CSK ಬೌಲರ್ ಮುಖೇಶ್ ಚೌಧರಿ ಅವರ ತಾಯಿ ನಿಧನರಾಗಿದ್ದಾರೆ.

ಐಪಿಎಲ್ 2026ರ ಆವೃತ್ತಿ ಮಧ್ಯೆ CSK ಸ್ಟಾರ್ ಬೌಲರ್ ಮುಖೇಶ್ ಚೌಧರಿ ಅವರ ತಾಯಿ ನಿಧನರಾಗಿದ್ದಾರೆ.
ಚಿಕಿತ್ಸೆ ಫಲಿಸದೇ ಸಾವು
ಕಳೆದ ಒಂದು ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಪ್ರೇಮ್ ದೇವಿ ಅವರು ಮುಂಬೈನ ಟಾಟಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ (ಏ.21) ಅವರು ಕೊನೆಯುಸಿರೆಳೆದಿದ್ದಾರೆ.
ಊರಿನಲ್ಲಿ ತಾಯಿ ಅಂತ್ಯಕ್ರಿಯೆ
ಮೂಲಗಳ ಪ್ರಕಾರ, ಶನಿವಾರ (ಏ.18) ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಸಿಎಸ್ಕೆ ಪಂದ್ಯದ ನಂತರ ಮುಖೇಶ್ ಚೌಧರಿ ಅವರು ರಾಜಸ್ಥಾನದ ಭಿಲ್ವಾರಾದ ತಮ್ಮ ಊರಿಗೆ ತೆರಳಿದರು. ಬಳಿಕ ಅಣ್ಣ ಡಾ. ರಾಜೇಶ್ ಚೌಧರಿ ಅವರೊಂದಿಗೆ ಸೇರಿ ತಾಯಿಯ ಅಂತ್ಯಕ್ರಿಯೆಯನ್ನು ನೆರವೇರಿಸಿದ್ದಾರೆ ಎಂದು ತಿಳಿದುಬಂದಿದೆ.
READ THIS : SSLC-1ನೇ ಪರೀಕ್ಷೆಯಲ್ಲಿ ಫೇಲಾದ ವಿದ್ಯಾರ್ಥಿಗಳಿಗೆ ಮೇ 18ರಿಂದ 2ನೇ ಪರೀಕ್ಷೆ

ಪ್ರೇಮ್ ದೇವಿ ಅವರ ನಿಧನಕ್ಕೆ CSK ಸಂತಾಪ
ಈ ಕುರಿತು ಚೆನ್ನೈ ಸೂಪರ್ ಕಿಂಗ್ಸ್ ತಂಡವು ತನ್ನ ಎಕ್ಸ್ (ಹಿಂದಿನ ಟ್ವಿಟ್ಟರ್) ಖಾತೆಯಲ್ಲಿ ಪ್ರೇಮ್ ದೇವಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದು, “ಈ ನೋವಿನ ಸಮಯದಲ್ಲಿ ಮುಖೇಶ್ ಮತ್ತು ಅವರ ಕುಟುಂಬದೊಂದಿಗೆ ನಾವಿದ್ದೇವೆ” ಎಂದು ಬರೆದುಕೊಂಡಿದೆ.

ಈ ಆವೃತ್ತಿಯಲ್ಲಿ ಮುಖೇಶ್ ಚೌಧರಿ ಕೇವಲ ಒಂದು ಪಂದ್ಯ ಮಾತ್ರ ಆಡಿದ್ದು, MI ವಿರುದ್ಧದ ಮುಂದಿನ ಪಂದ್ಯಕ್ಕೆ ಅವರು ಮತ್ತೆ ತಂಡಕ್ಕೆ ಮರಳುವ ಸಾಧ್ಯತೆ ಇದೆ ಎನ್ನಲಾಗಿದೆ.
MUST WACH : ಪರಪ್ಪನ ಅಗ್ರಹಾರ ಜೈಲಿಗೆ ವಿಜಲಕ್ಷ್ಮೀ ವಿಸಿಟ್ ದರ್ಶನ್ ಜೊತೆ ಮಾತುಕತೆ ನಡೆಸಲು ಭೇಟಿ




