ಯೋಗೇಶ್ ಗೌಡ ಹತ್ಯೆ ಕೇಸ್ – ಕಾಂಗ್ರೆಸ್ ಶಾಸಕ Vinay Kulkarni ದೋಷಿ.

2016ರ ಜೂನ್ನಲ್ಲಿ ನಡೆದಿದ್ದ ಧಾರವಾಡ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಯೋಗೇಶ್ ಗೌಡ ಕೊಲೆ ಕೇಸ್ನಲ್ಲಿ ಕ್ರಿಮಿನಲ್ ಒಳಸಂಚು ಆರೋಪದಡಿ ಶಾಸಕ ವಿನಯ್ ಕುಲಕರ್ಣಿ ದೋಷಿ ಎಂದು ಕೋರ್ಟ್ ತೀರ್ಪು ನೀಡಿದೆ. ರಾಜ್ಯ ರಾಜಕಾರಣದಲ್ಲಿ ದೊಡ್ಡ ಸಂಚಲನಕ್ಕೆ ಕಾರಣವಾಗಿದ್ದ ಯೋಗೇಶ್ ಗೌಡ ಕೊಲೆ ಪ್ರಕರಣದ ಅಂತಿಮ ತೀರ್ಪನ್ನು ಇಂದು ಕೋರ್ಟ್ ಪ್ರಕಟಿಸಿದೆ.

19 ಮಂದಿ ಆರೋಪಿಗಳು ಅಪರಾಧಿಗಳು
ಶಾಸಕ ವಿನಯ್ ಕುಲಕರ್ಣಿ ಸೇರಿ 19 ಮಂದಿ ಆರೋಪಿಗಳು ಅಪರಾಧಿಗಳು ಎಂದು ಬೆಂಗಳೂರು ವಿಶೇಷ ಕೋರ್ಟ್ ತೀರ್ಪು ನೀಡಿದ್ದು, ಶಿಕ್ಷೆ ಪ್ರಮಾಣವನ್ನು ಸದ್ಯ ಕೋರ್ಟ್ ಪ್ರಕಟಿಸಿಲ್ಲ. ನಾಳೆ ಅಥವಾ ನಾಡಿದ್ದು ಶಿಕ್ಷೆ ಪ್ರಮಾಣದ ಬಗ್ಗೆ ವಾದ ಮಂಡನೆ ನಡೆಯಲಿದ್ದು, ಬಳಿಕ ಶಿಕ್ಷೆಯ ಪ್ರಮಾಣವನ್ನು ಕೋರ್ಟ್ ವಿಧಿಸಲಿದೆ.
ಇನ್ನು ಯೋಗೇಶ್ ಗೌಡ ಕೊಲೆ ಪ್ರಕರಣದ 21 ಮಂದಿ ಆರೋಪಿಗಳ ಪೈಕಿ ಇಬ್ಬರು ಮಾಫಿ ಸಾಕ್ಷಿಯಾಗಿದ್ದಾರೆ. 19 ಆರೋಪಿಗಳನ್ನು ಅಪರಾಧಿಗಳು ಎಂದು ನ್ಯಾಯಾಲಯ ತೀರ್ಪು ನೀಡಿದೆ. ಕೊಲೆ ಪ್ರಕರಣದ ಎ1 ಬಸವರಾಜ ಮುತ್ತಗಿ ಮಾಫಿ ಸಾಕ್ಷಿಯಾಗಿ ಹೇಳಿಕೆ ನೀಡಿದ್ದರೆ, ಎ17 ಶಿವಾನಂದ ಮಾಫಿ ಸಾಕ್ಷಿಯಾದ ಬಳಿಕವೂ ಪ್ರತಿಕೂಲ ಹೇಳಿಕೆ ನೀಡಿದ್ದಾರೆ. ಹೀಗಾಗಿ ಎ17 ಆರೋಪಿಯನ್ನಾಗಿಸುವಂತೆ ಸಿಬಿಐ ಅರ್ಜಿ ಸಲ್ಲಿಸಿದೆ. ಇದರಿಂದ ಇವರಿಬ್ಬರನ್ನು ಹೊರತುಪಡಿಸಿ ಉಳಿದವರ ತೀರ್ಪು ಪ್ರಕಟಿಸಿದೆ. ಇನ್ನು ಪ್ರಕರಣದ A 20 ವಾಸುದೇವ ನಿಲೇಕಣಿ, A21 ಸೋಮಶೇಖರ ಅವರನ್ನ ಬಿಡುಗಡೆಗೆ ಕೋರ್ಟ್ ಆದೇಶಿಸಿದೆ.

READ THIS : CBSE 10ನೇ ತರಗತಿ ಫಲಿತಾಂಶ ಪ್ರಕಟ – ರಿಸಲ್ಟ್ ವೀಕ್ಷಿಸಲು ನೇರ ಲಿಂಕ್ ಇಲ್ಲಿದೆ
ಯಾರ್ಯಾರು ದೋಷಿ ಆಗಿದ್ದಾರೆ..?
ಎ2 ವಿಕ್ರಮ್, ಎ3 ಕೀರ್ತಿ ಕುಮಾರ್, ಎ 4 ಸಂದೀಪ್
ಎ5 ವಿನಾಯಕ್, ಎ6 ಮಹಾಬಲೇಶ್ವರ್ ಅಲಿಯಾಸ್ ಮುದಕ
ಎ 7 ಸಂತೋಷ್, ಎ 8 ದಿನೇಶ್, ಎ 9 ಅಶ್ವಥ್ , ಎ10 ಸುನಿಲ್
ಎ 11 ನಜೀರ್ ಅಹಮದ್, ಎ 12 ಷಾನವಾಜ್, ಎ 13 ನೂತನ್
ಎ14 ಹರ್ಷಿತ್, ಎ15 ವಿನಯ್ ಕುಲಕರ್ಣಿ, ಎ 16 ಚಂದ್ರು ಮಾಮ
ಎ18 ವಿಕಾಸ್ ಕಲಬುರ್ಗಿ, ಎ 19 ಚನ್ನಕೇಶವ ಟಿಂಗರಿಕರ್
ಎ20 ವಾಸುದೇವ ನಿಲೇಕಣಿ, ಎ21 ಸೋಮಶೇಖರ್ ನ್ಯಾಮಗೌಡ

ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ
ಧಾರವಾಡದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಯೋಗೇಶ್ ಗೌಡ ಅವರನ್ನು 2016ರ ಜೂನ್ 15ರಂದು ಸಪ್ತಾಪುರ ಬಡಾವಣೆಯ ಜಿಮ್ನಲ್ಲಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದರು.
Vinay Kulkarni ಮೇಲೆ ಕೊಲೆಗೆ ಒಳಸಂಚು ಆರೋಪ
ಯೋಗೇಶ್ ಗೌಡ ಜೈಲಿನಲ್ಲಿ ಇದ್ದುಕೊಂಡೇ ಜಿಲ್ಲಾ ಪಂಚಾಯತ್ ಚುನಾವಣೆಯನ್ನು ಗೆದ್ದಿದ್ದರಿಂದ ಹೈ ಪ್ರೊಫೈಲ್ ಕೇಸ್ ಆಗಿತ್ತು. ಕೊಲೆ ಪ್ರಕರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆಗಿದ್ದ ವಿನಯ್ ಕುಲಕರ್ಣಿ ಮೇಲೆ ಕೊಲೆಗೆ ಒಳಸಂಚು ಆರೋಪ ಕೇಳಿಬಂದಿತ್ತು. ತನಿಖೆ ನಡೆಸಿದ ಪೊಲೀಸರ ಮುಂದೆ ಆರು ಜನ ಆರೋಪಿಗಳು ಶರಣಾಗಿದ್ದರು.

ಕಾಂಗ್ರೆಸ್ ಸರ್ಕಾರಕ್ಕೆ ಮುಜುಗರ
ಯೋಗಿಶ್ ಗೌಡ ಕುಟುಂಬಸ್ಥರ ಮನವಿ ಮೇರೆಗೆ ತನಿಖೆಯನ್ನು ಸಿಬಿಐಗೆ ನೀಡಲಾಗಿತ್ತು. 2019ರಲ್ಲಿ ಸಿಬಿಐ ಗೆ ನೀಡಿ ರಾಜ್ಯ ಸರ್ಕಾರ ಆದೇಶ ನೀಡಿತ್ತು. ತನಿಖೆ ವೇಳೆ ಸಿಬಿಐ ಅಧಿಕಾರಿಗಳು ಶಾಸಕ ವಿನಯ್ ಕುಲಕರ್ಣಿಯನ್ನು 2020ರಲ್ಲಿ ಬಂಧಿಸಿಲಾಗಿತ್ತು. ಇದೀಗ ಪ್ರಕರಣದ ವಾದ- ವಿವಾದ ಬಳಿಕ ಶಾಸಕ ವಿನಯ್ ಕುಲಕರ್ಣಿ ದೋಷಿ ಎಂದು ತೀರ್ಪು ನೀಡಿದ್ದು, ಕಾಂಗ್ರೆಸ್ ಸರ್ಕಾರಕ್ಕೆ ಮುಜುಗರ ತರುವಂತಾಗಿದೆ.
MUST WATCH : ಜನಸಂಪರ್ಕ ಸಭೆಯಲ್ಲಿ ದಯಾಮರಣ ಕೋರಿದ್ದ ಮಹಿಳೆಗೆ ನೆರವಾದ ಪರಂ





