ಪ್ರೇಮಿ ಜತೆ ಜಗಳದಿಂದ ನೊಂದು ಯುವತಿ Suicide – ಸುದ್ದಿ ತಿಳಿದು ಪ್ರಿಯಕರನೂ ನೇಣಿಗೆ.

ಕ್ಷುಲಕ ಕಾರಣಕ್ಕೆ ಪ್ರೇಮಿಗಳಿಬ್ಬರೂ ದುರಂತ ಅಂತ್ಯಕಂಡಿರುವ ದಾರುಣ ಘಟನೆ ಬಾಗಲಕೋಟೆ (Bagalkote) ಜಿಲ್ಲೆಯಲ್ಲಿ ನಡೆದಿದೆ.
ಕ್ಷುಲ್ಲಕ ಕಾರಣಕ್ಕೆ ಪ್ರೇಮಿಗಳ ದುರಂತ ಅಂತ್ಯ
ರಬಕವಿ ಬನಹಟ್ಟಿ ತಾಲೂಕಿನ ಅಸಂಗಿ ಗ್ರಾಮ ಹಾಗೂ ಬನಹಟ್ಟಿ ನಗರದಲ್ಲಿ ಪ್ರೇಮಿಗಳು ಸಾವಿಗೆ ಶರಣಾಗಿದ್ದಾರೆ. ಸಾವಿಗೀಡಾದ ಪ್ರೇಮಿಗಳನ್ನು 19 ವರ್ಷದ ಪವಿತ್ರಾ ಹಾಗೂ 20 ವರ್ಷದ ಕಾರ್ತಿಕ್ ಎಂದು ಗುರುತಿಸಲಾಗಿದೆ. ಮೃತ ಕಾರ್ತಿಕ್ ಬಾಗಲಕೋಟೆ ಜಿಲ್ಲೆ ರಬಕವಿ ಬನಹಟ್ಟಿ ತಾಲೂಕಿನ ಅಸಂಗಿ ಗ್ರಾಮದವನಾಗಿದ್ದು, ಪವಿತ್ರಾ ಬನಹಟ್ಟಿಯ ಕೆ ಹೆಚ್ ಡಿ ಸಿ ಕಾಲೋನಿ ನಿವಾಸಿಯಾಗಿದ್ದಳು.
READ THIS : Pavagada|ಭೀಕರ ಅಪಘಾತದಲ್ಲಿ ಜೆಡಿಎಸ್ನ ಮಾಜಿ ಅಧ್ಯಕ್ಷ ಸಾವು!

ಪ್ರೇಯಸಿ Suicide – ಮನನೊಂದು ಪ್ರಿಯಕರನೂ ನೇಣಿಗೆ ಶರಣು
ನಿನ್ನೆ ಪ್ರೇಮಿಗಳಿಬ್ಬರ ನಡುವೆ ವೈಮನಸ್ಸಿನಿಂದ ಜಗಳ ನಡೆದಿದ್ದು, ಮನನೊಂದು ಪವಿತ್ರಾ ಮನೆಯಲ್ಲಿ ನೇಣು ಬಿಗಿದುಕೊಂಡು Suicide ಮಾಡಿಕೊಂಡಿದ್ದಾಳೆ. ಇನ್ನು ಈ ವಿಷಯ ತಿಳಿದು ಆಘಾತಗೊಂಡ ಪ್ರಿಯಕರ ಕಾರ್ತಿಕ್ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಪ್ರಕರಣ ದಾಖಲು
ಘಟನೆಯ ಮಾಹಿತಿ ತಿಳಿದ ತಕ್ಷಣ ಬನಹಟ್ಟಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನು ಈ ಘಟನೆಯಿಂದಾಗಿ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
MUST WATCH : ಆಕಸ್ಮಿಕ ಬೆಂಕಿಗೆ ಹೊತ್ತಿ ಉರಿದ ಗುಡಿಸಲು – ಗುಡಿಸಲಿನಲ್ಲಿದ್ದ ವಸ್ತುಗಳು ಸುಟ್ಟು ಕರಕಲು..!





