Nandi Hills ಮಾನ್ಸೂನ್ ಮ್ಯಾರಥಾನ್ – ಆ.9 ರಂದು ನಂದಿಬೆಟ್ಟಕ್ಕೆ ವಾಹನಗಳಿಗೆ ನೋ ಎಂಟ್ರಿ

ವೀಕೆಂಡ್ ಬಂದರೆ ಸಾಕು ಬೆಂಗಳೂರಿನ ಜನರು ನಂದಿಬೆಟ್ಟದತ್ತ ಪ್ರವಾಸಕ್ಕೆ ತೆರಳುವುದು ಸಾಮಾನ್ಯ. ಆದರೆ ಈ ಭಾನುವಾರ (ಆಗಸ್ಟ್ 9) ನಂದಿಬೆಟ್ಟಕ್ಕೆ ಭೇಟಿ ನೀಡಲು ಯೋಜನೆ ಮಾಡಿಕೊಂಡಿರುವ ಪ್ರವಾಸಿಗರಿಗೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಮಹತ್ವದ ಸೂಚನೆ ನೀಡಿದೆ.
ಆ.9 ರಂದು ನಂದಿಬೆಟ್ಟಕ್ಕೆ ವಾಹನಗಳಿಗೆ ನೋ ಎಂಟ್ರಿ
ನಂದಿಹಿಲ್ಸ್ ಮಾನ್ಸೂನ್ ಮ್ಯಾರಥಾನ್ ಹಿನ್ನೆಲೆಯಲ್ಲಿ ಆಗಸ್ಟ್ 8ರ ರಾತ್ರಿ 11 ಗಂಟೆಯಿಂದ ಆಗಸ್ಟ್ 9ರ ಮಧ್ಯಾಹ್ನ 12 ಗಂಟೆಯವರೆಗೆ ಕಾರಹಳ್ಳಿ ಕ್ರಾಸ್ನಿಂದ ನಂದಿಬೆಟ್ಟದವರೆಗಿನ ರಸ್ತೆಯಲ್ಲಿ ಎಲ್ಲಾ ಸಾಮಾನ್ಯ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ. ಪ್ರಭು ಆದೇಶ ಹೊರಡಿಸಿದ್ದಾರೆ.
ಇದನ್ನು ಓದಿ : ಪ್ರವಾಸಿ ತಾಣ Nandi ಬೆಟ್ಟದಲ್ಲಿ ಬೆಂಕಿ ಅವಘಡ..!!

4,500ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸುವ ನಿರೀಕ್ಷೆ
ಈ ಬಾರಿ ನಡೆಯಲಿರುವ ನಂದಿಹಿಲ್ಸ್ ಮಾನ್ಸೂನ್ ಮ್ಯಾರಥಾನ್ನಲ್ಲಿ 10 ಕಿ.ಮೀ. ಹಾಗೂ 21 ಕಿ.ಮೀ. ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿದ್ದು, ಸುಮಾರು 4,500ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸುವ ನಿರೀಕ್ಷೆಯಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ನೆರವೇರಿಸಲಿದ್ದಾರೆ.
ಯಾರಿಗೆ ವಿಶೇಷ ಪಾಸ್
ಮ್ಯಾರಥಾನ್ನಲ್ಲಿ ಭಾಗವಹಿಸುವ ಸ್ಪರ್ಧಿಗಳು ಹಾಗೂ ಆಯೋಜಕರ ವಾಹನಗಳಿಗೆ ಮಾತ್ರ ವಿಶೇಷ ಪಾಸ್ ನೀಡಲಾಗಿದ್ದು, ಪಾಸ್ ಹೊಂದಿರುವ ವಾಹನಗಳಿಗೆ ಮಾತ್ರ ನಂದಿಬೆಟ್ಟ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.

ಜಿಲ್ಲಾಡಳಿತದ ಸೂಚನೆಗಳನ್ನು ಪಾಲಿಸುವಂತೆ ಮನವಿ
ಮ್ಯಾರಥಾನ್ ಸುಗಮವಾಗಿ ನಡೆಯುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ಭಾನುವಾರ ನಂದಿಬೆಟ್ಟಕ್ಕೆ ಭೇಟಿ ನೀಡಲು ಉದ್ದೇಶಿಸಿರುವ ಪ್ರವಾಸಿಗರು ತಮ್ಮ ಪ್ರಯಾಣದ ಯೋಜನೆಯನ್ನು ಬದಲಿಸಿಕೊಳ್ಳುವಂತೆ ಹಾಗೂ ಜಿಲ್ಲಾಡಳಿತದ ಸೂಚನೆಗಳನ್ನು ಪಾಲಿಸುವಂತೆ ಮನವಿ ಮಾಡಲಾಗಿದೆ.
ಇದನ್ನು ನೋಡಿ : CONGRESS ಬಗ್ಗೆ ಜನರೇ ತೀರ್ಮಾನ ಮಾಡ್ತಾರೆ – ಹೀಗ್ಯಾಕಂದ್ರು MANKALA VAIDYA





