ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ದೋಷಿಯಾಗಿರುವ ಶಾಸಕ Vinay Kulkarni ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ.

ಬಿಜೆಪಿ ಮುಖಂಡ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ದೋಷಿ ಎಂದು ಜನಪ್ರತಿನಿಧಿಗಳ ನ್ಯಾಯಾಲಯ ತೀರ್ಪು ನೀಡಿದೆ. ಈ ಕೊಲೆ ಪ್ರಕರಣದ ಆರೋಪಿಗಳ ಪೈಕಿ ಪ್ರಭಾವಿಯಾಗಿದ್ದ ವಿನಯ್ ಕುಲಕರ್ಣಿ ಅಪರಾಧಿ ಎಂದು ಕೋರ್ಟ್ ಹೇಳಿದೆ. ಇಷ್ಟು ದಿನ ಜಾಮೀನಿನ ಮೇಲೆ ಹೊರಗಿದ್ದ ವಿನಯ್ ಕುಲಕರ್ಣಿ ಇದೀಗ ಮತ್ತೆ ಜೈಲು ಸೇರಬೇಕಾಗಿದೆ.
ಸೆಲ್ ಒಳಗೆ ಹೋಗ್ತಿದ್ದಂತೆ ಕಣ್ಣೀರು
ಇನ್ನು ಶಾಸಕ Vinay Kulkarni ಅವರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಸೇರಿದ್ದಾರೆ. ತಡರಾತ್ರಿ ಜೈಲು ಸೇರಿದ್ದ ಅವರು, ಸೆಲ್ಗೆ ಪ್ರವೇಶಿಸಿದ ಬಳಿಕ ಕಣ್ಣೀರಿಟ್ಟಿದ್ದಾರೆ ಎನ್ನಲಾಗಿದೆ.

READ THIS : Mantralaya ಬಳಿ ಭೀಕರ ಅಪಘಾತ – 3 ವರ್ಷದ ಮಗು ಸೇರಿ 8 ಜನ ದುರ್ಮರಣ..!!
ಇಡೀ ರಾತ್ರಿ ನಿದ್ದೆ ಮಾಡದ ಕುಲಕರ್ಣಿ
ಕುಲಕರ್ಣಿ ನಿನ್ನೆ ಮಧ್ಯಾಹ್ನದಿಂದ ಇಂದಿನವರೆಗೆ ಮಾಡಿಲ್ಲ ಹಾಗೂ ಇಡೀ ರಾತ್ರಿ ನಿದ್ರೆ ಮಾಡಿಲ್ಲ ಎನ್ನಲಾಗಿದೆ. ಜೈಲಾಧಿಕಾರಿಗಳು ಇಂದು ಬೆಳಗ್ಗೆ ಹತ್ತು ಗಂಟೆಯೊಳಗೆ ಬಂಧಿತ ಎಲ್ಲರಿಗೂ ಸಿಟಿಪಿ (CTP) ನಂಬರನ್ನು ನೀಡಿದ್ದು, ಅವರನ್ನು ಕ್ವಾರಂಟೈನ್ ಸೆಲ್ನಲ್ಲಿ ಇರಿಸಲಾಗಿದೆ.

ಸಿಬಿಐ ಭದ್ರತೆಯಲ್ಲಿ ಕೋರ್ಟ್ಗೆ ಹಾಜರು
ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ಆರೋಪಿಗಳನ್ನು ಮತ್ತೆ ನ್ಯಾಯಾಲಯದ ಮುಂದೆ ಹಾಜರುಪಡಿಸಲು ಸಿದ್ಧತೆ ನಡೆಯುತ್ತಿದೆ. ಆರೋಪಿಗಳನ್ನು ಸಿಬಿಐ ಭದ್ರತೆಯಲ್ಲಿ ನ್ಯಾಯಾಲಯಕ್ಕೆ ಕರೆದೊಯ್ಯಲಾಗುತ್ತದೆ.

MUST WATCH : VINAY KULAKARNI CASE | ಪಾಪ ಪ್ರಜ್ಞೆಯಿಂದ ಸಾಕ್ಷಿ ಹೇಳಿದ ಮಾಫಿ ಸಾಕ್ಷಿ ಮುತಗಿ ಸ್ಪೋಟಕ ರಿಯಾಕ್ಷನ್




