ಪಾವಗಡದಲ್ಲಿ ಭೀಕರ Accident – ಜೆಡಿಎಸ್ನ ಮಾಜಿ ಗ್ರಾಪಂ ಅಧ್ಯಕ್ಷ ದಾರುಣ ಸಾವು.

ಮಡಕಶಿರಾ–ದೊಮ್ಮತ್ತಮರಿ ರಸ್ತೆಯಲ್ಲಿ ಟೆಂಪೋ ಹಾಗೂ ದ್ವಿಚಕ್ರ ವಾಹನದ ನಡುವೆ ಭೀಕರ Accident ಸಂಭವಿಸಿದ್ದು, ಅಪಘಾತದಲ್ಲಿ ಪಾವಗಡ ತಾಲೂಕು ವ್ಯಾಪ್ತಿಯ ವಿರೂಪ ಸಮುದ್ರ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಹಾಗೂ ಜೆಡಿಎಸ್ ಮುಖಂಡರಾದ ರವಿ ಅವರು ಸಾವನ್ನಪ್ಪಿದ್ದಾರೆ.
ದುಖಃದ ವಾತಾವರಣ ನಿರ್ಮಾಣ
ಮೃತ ರವಿ ಅವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಅವರ ಅಕಾಲಿಕ ನಿಧನದಿಂದ ಕುಟುಂಬಸ್ಥರು, ಬಂಧುಗಳು ಮತ್ತು ಸ್ಥಳೀಯರಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ.
READ THSI : ಕಲಬುರಗಿ ಶರಣಬಸವೇಶ್ವರ ರಥೋತ್ಸವ ವೇಳೆ ದುರಂತ!

Accident ನಲ್ಲಿ ಸಾವು -ಜೆಡಿಎಸ್ ಮುಖಂಡರಿಂದ ಸಂತಾಪ
ಇನ್ನು ರವಿ ಅವರ ನಿಧನಕ್ಕೆ ಮಾಜಿ ಶಾಸಕ ಕೆ.ಎಂ. ತಿಮ್ಮರಾಯಪ್ಪ, ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ. ಅಂಜಿನಪ್ಪ, ಮುಖಂಡರಾದ ಬಲರಾಮ್ ರೆಡ್ಡಿ, ಮನು ಮಹೇಶ್, ಜಿಯೋ ವೆಂಕಟೇಶ್, ವಸಂತ್ ಕುಮಾರ್ ಸೇರಿದಂತೆ ಹಲವು ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಸಂತಾಪ ಸೂಚಿಸಿದ್ದಾರೆ.
MUST WATCH : ತಮಿಳುನಾಡಿನ ಪ್ರಕರಣದಲ್ಲಿ ಕೋರ್ಟ್ ಕೊಟ್ಟ ತೀರ್ಪು- ಪೊಲೀಸರೇ ಆರೋಪಿಗಳಾದ ಕಥೆ




