Bangalore : ನಗರದ ನಾಯಂಡಳ್ಳಿಯಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ.

ಆಟವಾಡುತ್ತಾ ಮೂರನೇ ಮಹಡಿಯಿಂದ ಬಿದ್ದು ಒಂದೂವರೆ ವರ್ಷದ ಮಗು ಗಂಭೀರವಾಗಿ ಗಾಯಗೊಂಡಿರುವ ದಾರುಣ ಘಟನೆ Bangalore ನ ನಾಯಂಡಳ್ಳಿಯಲ್ಲಿ ನಡೆದಿದೆ.
ಆಯತಪ್ಪಿ 3ನೇ ಮಹಡಿಯಿಂದ ಬಿದ್ದ ಮಗು!
ಮಗು ಮಹಡಿಯಿಂದ ಕೆಳಗೆ ಬಿದ್ದಿರುವ ವಿಡಿಯೋ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಏಪ್ರಿಲ್6ರಂದು ಈ ಘಟನೆ ನಡೆದಿದೆ. ಒಂದೂವರೆ ವರ್ಷದ ಹೆಣ್ಣು ಮಗು ತನ್ನ ಮನೆಯ ಮೂರನೇ ಮಹಡಿಯ ಕೋಣೆಯಲ್ಲಿ ಆಟವಾಡುತ್ತಿತ್ತು. ಕಿಟಕಿಯ ಬಳಿ ಇದ್ದ ಮಗು ಆಯತಪ್ಪಿ ಕೆಳಗೆ ಬಿದ್ದಿದೆ. ಪರಿಣಾಮ ಮಗುವಿನ ತಲೆಗೆ ತೀವ್ರ ಪೆಟ್ಟಾಗಿ ರಕ್ತಸ್ರಾವವಾಗಿದೆ.
READ THIS : ಇಂದು ದ್ವಿತೀಯ PUC ರಿಸಲ್ಟ್ – ಎಷ್ಟು ಗಂಟೆಗೆ ಬರುತ್ತೆ ಫಲಿತಾಂಶ?

ಮಗಳ ಸ್ಥಿತಿ ಕಂಡು ಮೂರ್ಛೆ ಹೋದ ತಾಯಿ
ಮಗು ಬಿದ್ದ ವಿಚಾರ ತಿಳಿದು ತಾಯಿ ಕೂಗಿಕೊಂಡು ಕೆಳಗೆ ಓಡಿಬಂದಿದ್ದಾರೆ. ತಮ್ಮ ಮಗುವನ್ನು ನೋಡಿದ ತಾಯಿಗೆ ಆಘಾತವಾಗಿದೆ. ಅವರು ರಸ್ತೆ ಮಧ್ಯದಲ್ಲೇ ಕುಸಿದು ಬಿದ್ದು ಮೂರ್ಛೆ ಹೋದರು. ನೆರೆಯವರು ತಕ್ಷಣ ತಾಯಿ ಮತ್ತು ಮಗು ಇಬ್ಬರನ್ನೂ ಆಸ್ಪತ್ರೆಗೆ ಸಾಗಿಸಿದರು. ತಾಯಿಗೆ ಪ್ರಥಮ ಚಿಕಿತ್ಸೆ ನೀಡಲಾಯಿತು. ಅವರು ಈಗ ಆರೋಗ್ಯವಾಗಿದ್ದಾರೆ.
ICU ಯಲ್ಲಿ ಚಿಕಿತ್ಸೆ
ಸದ್ಯ ಮಗು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಾವು – ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದೆ. ಮಗುವಿನ ಗಂಭೀರ ಸ್ಥಿತಿ ಕಂಡು ತಂದೆ-ತಾಯಿ ಕಣ್ಣೀರಾಕುತ್ತಿದ್ದಾರೆ.
MUST WATCH : ಬೆಂಗಳೂರು ಪೊಲೀಸರ ಭರ್ಜರಿ ರೇಡ್ – 200ಕ್ಕೂ ಹೆಚ್ಚು ವಿದೇಶಿ ಪ್ರಜೆಗಳು ಪತ್ತೆ..!





