Bigg Boss 12ರಲ್ಲಿ ಗಿಲ್ಲಿ, ರಘು ಹಾಗೂ ರಕ್ಷಿತಾ ಪ್ರಮುಖ ಹೈಲೈಟ್ ಆಗಿದ್ದರು.

Bigg Boss Kannada 12 ರಿಯಾಲಿಟಿ ಶೋದಲ್ಲಿ ರಘು, ಗಿಲ್ಲಿ ಮತ್ತು ರಕ್ಷಿತಾ ಪ್ರಮುಖ ಹೈಲೈಟ್ ಆಗಿದ್ದರು. ವೈಲ್ಡ್ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟ ರಘು 4ನೇ ರನ್ನರ್ ಅಪ್ ಆಗಿ ಬಿಗ್ಬಾಸ್ ಮನೆದಿಂದ ಹೊರಹೊಮ್ಮಿದರು.
ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ
ಬಿಗ್ಬಾಸ್ಗೆ ಬರುವ ಮುಂಚೆಯೇ ರಘು ಸಖತ್ ಫೇಮ್ ಪಡೆದಿದ್ದರು. ಅವರು ಪವರ್ ಲಿಫ್ಟಿಂಗ್ ಕ್ರೀಡೆಯಲ್ಲಿ ಕರ್ನಾಟಕ ಹಾಗೂ ಭಾರತಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದರು. ರಾಜ್ಯ ಸರ್ಕಾರವು 2022 ರಲ್ಲಿ ಅವರಿಗೆ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ ನೀಡಿ ಗೌರವಿಸಿತು. ರಘು ರಾಜ್ಯದ ಮೊಟ್ಟ ಮೊದಲ ಪವರ್ ಲಿಫ್ಟರ್ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. 5X ಪವರ್ ಲಿಫ್ಟಿಂಗ್ನಲ್ಲಿ ಅವರು ವಿಶ್ವ ಚಾಂಪಿಯನ್ ಆಗಿ ಸಾಧನೆ ಮಾಡಿದರು.
ಇದನ್ನು ಓದಿ : ವಿಜ್ಞಾನ ಲೋಕಕ್ಕೆ 27 ವರ್ಷಗಳ ಅಮೋಘ ಸೇವೆ – Sunita Williams ನಿವೃತ್ತಿ..!

ಕಾಟೇರ, ಕ್ರಾಂತಿ ಚಿತ್ರಗಳಲ್ಲಿ ವಿಲನ್
ರಾಘವೇಂದ್ರ ಸೆಲೆಬ್ರಿಟಿ ಕೋಚ್ ಕಮ್ ನಟ ಸಹ ರಘು ಅವರು ಸೆಲೆಬ್ರಿಟಿಗಳಿಗೆ ಜಿಮ್ ಕೋಚ್ ಮಾಡುತ್ತಾರೆ. ಕಾಟೇರ ಹಾಗೂ ಕ್ರಾಂತಿ ಚಿತ್ರಗಳಲ್ಲಿ ವಿಲನ್ ಪಾತ್ರ ಮಾಡಿದ್ದಾರೆ. ಇದಲ್ಲದೆ, ಕಾಂತಾರ: ಚಾಪ್ಟರ್ 1 ಚಿತ್ರದಲ್ಲಿಯೂ ಅವರು ಚಿಲನ್ ಪಾತ್ರದಲ್ಲಿ ನಟಿಸಿದ್ದಾರೆ.
ತೂಕದಲ್ಲಿ ಇಷ್ಟೊಂದು ಬದಲಾವಣೆನಾ?
ಬಿಗ್ಬಾಸ್ನಲ್ಲಿ 100 ದಿನಗಳ ಸಾಹಸ ಭರಿತ ಪ್ರಯಾಣದ ಬಳಿಕ ಅವರು ತಮ್ಮ ತೂಕವನ್ನು 25 ಕೆ.ಜಿ ಇಳಿಸಿಕೊಂಡು ಅಭಿಮಾನಿಗಳೊಂದಿಗೆ ತಮ್ಮ ಪ್ರಯಾಣವನ್ನು ಹಂಚಿಕೊಂಡಿದ್ದಾರೆ. ರಘು ಹಿಂದೆ ಐಟಿ ಉದ್ಯೋಗ ಹೊಂದಿದ್ದರು, 12 ವರ್ಷಗಳ ಕಾಲ ಐಟಿ ಅನಿಮೇಷನ್ ವಿಭಾಗದಲ್ಲಿ ಕೆಲಸ ಮಾಡಿದ್ದರು. 2013 ರಲ್ಲಿ ದೇಶಕ್ಕೆ ಕೀರ್ತಿ ತರುವ ಉದ್ದೇಶದಿಂದ ಪವರ್ ಲಿಫ್ಟಿಂಗ್ಗಾಗಿ ಐಟಿ ಉದ್ಯೋಗವನ್ನು ತ್ಯಾಗಮಾಡಿ, ದೇಶದ ಅಗ್ರಮಾನ್ಯ ಲಿಫ್ಟರ್ ಆಗಿ ಹೊರಹೊಮ್ಮಿದರು.

ಇದನ್ನು ನೋಡಿ : ಗ್ರೇಟರ್ ಬೆಂಗಳೂರು ಎಲೆಕ್ಷನ್ಗೆ ಕೌಂಟ್ ಡೌನ್- ಹೇಗೆ ನಡೆಯುತ್ತೆ ಎಲೆಕ್ಷನ್




