ಬ್ಯಾಟರ್ Will Malajczuk ಸ್ಫೋಟಕ ಸೆಂಚುರಿ ಸಿಡಿಸುವ ಮೂಲಕ ಅಂಡರ್-19 ವಿಶ್ವಕಪ್ನಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದಾರೆ.

ನಮೀಬಿಯಾದ ವಿಂಡ್ಹೋಕ್ನ ಎಸಿಜಿ ಮೈದಾನದಲ್ಲಿ ನಡೆದ ಅಂಡರ್-19 ವಿಶ್ವಕಪ್ನ 16ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಮತ್ತು ಜಪಾನ್ ತಂಡಗಳು ಮುಖಾಮುಖಿಯಾದವು. ಟಾಸ್ ಗೆದ್ದ ಜಪಾನ್ ಮೊದಲು ಬ್ಯಾಟ್ ಮಾಡಿಕೊಂಡು 50 ಓವರ್ನಲ್ಲಿ 8 ವಿಕೆಟ್ ಕಳೆದು 201 ರನ್ ಮಾಡಿಕೊಂಡಿತು.
ಅದ್ಭುತ ಪ್ರದರ್ಶನ
ಈ ಸುಲಭ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ ಪರ ಆರಂಭಿಕನಾಗಿ ಕಣಕ್ಕಿಳಿದ ಎಡಗೈ ದಾಂಡಿಗ ವಿಲ್ ಮಲಾಚೆಕ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಮೊದಲ ಓವರ್ನಿಂದಲೇ ಆರ್ಭಟ ಶುರು ಮಾಡಿದ್ದ ವಿಲ್ ಶತಕ ಪೂರೈಸಿದ್ದು ಕೇವಲ 51 ಎಸೆತಗಳಲ್ಲಿ. ಈ ಮೂಲಕ ಅಂಡರ್-19 ವಿಶ್ವಕಪ್ನಲ್ಲಿ ಅತೀ ವೇಗದ ಸೆಂಚುರಿ ಸಿಡಿಸಿದ ಬ್ಯಾಟರ್ ಎನಿಸಿಕೊಂಡರು.
ಇದನ್ನು ಓದಿ : ವಿಜಯಲಕ್ಷ್ಮೀ ನಿಂದನೆ ಕೇಸ್ : `CCB’ ಸೈಬರ್ ಪೊಲೀಸರಿಂದ ನೋಟಿಸ್ ಜಾರಿ

63 ಎಸೆತಗಳಲ್ಲಿ ಶತಕ
ಈ ಹಿಂದೆ ಈ ದಾಖಲೆ ಪಾಕಿಸ್ತಾನದ ಖಾಸಿಂ ಅಖ್ತರ್ ಅವರ ಹೆಸರಿನಲ್ಲಿ ಇತ್ತು, ಅವರು 2022 ರ ಅಂಡರ್-19 ವಿಶ್ವಕಪ್ನಲ್ಲಿ ಶ್ರೀಲಂಕಾ ವಿರುದ್ಧ 63 ಎಸೆತಗಳಲ್ಲಿ ಶತಕ ಬಾರಿಸಿದ್ದರು. ಆದರೆ ವಿಲ್ ಮಲಾಚೆಕ್ ಜಪಾನ್ ವಿರುದ್ಧ 5 ಸಿಕ್ಸ್ ಮತ್ತು 12 ಫೋರ್ಗಳೊಂದಿಗೆ 51 ಎಸೆತಗಳಲ್ಲಿ 102 ರನ್ ಸಾಧಿಸಿ ಈ ದಾಖಲೆಯನ್ನು ಮುರಿದಿದ್ದಾರೆ.
ಭರ್ಜರಿ ಜಯ
ಇನ್ನು ಈ ಶತಕದ ನೆರವಿನಿಂದ ಆಸ್ಟ್ರೇಲಿಯಾ ತಂಡ 29.1 ಓವರ್ಗಳಲ್ಲಿ 204 ರನ್ಗಳಿಸಿ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.

ಇದನ್ನು ನೋಡಿ : ಶಾಲಾ ಬಾಲಕಿ ಹಿಂಬಾಲಿಸಿದ ಕಿರಾತಕ ಮನೆ ಬಳಿ ಬಂದ ಬಾಲಕಿ ಏನ್ ಮಾಡಿದ್ಲು ಗೊತ್ತಾ




