Censor certificate : ಇನ್ನ್ಮುಂದೆ ಸಿನಿಮಾಗಳಿಗೆ ದೇವರುಗಳ ಹೆಸರಿಡುವಂತಿಲ್ಲ!

Censor Certificate : ಭಾರತದಲ್ಲಿ ಯಾವುದಕ್ಕದಾರೂ ಹೆಸರಿಡಬೇಕು ಅಂದರೆ, ದೇವರ ಹೆಸರಿಟ್ಟರೆ ಒಳ್ಳೆಯದು ಎಂಬ ನಂಬಿಕೆ ಇದೆ. ಮನುಷ್ಯರಿಗಲ್ಲದೆ, ಬಾರ್ಗಳಿಂದ ಹಿಡಿದು ನಾನ್ವೆಜ್ ಅಂಗಡಿಗೂ ಕೂಡ ದೇವರ ಹೆಸರಿಡುತ್ತಾರೆ. ಆದರೆ ಇತ್ತೀಚಿಗೆ ಸಿನಿಮಾಗಳಿಗೂ ಕೂಡ ದೇವರ ಹೆಸರುಗಳನ್ನು ಇಡುತ್ತಿದ್ಧಾರೆ.
CBFC ಹೆಸರುಗಳನ್ನು ಬದಲಾವಣೆ
ಆದರೆ ಇತ್ತೀಚೆಗೆ ಸಿನಿಮಾಗಳಿಗೆ ದೇವರ ಹೆಸರ ಇರಿಸಿದರೆ ಸೆನ್ಸಾರ್ ಮಂಡಳಿಯವರು ತಕರಾರು ತೆಗೆಯಲು ಆರಂಭಿಸಿದಂತಿದ್ದಾರೆ.
ಇತ್ತೀಚಿಗೆ ಕೆಲ ಸಿನಿಮಾಗಳಲ್ಲಿ ದೇವರುಗಳ ಹೆಸರೆಂಬ ಕಾರಣಕ್ಕೆ CBFC ಹೆಸರುಗಳನ್ನು ಬದಲಾವಣೆ ಮಾಡಿಸಲಾಗಿದೆ.
ಸಿನಿಮಾಗಳಿಗೆ ದೇವತೆಗಳ ಹೆಸರಿಡುವಂತಿಲ್ಲ?
ಭಾರತದಲ್ಲಿ ದೇವರ ಹೆಸರುಗಳನ್ನು ಮನುಷ್ಯರಿಗೆ ಸಾಮನ್ಯವಾಗಿ ಇಡುವ ರೂಡಿ ಇದೆ. ಆದರೆ ಇತ್ತೀಚಿಗೆ ಬಾರ್ಗಳಿಗೆ, ಕಸದ ಗಾಡಿಗಳಿಗೂ ದೇವರ ಹೆಸರಿಟ್ಟರೆ, ದೇವರ ಆರ್ಶೀವಾದ ಸಿಗುತ್ತದೆ ಎಂಬ ನಂಬಿಕೆ.
ಇತ್ತೀಚಿಗೆ ಸಿನಿಮಾಗಳಿಗು ಕೂಡ ದೇವರ ಹೆಸರಿಡುತ್ತಾರೆ. ಇದೀಗ ದೇವರ ಹೆಸರಿಟ್ಟ ಕೆಲವೊಂದಿಷ್ಟು ಸಿನಿಮಾಗಳನ್ನ ಸೆನ್ಸಾರ್ ಮಂಡಳಿಯವರು ಬದಲಾವಣೆ ಮಾಡಿಸಲಾಗಿದೆ.

READ THIS : ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ – ಪೊಲೀಸ್ ಇಲಾಖೆಯಲ್ಲಿ 8157 ಹುದ್ದೆ ಭರ್ತಿಗೆ ಸೂಚನೆ
“ಸರಸ್ವತಿ” ಸಿನಿಮಾ ಹೆಸರು ಬದಲಾವಣೆ ಮಾಡಬೇಕೆಂದ ಸೆನ್ಸಾರ್ ಮಂಡಳಿ
ಇನ್ನು ವರಲಕ್ಷ್ಮಿ ಶರತ್ ಕುಮಾರ್ ನಟನೆಯ ʼಸರಸ್ವತಿʼ ಹೆಸರಿನ ಸಿನಿಮಾ ನಾಳೆ ಬಿಡುಗಡೆ ಆಗಲಿದೆ. ಆದರೆ ಈ ಸಿನಿಮದಾ ಹೆಸರನ್ನು ಕಡ್ಡಾಯವಾಗಿ ಬದಲು ಮಾಡಬೇಕೆಂದು ಸೆನ್ಸಾರ್ ಮಂಡಳಿ ಪಟ್ಟು ಹಿಡಿದು, ಹೆಸರನ್ನು ಎಸ್. ಸರಸ್ವತಿ ಎಂದು ಬದಲಾವಣೆ ಮಾಡಿಸಿದೆ.
ಅಸಲಿಗೆ ಇದು ಸರಸ್ವತಿ ಹೆಸರಿನ ಸಾಮಾನ್ಯ ಮಹಿಳೆಯೊಬ್ಬಳ ಕತೆ. ಆದರೆ ಸೆನ್ಸಾರ್ ಮಂಡಳಿ ಅತಿ ಸೂಕ್ಷ್ಮತೆ ಪ್ರದರ್ಶಿಸಿ ಸಿನಿಮಾದ ಹೆಸರನ್ನು ಬದಲು ಮಾಡಿ ಎಂದಿದೆ.
ಈಹಿಂದೆ ಹೇಭಗವಾನ್ ಹೆಸರಿನ ಸಿನಿಮಾ ಹೆಸರು ಬದಲಾವಣೆ
ಇದು ಮೊದಲೇನೂ ಅಲ್ಲ ಈ ಹಿಂದೆ ʼಹೇ ಭಗವಾನ್ʼ ಹೆಸರಿನ ಸಿನಿಮಾ ಒಂದು ಇತ್ತೀಚಿಗೆ ಬಿಡುಗಡೆ ಆಗಿತ್ತು. ಆ ಸಿನಿಮಾದ ಹೆಸರನ್ನು ಕೂಡ ಸೆನ್ಸಾರ್ ಮಂಡಳಿ ಬದಲಾಯಿಸಿತು. ಸಿನಿಮಾದ ಹೆಸರನ್ನು “ಹೇ ಭಗವಾತ್ʼ ಎಂದು ಬದಲಾಯಿಸಿದೆ.
ಇನ್ನು ಸೆನ್ಸಾರ್ ಮಂಡಳಿ ಇತ್ತೀಚಿಗೆ ಅತಿಯಾದ ಸೂಕ್ಷ್ಮತೆ ಪ್ರದರ್ಶಿಸಿತ್ತಿದೆ. ಅದರಲ್ಲೂ ಧರ್ಮದ ವಿಷಯಗಳಲ್ಲಿ ಅತಿಯಾದ ಸೂಕ್ಷ್ಮತೆ ಪ್ರದರ್ಶಿಸುತ್ತಿದೆ. ಧರ್ಮಗಳ ನಡುವೆ ದ್ವೇಷ ಹುಟ್ಟಿಸುವ ಸಿನಿಮಾಗಳಿಗೆ ಸುಲಭವಾಗಿ ಪ್ರಮಾಣ ಪತ್ರಗಳು ಸಿಗುತ್ತಿವೆ. ಆದರೆ ಅಧಿಕಾರವನ್ನು ಪ್ರಶ್ನಿಸುವಮ ವ್ಯವಸ್ಥೆಯನ್ನು ಟೀಕೆ ಮಾಡುವ ಸಿನಿಮಾಗಳಿಗೆ ಸಮಸ್ಯೆ ಎದುರಾಗುತ್ತಿವೆ.

MUST WATCH : ಮಾರ್ಚ್ 6 ರಿಂದ ಪ್ರತಿ ತಾಲೂಕಿಗೂ DC ವಿಸಿಟ್ ಸಮಸ್ಯೆ ಏನೇ ಇದ್ರು ಡಿಸಿ ಮುಂದೆ ಹೇಳಬಹುದು




