
ಇಂದು SSLC ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು ಈ ಬಾರಿ ಎಸ್ ಎಸ್ ಎಲ್ ಸಿ ಒಂದನೇ ಪರೀಕ್ಷೆಯಲ್ಲಿ ಫೇಲ್ ಆದ ವಿದ್ಯಾರ್ಥಿಗಳಿಗೆ ಮೇ 18ರಿಂದ ಎರಡನೇ ಪರೀಕ್ಷೆ ಆರಂಭವಾಗಲಿದೆ ಆದರೆ ಈ ಸಲ ಮೂರನೇ ಬಾರಿ ಪರೀಕ್ಷೆ ಇರುವುದಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಸ್ಪಷ್ಟಪಡಿಸಿದರು.
ಮೇ 18ರಿಂದ 2ನೇ ಪರೀಕ್ಷೆ
ಫಲಿತಾಂಶ ಪ್ರಕಟವಾದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, “ಫೇಲಾದ ವಿದ್ಯಾರ್ಥಿಗಳಿಗೆ ಮೂರನೇ ಬಾರಿ ಪರೀಕ್ಷೆಯ ಅವಕಾಶ ಇರುವುದಿಲ್ಲ. ಆದ್ದರಿಂದ ಅನುತ್ತೀರ್ಣರಾದವರು ಎರಡನೇ ಪರೀಕ್ಷೆಯನ್ನು ಅವಶ್ಯವಾಗಿ ಬಳಸಿಕೊಳ್ಳಬೇಕು. ಮೇ 18ರಿಂದ ಎರಡನೇ ಪರೀಕ್ಷೆಗಳು ಪ್ರಾರಂಭವಾಗಲಿವೆ,” ಎಂದು ತಿಳಿಸಿದ್ದಾರೆ.
READ THIS : BREAKING: SSLC ಪರೀಕ್ಷೆ ಫಲಿತಾಂಶ ಪ್ರಕಟ – ಈ ಬಾರಿ ಶೇ.90 ರಷ್ಟು ರಿಸಲ್ಟ್

ಫೇಲಾದ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ
ಇದಲ್ಲದೆ, ಫೇಲಾದ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ನೀಡುವ ಕ್ರಮ ಕೈಗೊಳ್ಳಲಾಗುತ್ತದೆ. ಯಾವ ವಿಷಯದಲ್ಲಿ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೋ, ಆ ವಿಷಯಗಳಲ್ಲಿ ಅವರನ್ನು ಉತ್ತೀರ್ಣರಾಗಲು ಶಿಕ್ಷಕರು ಹಾಗೂ ಇಲಾಖೆಯವರು ಸಮರ್ಪಕ ಮಾರ್ಗದರ್ಶನ ನೀಡಲಿದ್ದಾರೆ ಎಂದು ಸಚಿವರು ಹೇಳಿದ್ದಾರೆ.
ಇನ್ನು ಎರಡನೇ SSLC ಪರೀಕ್ಷೆ ಯಾವ ಯಾವ ದಿನಾಂಕದಂದು ಯಾವ್ಯಾವ ಸಬ್ಜೆಕ್ಟ್ ಅನ್ನುವುದನ್ನು ಮುಂದಿನ ದಿನಗಳಲ್ಲಿ ಅನೌನ್ಸ್ ಮಾಡುವುದಾಗಿ ಮಧು ಬಂಗಾರಪ್ಪ ಹೇಳಿದ್ದಾರೆ.

MUST WATCH : ಸದ್ಯಕ್ಕೆ ಜಿಲ್ಲೆಯಲ್ಲಿ ನೀರಿನ ಸಮಸ್ಯೆಯಿಲ್ಲ – ಬಿಜೆಪಿ ಶಾಸಕ ಜ್ಯೋತಿಗಣೇಶ್ ಸ್ಪಷ್ಟನೆ




