Kalburgi | ಪರಿಹಾರ ನೀಡಲು ವಿಳಂಬ – ಡಿಸಿ, ಎಸಿ ಕಾರುಗಳು ಜಪ್ತಿ!

ಭೂಸ್ವಾಧೀನ ಪರಿಹಾರ ನೀಡಲು ವಿಳಂಬ ಮಾಡಿದ ಹಿನ್ನೆಲೆಯಲ್ಲಿ Kalburgi ಯಲ್ಲಿ ಡಿಸಿ, ಎಡಿಸಿ ಹಾಗೂ ಎಸಿ ಅವರ ಸರ್ಕಾರಿ ಕಾರುಗಳನ್ನು ಜಪ್ತಿ ಮಾಡಲಾಗಿದೆ. ಜಿಲ್ಲಾ ನ್ಯಾಯಾಲಯದ ಆದೇಶದಂತೆ ಕೋರ್ಟ್ ಸಿಬ್ಬಂದಿ ಅಧಿಕಾರಿಗಳ ಕಾರುಗಳನ್ನು ಜಪ್ತಿ ಮಾಡಿದ್ದಾರೆ.
ಇದನ್ನು ಓದಿ : Kempegowda ವಿಮಾನ ನಿಲ್ದಾಣದಲ್ಲಿ Hydrponic ಗಾಂಜಾ ಜಪ್ತಿ..!!

ಪರಿಹಾರ ಸಿಗದ ಹಿನ್ನಲರ ನ್ಯಾಯಾಲಯದ ಮೊರೆ
ನಂದಿಕೂರ ಗ್ರಾಮದಲ್ಲಿ ಕೊಳಚೆ ನೀರು ಶುದ್ಧೀಕರಣ ಘಟಕ ನಿರ್ಮಾಣಕ್ಕಾಗಿ ರೈತರ ಜಮೀನು ಭೂಸ್ವಾಧೀನ ಮಾಡಲಾಗಿತ್ತು. ನಂದಿಕೂರ ಗ್ರಾಮದ ರೈತ ಪ್ರಕಾಶ್ ಮಲಕಪ್ಪ ಅವರ ಎರಡು ಎಕರೆ ಜಮೀನು 2009ರಲ್ಲೇ ಸ್ವಾಧೀನವಾಗಿತ್ತು. ಆದರೆ ಸೂಕ್ತ ಪರಿಹಾರ ಸಿಗದ ಹಿನ್ನೆಲೆಯಲ್ಲಿ 2018ರಲ್ಲಿ ರೈತ ನ್ಯಾಯಾಲಯದ ಮೊರೆ ಹೋಗಿದ್ದರು.

ಡಿಸಿ, ಎಸಿ ಕಾರುಗಳು ಜಪ್ತಿ!
ಭೂಸ್ವಾಧೀನವಾದ ಜಮೀನಿಗೆ ಸುಮಾರು 8 ಕೋಟಿ ರೂಪಾಯಿ ಪರಿಹಾರ ನೀಡಬೇಕಿದ್ದು, ಈವರೆಗೆ ಕೇವಲ 10 ಲಕ್ಷ ರೂಪಾಯಿ ಮಾತ್ರ ಪರಿಹಾರ ನೀಡಲಾಗಿದೆ. ಬಾಕಿ ಪರಿಹಾರ ಪಾವತಿಯಲ್ಲಿ ವಿಳಂಬವಾದ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದಂತೆ ಡಿಸಿ, ಎಡಿಸಿ ಹಾಗೂ ಎಸಿ ಅವರ ಸರ್ಕಾರಿ ವಾಹನಗಳನ್ನು ಕೋರ್ಟ್ ಸಿಬ್ಬಂದಿ ಜಪ್ತಿ ಮಾಡಿದ್ದಾರೆ.
ಇದನ್ನು ನೋಡಿ : ಕೂಲಿ ಸಿಗದೇ ಕಾರ್ಮಿಕರ ಕಣ್ಣೀರು – ಅಧಿಕಾರಿಗಳಿಗೆ KHANDRE ಖಡಕ್ ಎಚ್ಚರಿಕೆ




