳಗೆ ಬಿದ್ದ ಮಗು – ಮಗಳ ಸ್ಥಿತಿ ಕಂಡು ತಾಯಿ ಮೂರ್ಛೆ

Fire Incident – 20 ಕೋಟಿ ವೆಚ್ಚದ ವೇರ್ ಹೌಸ್ ಬೆಂಕಿಗಾಹುತಿ
ಇನ್ನು ಈ ಗೋದಾಮು ಪದ್ಮರಾಜೇಂದ್ರ ಎಂಬುವರಿಗೆ ಸೇರಿದ್ದು, ಸುಮಾರು ಐದು ವರ್ಷಗಳ ಹಿಂದೆ 20 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿತ್ತು. ಇತ್ತೀಚೆಗೆ ಇದನ್ನು ರಿಲಯನ್ಸ್ ಸಂಸ್ಥೆಯ ಜಿಯೋ ಮಾರ್ಟ್ಗೆ ಬಾಡಿಗೆಗೆ ನೀಡಲಾಗಿತ್ತು ಎನ್ನಲಾಗಿದೆ.
ಇನ್ನು ವಿಷಯ ತಿಳಿದು ನೆಲಮಂಗಲ ಅಗ್ನಿಶಾಮಕ ದಳ ಸಿಬ್ಬಂದಿ ಒಟ್ಟು 10 ಅಗ್ನಿಶಾಮಕ ವಾಹನಗಳೊಂದಿಗೆ ಬೆಂಕಿ ನಂದಿಸುವ ಕಾರ್ಯ ಮಾಡಿದ್ರು. ಇನ್ನು ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ, ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.
MUST WATCH : ಪರಂ ನೇತೃತ್ವದಲ್ಲಿ ಜನಸಂಪರ್ಕ ಸಭೆ – ಅಧಿಕಾರಿಗಳಿಗೆ ಕ್ಲಾಸ್ ತಗೊಂಡ ಸಚಿವರು..!





