ಎಷ್ಟು ಗಂಟೆಗೆ ಬಿಡುಗಡೆಯಾಗುತ್ತಿದೆ Toxic ಟ್ರೇಲರ್? ಇಲ್ಲಿದೆ ನೋಡಿ

ಸ್ಯಾಂಡಲ್ವುಡ್ನಿಂದ ಹಿಡಿದು ಹಾಲಿವುಡ್ವರೆಗೂ ಭಾರೀ ನಿರೀಕ್ಷೆ ಮೂಡಿಸಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಹಾಗೂ ನಿರ್ಮಾಣದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಸಿನಿಮಾದ ಟ್ರೈಲರ್ ಇಂದು ಬಿಡುಗಡೆಯಾಗಲಿದೆ. ಸಿನಿಮಾ ತಂಡವೇ ಟ್ರೈಲರ್ ಬಿಡುಗಡೆ ಸಮಯವನ್ನು ಅಧಿಕೃತವಾಗಿ ಘೋಷಿಸಿದ್ದು, ಇಂದು ಸಂಜೆ 7.01ಕ್ಕೆ ಟ್ರೈಲರ್ ಅನಾವರಣಗೊಳ್ಳಲಿದೆ.
ಅಭಿಮಾನಿಗಳ ಕುತೂಹಲವನ್ನು ಹೆಚ್ಚಿಸಿದ ಚಿತ್ರತಂಡ
ಟ್ರೈಲರ್ ಬಿಡುಗಡೆ ಘೋಷಣೆಯ ಪೋಸ್ಟರ್ನಲ್ಲಿ ಭಾರೀ ಸ್ಫೋಟ ಮತ್ತು ಬೆಂಕಿಯ ನಡುವೆ ಯಶ್ ಮಾಸ್ ಹಾಗೂ ಸ್ಟೈಲಿಶ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಪೋಸ್ಟರ್ನಲ್ಲಿ ‘TRAILER 7:01 PM’ ಎಂದು ನಮೂದಿಸಿರುವ ಮೂಲಕ ಚಿತ್ರತಂಡ ಅಭಿಮಾನಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

ಪ್ರಮುಖ ಪಾತ್ರಗಳಲ್ಲಿ ಕಿಯಾರಾ ಅಡ್ವಾಣಿ,ನಯನತಾರಾ
ಗೀತು ಮೋಹನ್ದಾಸ್ ನಿರ್ದೇಶನದ ಈ ಚಿತ್ರದಲ್ಲಿ ಯಶ್ (ರಾಯ್ ಮತ್ತು ಟಿಕೆಟ್ ಪಾತ್ರಗಳಲ್ಲಿ) ಜೊತೆಗೆ ಕಿಯಾರಾ ಅಡ್ವಾಣಿ (ನಾಡಿಯಾ), ನಯನತಾರಾ (ಗಂಗಾ), ಹುಮಾ ಖುರೇಷಿ (ಎಲಿಜಬೆತ್), ತಾರಾ ಸುತಾರಿಯಾ (ರೆಬೆಕ್ಕಾ) ಹಾಗೂ ರುಕ್ಮಿಣಿ ವಸಂತ್ (ಮೆಲಿಸ್ಸಾ) ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಈ ಚಿತ್ರವನ್ನು ಕನ್ನಡ ಮತ್ತು ಇಂಗ್ಲಿಷ್ನಲ್ಲಿ ಚಿತ್ರೀಕರಿಸಲಾಗಿದ್ದು, ಬಳಿಕ ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ಡಬ್ ಮಾಡಿ ಬಿಡುಗಡೆ ಮಾಡಲಾಗುತ್ತದೆ.
ಇದನ್ನು ಓದಿ : ಭಾರತದ ಬಹುನಿರೀಕ್ಷಿತ ಸಿನಿಮಾಗಳ ಲಿಸ್ಟ್ನಲ್ಲಿ ಟಾಕ್ಸಿಕ್ಗೆ 1ನೇ ಸ್ಥಾನ

ಭಾರೀ ನಿರೀಕ್ಷೆ ಹುಟ್ಟುಹಾಕಿರುವ Toxic
ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ವೆಂಕಟ್ ಕೆ. ನಾರಾಯಣ ಹಾಗೂ ಯಶ್ ಜಂಟಿಯಾಗಿ ಚಿತ್ರವನ್ನು ನಿರ್ಮಿಸಿದ್ದಾರೆ. ರವಿ ಬಸ್ರೂರ್ ಸಂಗೀತ ಸಂಯೋಜಿಸಿದ್ದು, ಉಜ್ವಲ್ ಕುಲಕರ್ಣಿ ಸಂಕಲನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಯಶ್ ಅವರ ವಿಭಿನ್ನ ಲುಕ್, ಗೀತು ಮೋಹನ್ದಾಸ್ ಅವರ ನಿರ್ದೇಶನ ಹಾಗೂ ಬಹುಭಾಷಾ ಮಟ್ಟದಲ್ಲಿ ಮೂಡಿಬರುತ್ತಿರುವ ಸಿನಿಮಾ ಎಂಬ ಕಾರಣಕ್ಕೆ ‘ಟಾಕ್ಸಿಕ್’ ಈಗಾಗಲೇ ಭಾರೀ ನಿರೀಕ್ಷೆ ಹುಟ್ಟುಹಾಕಿದೆ.
ಇದೀಗ ಟ್ರೈಲರ್ ಮೂಲಕ ಚಿತ್ರತಂಡ ಯಾವ ರೀತಿಯ ಲೋಕವನ್ನು ಪ್ರೇಕ್ಷಕರಿಗೆ ಪರಿಚಯಿಸಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.

ಇದನ್ನು ನೋಡಿ : ಸಭಾಪತಿ ಸ್ಥಾನಕ್ಕೆ ಹೊರಟ್ಟಿ ರಾಜೀನಾಮೆ – ಗಾಯತ್ರಿ ಶಾಂತೇಗೌಡಗೆ ಒಲಿದ ಅದೃಷ್ಟ




