Iran-America ಯುದ್ಧಕ್ಕೆ ಬ್ರೇಕ್ : ಪಾಕಿಸ್ಥಾನ ಮಧ್ಯಸ್ಥಿಕೆಯಲ್ಲಿ ಟ್ರಂಪ್ ಕದಾನ ವಿರಾಮ ಘೋಷಣೆ.

ಪಶ್ಚಿಮ ಏಷ್ಯಾ ಯುದ್ಧವು ಶುರುವಾಗಿ ಐದು ವಾರಗಳು ಕಳೆದಿದೆ.ಇರಾನ್ ದೇಶವನ್ನು ಒಂದೇ ರಾತ್ರಿಯಲ್ಲಿ ಸರ್ವನಾಶ ಮಾಡ್ತೀನಿ ಎಂದು ದೊಡ್ಡ ಎಚ್ಚರಿಕೆ ಕೊಟ್ಟಿದ್ದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯುದ್ಧದಿಂದಲೇ ಹಿಂದೆ ಸರಿದಿದ್ದಾರೆ.
ಕದನ ವಿರಾಮ ಘೋಷಿಸಿ ಸೋತ್ರಾ ಟ್ರಂಪ್!
Iran ಮೇಲೆ ಪ್ರಮುಖ ಮಿಲಿಟರಿ ದಾಳಿ ನಡೆಸಲು ಸಿದ್ಧತೆ ನಡೆಸಿದ್ದ ಟ್ರಂಪ್, ಇದೀಗ ತಮ್ಮ ನಿರ್ಧಾರವನ್ನು ಎರಡು ವಾರಗಳ ಕಾಲ ಮುಂದೂಡಿದ್ದಾರೆ. ಇಲ್ಲಿ ಕದನ ವಿರಾಮ ಘೋಷಿಸಿದ ಟ್ರಂಪ್ ಸೋತ್ರಾ? ಇದು ಇರಾನ್ ಸಿಕ್ಕ ವಿಜಯನಾ? ಇಲ್ಲಿ ಗೆದ್ದಿದ್ದು ಯಾರು?

“ಇದು ನಮಗೆ ಸಿಕ್ಕ ದೊಡ್ಡ ಜಯ”
ಇರಾನ್ ತನ್ನ ಸುಪ್ರೀಂ ರಾಷ್ಟ್ರೀಯ ಭದ್ರತಾ ಮಂಡಳಿಯ ಮೂಲಕ ಇದು ನಮಗೆ ಸಿಕ್ಕ “ದೊಡ್ಡ ಜಯ” ಎಂದು ಘೋಷಿಸಿದೆ. ಅಮೆರಿಕವು ತನ್ನ 10 ಅಂಶಗಳ ಯೋಜನೆಯನ್ನ ಒಪ್ಪಿಕೊಳ್ಳುವಂತೆ ಒತ್ತಡ ಹೇರಿದೆ. ಇದರ ಭಾಗವಾಗಿ ಇರಾನ್ ವಿರುದ್ಧದ ಎಲ್ಲಾ ಪ್ರಾಥಮಿಕ ಮತ್ತು ದ್ವಿತೀಯಕ ನಿರ್ಬಂಧಗಳನ್ನು ತೆಗೆದುಹಾಕಲು ಹಾಗೂ ಹಾರ್ಮುಜ್ ಜಲಸಂಧಿಯ ಮೇಲಿನ ತನ್ನ ನಿರಂತರ ನಿಯಂತ್ರಣವನ್ನು ಗುರುತಿಸಲು ಯುಎಸ್ ತಾತ್ವಿಕವಾಗಿ ಒಪ್ಪಿಕೊಂಡಿದೆ ಎಂದು ಇರಾನ್ ಕೌನ್ಸಿಲ್ ಘೋಷಣೆ ಮಾಡಿದೆ.
READ THIS : ಮಹಿಳೆಯರಿಗೆ ಬ್ಯಾಡ್ ಟಚ್ ಮಾಡ್ತಿದ್ದ GYM ಟ್ರೇನರ್ ಅರೆಸ್ಟ್
“ಅಮೆರಿಕಕ್ಕೆ ಹೀನಾಯ ಸೋಲು”
ಇರಾನ್ ರಾಷ್ಟ್ರದ ವಿರುದ್ಧ “ಅನ್ಯಾಯದ ಮತ್ತು ಕಾನೂನುಬಾಹಿರ” ಎಂದು ಕರೆದಿದ್ದು, ಅಮೆರಿಕಕ್ಕೆ ಇದು “ಹೀನಾಯ ಸೋಲು” ಎಂದು ಇರಾನ್ ಕೌನ್ಸಿಲ್ ಬಣ್ಣಿಸಿದೆ.

ರಾಷ್ಟ್ರದ ಏಕತೆಯನ್ನು ಕಾಪಾಡಿಕೊಳ್ಳಲು
ಮುಂದಿನ ಹಂತದಲ್ಲಿ ಮಾತುಕತೆಗಳು ಇಸ್ಲಮಾಬಾದ್ನಲ್ಲಿ ನಡೆಯಲಿದ್ದು, ಎರಡು ವಾರಗಳ ಗಡುವು ನಿಗದಿಯಾಗಿದೆ. ಈ ಅವಧಿಯಲ್ಲಿ ರಾಷ್ಟ್ರದ ಏಕತೆಯನ್ನು ಕಾಪಾಡಿಕೊಳ್ಳಲು ಇರಾನ್ ತನ್ನ ನಾಗರಿಕರಿಗೆ ಕರೆ ನೀಡಿದೆ.
ಐತಿಹಾಸಿಕ ವಿಜಯ ಆಚರಿಸೋಣ
ಯುದ್ಧಭೂಮಿಯಲ್ಲಿ ಶತ್ರುಗಳ ಶರಣಾಗತಿಯು ಮಾತುಕತೆಗಳಲ್ಲಿ ನಿರ್ಣಾಯಕ ರಾಜಕೀಯ ಸಾಧನೆಯಾದರೆ, ನಾವು ಈ ಮಹಾನ್ ಐತಿಹಾಸಿಕ ವಿಜಯವನ್ನು ಒಟ್ಟಾಗಿ ಆಚರಿಸುತ್ತೇವೆ, ಇಲ್ಲದಿದ್ದರೆ ಇರಾನ್ ರಾಷ್ಟ್ರದ ಎಲ್ಲಾ ಬೇಡಿಕೆಗಳನ್ನು ಸಾಧಿಸುವವರೆಗೆ ಯುದ್ಧಭೂಮಿಯಲ್ಲಿ ಹೋರಾಡುತ್ತೇವೆ ಎಂದು ಇರಾನ್ ಪ್ರಕಟಣೆಯಲ್ಲಿ ತಿಳಿಸಿದೆ.
MUST WATCH : ಸರ್ಕಾರ ಕೆಲಸ ಕೊಡಿಸುವುದಾಗಿ ವಂಚನೆ – ಬರೋಬ್ಬರಿ 50 ಲಕ್ಷ ಹಣ ಪಡೆದು ಮೋಸ..!





