ʻಬ್ರೈನ್ ಸ್ಟ್ರೋಕ್ ಅಪಾಯಕ್ಕೆ ಸಿಲುಕಿದ Vinod Kambli- ಶಾಕಿಂಗ್ ಮಾಹಿತಿ ನೀಡಿದ ಸ್ನೇಹಿತ ಮಾರ್ಕಸ್ ಕೌಟೊ!

ಭಾರತದ ಮಾಜಿ ಸ್ಟಾರ್ ಬ್ಯಾಟರ್ ವಿನೋದ್ ಕಾಂಬ್ಳಿ ಅವರ ಆರೋಗ್ಯದ ಬಗ್ಗೆ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಅವರ ಮೆದುಳಿನಲ್ಲಿ ‘ಇನ್-ಆಪರೇಬಲ್’ ರಕ್ತದ ಹೆಪ್ಪುಗಟ್ಟುವಿಕೆ (Blood Clot) ಇರುವುದು ಪತ್ತೆಯಾಗಿದ್ದು, ಪಾರ್ಶ್ವವಾಯು (Brain Stroke) ಸಂಭವಿಸುವ ಅಪಾಯದಲ್ಲಿದ್ದಾರೆ ಎಂದು ತಿಳಿದುಬಂದಿದೆ.
ಶಸ್ತ್ರಚಿಕಿತ್ಸೆ ಅಸಾಧ್ಯ!
Vinod Kambi ಅವರ ಆಪ್ತ ಸ್ನೇಹಿತ ಹಾಗೂ ಮಾಜಿ ಅಂಪೈರ್ ಮಾರ್ಕಸ್ ಕೌಟೊ ಈ ಕುರಿತು ಮಾಹಿತಿ ನೀಡಿದ್ದು, ವೈದ್ಯರು ಶಸ್ತ್ರಚಿಕಿತ್ಸೆ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಮೆದುಳಿನ ಸೂಕ್ಷ್ಮ ಭಾಗದಲ್ಲಿ ಹೆಪ್ಪುಗಟ್ಟಿರುವ ರಕ್ತದ ಗುಡ್ಡವನ್ನು ತೆಗೆದುಹಾಕುವುದು ಅತ್ಯಂತ ಅಪಾಯಕಾರಿಯಾಗಿದೆ. ಕಳೆದ 18 ತಿಂಗಳುಗಳಿಂದ ಈ ಆರೋಗ್ಯ ಸಮಸ್ಯೆ ಮುಂದುವರಿದಿದೆ ಎನ್ನಲಾಗಿದೆ.

ಪಾರ್ಶ್ವವಾಯು ಸಂಭವಿಸುವ ಸಾಧ್ಯತೆ
ನ್ಯೂರೋಸರ್ಜನ್ ಆದಿಲ್ ಚಾಗ್ಲಾ ಅವರ ಪ್ರಕಾರ, ಮುಂದಿನ ಹಂತದಲ್ಲಿ ಕಾಂಬ್ಳಿ ಅವರಿಗೆ ಪಾರ್ಶ್ವವಾಯು ಸಂಭವಿಸುವ ಸಾಧ್ಯತೆ ಹೆಚ್ಚಿದೆ ಎಂದು ಎಚ್ಚರಿಸಲಾಗಿದೆ. ಇದಲ್ಲದೆ, ಅವರ ನೆನಪಿನ ಶಕ್ತಿ ಕೂಡ ಕುಂದಿದ್ದು, ವಿಷಯಗಳನ್ನು ನೆನಪಿಸಿಕೊಳ್ಳಲು ಅವರು ಕಷ್ಟಪಡುತ್ತಿದ್ದಾರೆ ಮತ್ತು ಆಗಾಗ್ಗೆ ವಿಷಯಗಳನ್ನು ಮರೆತುಬಿಡುತ್ತಿದ್ದಾರೆ.
READ THIS : ಪರಪ್ಪನ ಅಗ್ರಹಾರ ಜೈಲಲ್ಲಿ ಇಡೀ ರಾತ್ರಿ ನಿದ್ದೆ ಮಾಡದ ಕುಲಕರ್ಣಿ!
ಜೀವನಶೈಲಿ ಸವಾಲು
ಇದಾಗ್ಯೂ ಆರು ತಿಂಗಳ ಹಿಂದೆ ನಡೆಯಲು ಪೀಠೋಪಕರಣಗಳ ಸಹಾಯ ಬೇಕಿದ್ದ ಕಾಂಬ್ಳಿ, ಈಗ ವಾಕಿಂಗ್ ಸ್ಟಿಕ್ ನೆರವಿನಿಂದ ನಡೆಯುತ್ತಿದ್ದಾರೆ. ಇದು ಸ್ವಲ್ಪಮಟ್ಟದ ದೈಹಿಕ ಸುಧಾರಣೆಯನ್ನು ತೋರಿಸುತ್ತಿದೆ. ಆದರೆ, ಜೀವನಶೈಲಿಯ ಸವಾಲುಗಳು ಇನ್ನೂ ಮುಂದುವರಿದಿವೆ. ಮದ್ಯಪಾನವನ್ನು ತ್ಯಜಿಸಿದ್ದರೂ, ಧೂಮಪಾನವನ್ನು ಸಂಪೂರ್ಣವಾಗಿ ನಿಲ್ಲಿಸದಿರುವುದು ಅವರ ಆರೋಗ್ಯಕ್ಕೆ ಹಾನಿಕಾರಕವಾಗಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ.

ಸದ್ಯ ಮುಂಬೈನಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿನೋದ್ ಕಾಂಬ್ಳಿ ಶೀಘ್ರ ಗುಣಮುಖರಾಗಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.
MUST WATCH : ಇದು PRAJASHAKTHITVಯ BIG IMPACT – ಗ್ರಾಮಸ್ಥರಿಗೆ ಕೊನೆಗೂ ಸಿಕ್ತು ರಸ್ತೆ





