BREAKING : SSLC ಫಲಿತಾಂಶ ಪ್ರಕಟ – ಈ ಬಾರಿ ಬಾಲಕಿಯರೇ ಮೇಲುಗೈ

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು 2025-26ನೇ ಸಾಲಿನ SSLC ಪರೀಕ್ಷೆ-1ರ ಫಲಿತಾಂಶವನ್ನು ಇಂದು ಪ್ರಕಟಿಸಿದೆ. ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದು, ದಾಖಲೆಯ ಶೇ.90 ರಷ್ಟು ಫಲಿತಾಂಶ ಬಂದಿದೆ.
ಶಿಕ್ಷಣ ಇಲಾಖೆ ಈ ಬಾರಿ ವಿಶೇಷ ಕ್ರಮ
ರಾಜ್ಯಾದ್ಯಂತ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ನಡೆದ ಎಸ್ಎಸ್ಎಲ್ಸಿ ಪರೀಕ್ಷೆಗೆ ಸುಮಾರು 8 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಾಗಿದ್ದರು. ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹೆಚ್ಚಿಸಲು ಶಿಕ್ಷಣ ಇಲಾಖೆ ಈ ಬಾರಿ ವಿಶೇಷ ಕ್ರಮಗಳನ್ನು ಕೈಗೊಂಡಿತ್ತು.
READ THIS : ಇಂದು, ನಾಳೆ ಕರ್ನಾಟಕ CET ಪರೀಕ್ಷೆ – ಡ್ರೆಸ್ಕೋಡ್ ಕಡ್ಡಾಯ

ರಿಸಲ್ಟ್ ಚೆಕ್ ಮಾಡೋದೇಗೆ..?
ಇನ್ನು ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು karresults.nic.in ವೆಬ್ಸೈಟ್ ಮೂಲಕ ಸುಲಭವಾಗಿ ವೀಕ್ಷಿಸಬಹುದು. ಇಅಲ್ಲದೆ kseab.karnataka.gov.in ಪೋರ್ಟಲ್ನಲ್ಲಿಯೂ ಫಲಿತಾಂಶ ಲಭ್ಯವಿದೆ.
BREAKING : SMS ಅಥವಾ WhatsApp ಮೂಲಕವೂ ಫಲಿತಾಂಶ
‘KarnatakaOne’ ಮೊಬೈಲ್ ಆ್ಯಪ್ ಮೂಲಕವೂ ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ನೋಡಬಹುದಾಗಿದೆ. ಜೊತೆಗೆ ನೋಂದಾಯಿತ ಮೊಬೈಲ್ ಸಂಖ್ಯೆಗೆ SMS ಅಥವಾ WhatsApp ಮೂಲಕ ಫಲಿತಾಂಶದ ಮಾಹಿತಿ ಕಳುಹಿಸಲಾಗುತ್ತಿದೆ.

ಇತಿಹಾಸದಲ್ಲೇ ಮೊದಲ ಬಾರಿಗೆ ಫಲಿತಾಂಶ ಪ್ರಕಟವಾದ ದಿನವೇ ಡಿಜಿಲಾಕರ್ನಲ್ಲಿ ಅಂಕಪಟ್ಟಿ ಲಭ್ಯವಾಗುತ್ತಿದೆ. ವಿದ್ಯಾರ್ಥಿಗಳು digilocker.gov.in ವೆಬ್ಸೈಟ್ಗೆ ಭೇಟಿ ನೀಡಿ ತಮ್ಮ ಅಂಕಪಟ್ಟಿಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
MUST WATCH : ಹೆಡ್ ಕಾನ್ಸ್ಟೇಬಲ್ನಿಂದ ಗೂಂಡಾವರ್ತನೆ..?! ಆಟೋ ಚಾಲಕನ ಮೇಲೆ ಸಿಬ್ಬಂದಿ ದರ್ಪ




