ದ್ವೀತಿಯ PUC ಫಲಿತಾಂಶ ಬಿಡುಗಡೆಗೆ ಕೌಂಟ್ ಡೌನ್ ಶುರುವಾಗಿದೆ.

2026ನೇ ಸಾಲಿನ ದ್ವಿತೀಯ ಪಿಯುಸಿ (2nd PUC) ಪರೀಕ್ಷೆಯ ಫಲಿತಾಂಶ ಇಂದು ಮಧ್ಯಾಹ್ನ 3 ಗಂಟೆಗೆ ಪ್ರಕಟವಾಗಲಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದು, ಫಲಿತಾಂಶವನ್ನು ಇಂದು ನಿಗದಿತ ಸಮಯಕ್ಕೆ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಮಧ್ಯಾಹ್ನ 3ಕ್ಕೆ ಫಲಿತಾಂಶ ಪ್ರಕಟ
ಫೆಬ್ರವರಿ 28ರಿಂದ ಮಾರ್ಚ್ 17ರವರೆಗೆ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಗೆ ಒಟ್ಟು 7,10,363 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ರಾಜ್ಯದ 1217 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದ್ದು, ಇಂದು ಅವರ ಭವಿಷ್ಯ ನಿರ್ಧಾರವಾಗಲಿದೆ.

ರಿಸಲ್ಟ್ ಚೆಕ್ ಮಾಡೋದು ಹೇಗೆ?
ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಸುಲಭವಾಗಿ ಆನ್ಲೈನ್ನಲ್ಲಿ ವೀಕ್ಷಿಸಬಹುದು:
- ಅಧಿಕೃತ ವೆಬ್ಸೈಟ್: karresults.nic.in ಗೆ ಭೇಟಿ ನೀಡಿ
- ‘Karnataka 2nd PUC Result 2026’ ಲಿಂಕ್ ಕ್ಲಿಕ್ ಮಾಡಿ
- ರಿಜಿಸ್ಟ್ರೇಶನ್ ಸಂಖ್ಯೆ ಮತ್ತು ಜನ್ಮ ದಿನಾಂಕ ನಮೂದಿಸಿ
- ‘Submit’ ಕ್ಲಿಕ್ ಮಾಡಿದ ಬಳಿಕ ಅಂಕಪಟ್ಟಿ ಪಡೆಯಿರಿ
ಇದಲ್ಲದೆ:
- ಕರ್ನಾಟಕ ಒನ್ ಮೊಬೈಲ್ ಆಪ್ನಲ್ಲಿ ಫಲಿತಾಂಶ ಲಭ್ಯ
- ವಿದ್ಯಾರ್ಥಿಗಳ ಮೊಬೈಲ್ಗೆ SMS ಮೂಲಕ ಮಾಹಿತಿ
- ಮೊದಲ ಬಾರಿಗೆ **ಡಿಜಿಲಾಕರ್ (digilocker.gov.in)**ನಲ್ಲೂ ಫಲಿತಾಂಶ ಲಭ್ಯವಾಗಲಿದೆ.
READ THIS : ಸಿಎಸ್ಕೆ ಸತತ ಸೋಲು – DC ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸುತ್ತಾ CSK!

ಸಂಜೆ 6:15ಕ್ಕೆ ಸುದ್ದಿಗೋಷ್ಠಿ
ಫಲಿತಾಂಶ ಪ್ರಕಟವಾದ ಬಳಿಕ ಸಂಜೆ 6:15ಕ್ಕೆ ಸಚಿವರು ಸುದ್ದಿಗೋಷ್ಠಿ ನಡೆಸಲಿದ್ದಾರೆ. ಇದೇ ಮೊದಲ ಬಾರಿಗೆ ಫಲಿತಾಂಶದ ನಂತರ ಮಂಡಳಿಯ ಕಚೇರಿಯಲ್ಲಿ ಅಧಿಕೃತವಾಗಿ ಸುದ್ದಿಗೋಷ್ಠಿ ನಡೆಯಲಿದೆ.
ಟಾಪರ್ಗಳ ಪಟ್ಟಿ ಕೂಡ ಪ್ರಕಟ
ಇನ್ನು ಫಲಿತಾಂಶದೊಂದಿಗೆ ವಿದ್ಯಾರ್ಥಿಗಳ ಅಂಕಗಳು, ಶೇಕಡಾವಾರು ಹಾಗೂ ಟಾಪರ್ಗಳ ಪಟ್ಟಿ ಕೂಡ ಬಿಡುಗಡೆ ಆಗಲಿದೆ. ಇದು karresults.nic.in ಹಾಗೂ kseab.karnataka.gov.in ವೆಬ್ಸೈಟ್ಗಳಲ್ಲಿ ಲಭ್ಯವಾಗಲಿದೆ.

ಕಡಿಮೆ ಅಂಕ ಬಂದರೂ ಚಿಂತೆಯಿಲ್ಲ
ಈ ವರ್ಷವೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ನಿರೀಕ್ಷಿತ ಫಲಿತಾಂಶ ಬಾರದ ವಿದ್ಯಾರ್ಥಿಗಳು ಧೃತಿಗೆಡಬೇಕಿಲ್ಲ. ಹೊಸ ಮೂರು ಪರೀಕ್ಷೆಗಳ ವ್ಯವಸ್ಥೆಯಡಿ ಮತ್ತೆರಡು ಬಾರಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗ್ತಿದೆ. (Exam 1, 2, & 3) ನಿಮಗೆ ಅಂಕ ಸುಧಾರಿಸಿಕೊಳ್ಳಲು ಹಾಗೂ ಅನುತ್ತೀರ್ಣರಾದ ವಿಷಯಗಳನ್ನು ಪಾಸು ಮಾಡಲು ಇದು ಉತ್ತಮ ಅವಕಾಶವಾಗಿದೆ.
ಫಲಿತಾಂಶದಲ್ಲಿ ಕಡಿಮೆ ಅಂಕ ಬಂದಿದೆ ಎನಿಸಿದ್ರೆ ಅಂಕಗಳನ್ನು ಹೆಚ್ಚಿಸಿಕೊಳ್ಳಲು ಈ ಪರೀಕ್ಷೆ ಬರೆಯಬಹುದು. ಎರಡೂ ಪರೀಕ್ಷೆಗಳಲ್ಲಿ ಯಾವುದರಲ್ಲಿ ಹೆಚ್ಚು ಅಂಕ ಬರುತ್ತದೆಯೋ ಅದು ಪರಿಗಣನೆಗೆ ತೆಗೆದುಕೊಳ್ಳಬಹುದು.
MUST WATCH : ಮನೆಯಲ್ಲಿದ್ದ CYLINDER ಏಕಾಏಕಿ BLAST – ಸ್ಫೋಟದ ತೀವ್ರತೆಗೆ ಬೆಚ್ಚಿಬಿದ್ದ ಜನತೆ..!




