Job Recruitment : ಸರ್ಕಾರ ಯುವಜನತೆಗೆ ಸಿಹಿಸುದ್ದಿಯೊಂದನ್ನು ನೀಡಿದೆ.

Job Recruitment : ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ವೃಂದಗಳ ಒಟ್ಟು 8,157 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಸರ್ಕಾರ ಅನುಮತಿ ನೀಡಿದೆ. ಈ ಕುರಿತು ಡೈರೆಕ್ಟರ್ ಜನರಲ್ ಮತ್ತು ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ (ಡಿಜಿ & ಐಜಿಪಿ) ಕಚೇರಿಯಿಂದ ಅಧಿಕೃತ ಸೂಚನೆ ಹೊರಡಿಸಲಾಗಿದೆ.
ಸರ್ಕಾರಿ ಉದ್ಯೋಗ ಪಡೆಯುವ ಅವಕಾಶ
ಪೊಲೀಸ್ ಇಲಾಖೆಯ ಬಲವರ್ಧನೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಈ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಲಾಗುತ್ತಿದೆ. ಇದರೊಂದಿಗೆ ಸಾವಿರಾರು ಉದ್ಯೋಗಾಕಾಂಕ್ಷಿಗಳಿಗೆ ಸರ್ಕಾರಿ ಉದ್ಯೋಗ ಪಡೆಯುವ ಅವಕಾಶ ಸಿಗಲಿದೆ.
READ THIS : ದಾಖಲೆಯ 17ನೇ ಬಜೆಟ್ ಮಂಡಿಸಲಿರುವ Siddaramaiah – ನಿರೀಕ್ಷೆಗಳೇನು?
ಹುದ್ದೆಗಳ ವಿವರ
ವಿಭಿನ್ನ ವಿಭಾಗಗಳ ಪ್ರಕಾರ ಹುದ್ದೆಗಳ ಹಂಚಿಕೆ ಈ ಕೆಳಗಿನಂತಿದೆ:
- ನಾಗರಿಕ ಪೊಲೀಸ್ ಕಾನ್ಸ್ಟೇಬಲ್ (ಸಿವಿಲ್): 4,110 ಹುದ್ದೆಗಳು
- ರಿಸರ್ವ್ ಪೊಲೀಸ್ ಕಾನ್ಸ್ಟೇಬಲ್ (KSRP): 2,032 ಹುದ್ದೆಗಳು
- ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್: 1,650 ಹುದ್ದೆಗಳು
- ಪೊಲೀಸ್ ಕಾನ್ಸ್ಟೇಬಲ್ (KSISF): 364 ಹುದ್ದೆಗಳು
- ಡಿಟೆಕ್ಟಿವ್ ಸಬ್ ಇನ್ಸ್ಪೆಕ್ಟರ್ (DSI): 20 ಹುದ್ದೆಗಳು
ಒಟ್ಟಾರೆ 8,157 ಹುದ್ದೆಗಳನ್ನು ಕಲ್ಯಾಣ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕೇತರ ಪ್ರದೇಶಗಳಾಗಿ ವಿಂಗಡಿಸಿ ನೇಮಕಾತಿ ನಡೆಸಲಾಗುತ್ತದೆ.

ಮೀಸಲಾತಿ ಕುರಿತು ಸೂಚನೆ
ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡಗಳ (ST) ಮೀಸಲಾತಿ ಪ್ರಮಾಣ ಹೆಚ್ಚಿಸುವ ಸರ್ಕಾರದ ನಿರ್ಧಾರವನ್ನು ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಮಧ್ಯಂತರ ಆದೇಶದ ಪ್ರಕಾರ ನೇಮಕಾತಿ ಪ್ರಕ್ರಿಯೆಗೆ ಯಾವುದೇ ಅಡ್ಡಿಯಾಗದಂತೆ ಹಳೆಯ ಮೀಸಲಾತಿ ನಿಯಮದಂತೆ (ಶೇ. 50ರ ಮಿತಿ) ನೇಮಕಾತಿ ಪ್ರಕ್ರಿಯೆ ಮುಂದುವರಿಸಲು ಸರ್ಕಾರ ಸೂಚಿಸಿದೆ.
ಇದೇ ವೇಳೆ ಒಟ್ಟು ಹುದ್ದೆಗಳಲ್ಲಿನ ಶೇ. 6ರಷ್ಟು ಹುದ್ದೆಗಳನ್ನು — ಪರಿಶಿಷ್ಟ ಜಾತಿಗೆ ಶೇ. 2 ಮತ್ತು ಪರಿಶಿಷ್ಟ ಪಂಗಡಕ್ಕೆ ಶೇ. 4 — ಉಚ್ಚ ನ್ಯಾಯಾಲಯದ ಅಂತಿಮ ತೀರ್ಪಿಗೆ ಒಳಪಟ್ಟು ಕಾಯ್ದಿರಿಸಲಾಗುತ್ತದೆ.
ಗಡುವು
ವರ್ಗೀಕರಣದ ವಿವರಗಳನ್ನು ಸಿದ್ಧಪಡಿಸಿ ಮಾರ್ಚ್ 05, 2026ರೊಳಗೆ ನೇಮಕಾತಿ ವಿಭಾಗಕ್ಕೆ ಸಲ್ಲಿಸಲು ಎಲ್ಲಾ ಘಟಕದ ಮುಖ್ಯಸ್ಥರಿಗೆ ಸೂಚಿಸಲಾಗಿದೆ.

ರಾಜ್ಯಾದ್ಯಂತ ಉದ್ಯೋಗಾವಕಾಶ
ರಾಜ್ಯ ಸರ್ಕಾರದ ಮಾಹಿತಿ ಪ್ರಕಾರ ಮುಂದಿನ 30 ದಿನಗಳಲ್ಲಿ ರಾಜ್ಯದ ವಿವಿಧ ಇಲಾಖೆಗಳಲ್ಲಿ ಒಟ್ಟು 56,432 ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ಆರಂಭವಾಗಲಿದೆ.
ಪೊಲೀಸ್ ಇಲಾಖೆಯ ಈ ನೇಮಕಾತಿ ಕ್ರಮವು ಇಲಾಖೆಯ ಸಾಮರ್ಥ್ಯವನ್ನು ಹೆಚ್ಚಿಸುವುದರ ಜೊತೆಗೆ ರಾಜ್ಯದ ಸಾವಿರಾರು ಉದ್ಯೋಗಾಕಾಂಕ್ಷಿಗಳಿಗೆ ಹೊಸ ಭರವಸೆ ಮೂಡಿಸಿದೆ.
MUST WATCH : ಮಠದಿಂದ ಸ್ವಾಮೀಜಿ ನಾಪತ್ತೆ ಆಗಿದ್ರಾ..?- ಪ್ರತ್ಯಕ್ಷರಾಗಿ ವದಂತಿ ಬಗ್ಗೆ ಏನಂದ್ರು ಗೊತ್ತಾ..?




