Kalburgi : ಜಾತ್ರೆಯ ರಥೋತ್ಸವದ ವೇಳೆ ರಥ ಹರಿದು ವ್ಯಕ್ತಿ ದಾರುಣ ಸಾವು.

ರಥದ ಚಕ್ರದಡಿ ಸಿಲುಕಿ ಭಕ್ತನೋರ್ವ ಭೀಕರವಾಗಿ ದುರ್ಮರಣಕ್ಕೀಡಾದ ಘಟನೆ Kalburgi ತಾಲೂಕಿನ ಹಾಗರಗುಂಡಗಿ ಗ್ರಾಮದಲ್ಲಿ ನಡೆದಿದೆ.
ಆಗಿದ್ದೇನು..?
ಹಾಗರಗುಂಡಗಿ ಗ್ರಾಮದ ನಿವಾಸಿ ವಿನೋದ ರೆಡ್ಡಿ(49) ಮೃತ ದುರ್ದೈವಿಯಾಗಿದ್ದಾರೆ. ಪ್ರತಿವರ್ಷದಂತೆ ಗ್ರಾಮದಲ್ಲಿ ಶ್ರೀ ಶರಣಬಸವೇಶ್ವರ ದೇವರ ರಥೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿತ್ತು. ಸಾವಿರಾರು ಭಕ್ತರು ಈ ಜಾತ್ರೆಗೆ ಆಗಮಿಸಿ ಭಕ್ತಿಭಾವದಿಂದ ರಥವನ್ನು ಎಳೆಯುತ್ತಿದ್ದರು.

READ THIS : Iran-America War|ಕದನ ವಿರಾಮ ಘೋಷಿಸಿ ಮಂಡಿಯೂರಿದ್ರಾ ಟ್ರಂಪ್?
ಭಕ್ತನ ತೊಡೆ ಮೇಲೆ ಹರಿದ ಚಕ್ರ!
ರಥ ಎಳೆಯುವ ಸಂದರ್ಭದಲ್ಲಿ ಭಕ್ತರ ನೂಕುನುಗ್ಗಲಿನಲ್ಲಿ ಮೃತ ವಿನೋದ ರೆಡ್ಡಿ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ದುರದೃಷ್ಟವಶಾತ್ ಚಲಿಸುತ್ತಿದ್ದ ರಥದ ಬೃಹತ್ ಚಕ್ರವು ನೇರವಾಗಿ ವಿನೋದ ರೆಡ್ಡಿ ತೊಡೆಯ ಮೇಲಿಂದ ಹರಿದು ಹೋಗಿದೆ. ಇನ್ನು ರಥದ ಚಕ್ರದಡಿ ಸಿಲುಕಿದ ಪರಿಣಾಮ ತೀವ್ರ ರಕ್ತಸ್ರಾವದಿಂದ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ತನಿಖೆ ಪ್ರಾರಂಭ
ಕಣ್ಣೆದುರೇ ನಡೆದ ಈ ಭೀಕರ ಅಪಘಾತದಿಂದಾಗಿ ಜಾತ್ರೆಗೆ ಬಂದಿದ್ದ ಭಕ್ತರು ದಿಕ್ಕೆಟ್ಟು ಓಡಿದ್ದು, ಇಡೀ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಘಟನೆಯ ಮಾಹಿತಿ ತಿಳಿದು ಫರಹತಾಬಾದ್ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

MUST WATCH : ಬೆಂಗಳೂರಿನಲ್ಲಿ ಮತ್ತೊಂದು SMUGGLING ಕೇಸ್ – 5 ಕೋಟಿ ಚಿನ್ನ ಸೀಜ್, ಐವರ ಬಂಧನ..!




