IPL ನಲ್ಲಿ ಸತತ ಸೋಲುಗಳಿಂದ ಕಂಗೆಟ್ಟ CSK – ಮುಂದಿನ ಪಂದ್ಯಗಳಲ್ಲಾದ್ರೂ ಗೆಲುವಿನ ಖಾತೆ ತೆರೆಯುತ್ತಾ.?

IPL ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾದ ಮತ್ತು ಐದು ಬಾರಿ ಚಾಂಪಿಯನ್ ಆಗಿರುವ ಚೆನ್ನೈ ಸೂಪರ್ ಕಿಂಗ್ಸ್, ಈ ಸೀಸನ್ನಲ್ಲಿ ನಿರೀಕ್ಷೆಗೂ ಮೀರಿ ಕಳಪೆ ಪ್ರದರ್ಶನ ನೀಡುತ್ತಿದೆ. ಕಳಪೆ ಪ್ರದರ್ಶನದಿಂದಾಗಿ ಸಿಎಸ್ಕೆ ಆಡಿದ ಮೂರು ಪಂದ್ಯಗಳನ್ನ ಸೋತಿದ್ದು, ಸರಣಿ ಸೋಲುಗಳಿಂದ ಅಂಕಪಟ್ಟಿಯ ಕೊನೆಯ ಸ್ಥಾನದಲ್ಲಿದೆ.
ರುತುರಾಜ್ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತತ್ತರ
ಐಪಿಎಲ್ನಲ್ಲಿ ಭರ್ಜರಿ ದಾಖಲೆ ಹೊಂದಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಬಾರಿ ತನ್ನ ಲಯ ಕಳೆದುಕೊಂಡಂತೆ ಕಾಣುತ್ತಿದೆ. ರುತುರಾಜ್ ಗಾಯಕ್ವಾಡ್ ನಾಯಕತ್ವದಲ್ಲಿ ತಂಡ ಕಣಕ್ಕಿಳಿದರೂ, ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಲು ವಿಫಲವಾಗಿದೆ. ಸರಣಿ ಸೋಲುಗಳು ಅಭಿಮಾನಿಗಳಲ್ಲಿ ಆತಂಕ ಹೆಚ್ಚಿಸಿವೆ. ಈ ಬಾರಿಯ ಐಪಿಎಲ್ನಲ್ಲಿ ಸಿಎಸ್ಕೆ ಇನ್ನು ಗೆಲುವಿನ ಖಾತೆ ಓಪನ್ ಮಾಡದೆ ಅಭಿಮಾನಿಗಳಲ್ಲಿ ಬೇಸರ ತರಿಸಿದೆ.

READ THIS : ಬಾಗಲಕೋಟೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಪ್ರೇಮಿಗಳ ದುರಂತ ಅಂತ್ಯ! ಆಗಿದ್ದೇನು..?
ತಂಡದ ಸೋಲಿಗೆ ಪ್ರಮುಖ ಕಾರಣವೇನು?
ಇನ್ನು ತಂಡದ ಸೋಲಿಗೆ ಪ್ರಮುಖ ಕಾರಣ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲಿಯೂ ಸ್ಥಿರತೆ ಕಾಣದಿರುವುದು. ಟಾಪ್ ಆರ್ಡರ್ ಬ್ಯಾಟರ್ಸ್ಗಳು ರನ್ಗಳಿಸಲು ವಿಫಲವಾಗುತ್ತಿದ್ದು, ಮಧ್ಯಮ ಕ್ರಮದಲ್ಲೂ ನಿರಂತರತೆ ಕಾಣುತ್ತಿಲ್ಲ. ಇತ್ತ ಬೌಲಲ್ಗಳು ಕೂಡ ಪವರ್ ಪ್ಲೇ ಮತ್ತು ಡೆತ್ ಓವರ್ಗಳಲ್ಲಿ ರನ್ಗಳನ್ನ ನಿಯಂತ್ರಿಸಲು ಸಾದ್ಯವಾಗುತ್ತಿಲ್ಲ.
ಡೆಲ್ಲಿ ವಿರುದ್ದದ ಪಂದ್ಯದಲ್ಲಿ ಸಿಎಸ್ಕೆ ಗೆಲುವಿನ ಖಾತೆ ತೆರೆಯುತ್ತಾ.?
ಇನ್ನೂ ಗಾಯದ ಕಾರಣದಿಂದ ಎಂಎಸ್ ಧೋನಿ ಆರಂಭಿಕ ಪಂದ್ಯಗಳಲ್ಲಿ ಆಡದಿರುವುದು ತಂಡಕ್ಕೆ ಹಿನ್ನಡೆಯಾಗಿದೆ ಎನ್ನಲಾಗುತ್ತಿದೆ. ಅವರ ಅನುಭವದ ಕೊರತೆ ತಂಡದ ಪ್ರದರ್ಶನದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂಬ ಅಭಿಪ್ರಾಯವೂ ಕೇಳಿಬರುತ್ತಿದೆ. ಮುಂದಿನ ಪಂದ್ಯದಲ್ಲಿ ಸಿಎಸ್ಕೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಏಪ್ರಿಲ್ 11ರಂದು ಕಣಕ್ಕಿಳಿಯಲಿದ್ದು, ಈ ಬಾರಿ ಸಿಎಸ್ಕೆ ತಂಡ ತನ್ನ ತಪ್ಪುಗಳನ್ನು ಸರಿಪಡಿಸಿಕೊಂಡು ಗೆಲುವಿನ ಹಾದಿಗೆ ಮರಳುತ್ತಾ ಎಂಬುದನ್ನು ಕಾದು ನೋಡಬೇಕಿದೆ.

MUST WATCH : BJP ಮುಖಂಡನಿಂದ ರೌಡಿಸಂ? – ಕಾರು ಗುದ್ದಿ, ಸಹಚರರಿಂದ ಅಟ್ಯಾಕ್..!




