ಮೊದಲ ದಿನವೇ 140 ಕೋಟಿ ರೂ. ಗಳಿಸಿದ Toxic – ಕನ್ನಡಕ್ಕಿಂತ ಹಿಂದಿಯಲ್ಲಿ ಡಬಲ್ ಗಳಿಕೆ

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಬಿಡುಗಡೆಯಾದ ಮೊದಲ ದಿನವೇ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಸದ್ದು ಮಾಡಿದೆ.
ಓಣಂ ಹಾಗೂ ಈದ್ ಮಿಲಾದ್ ಹಬ್ಬದ ರಜೆಯ ಸಂದರ್ಭದಲ್ಲೂ ವಿಶ್ವದಾದ್ಯಂತ ತೆರೆಕಂಡಿರುವ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಆರಂಭಿಕ ಗಳಿಕೆಯಲ್ಲೇ ಭರ್ಜರಿ ದಾಖಲೆ ಬರೆದಿದೆ.

ಮೊದಲ ದಿನದ ಗಳಿಕೆ ಎಷ್ಟು?
ಚಿತ್ರದ ಮೊದಲ ದಿನದ ವಿಶ್ವಾದ್ಯಂತ ಒಟ್ಟು ಕಲೆಕ್ಷನ್ 140.75 ಕೋಟಿ ರೂಪಾಯಿ ತಲುಪಿದೆ ಎಂದು ವರದಿಯಾಗಿದೆ. ಭಾರತದಲ್ಲೇ ಚಿತ್ರ ಭರ್ಜರಿ ಕಲೆಕ್ಷನ್ ಮಾಡಿದ್ದು, ಮೊದಲ ದಿನದ ಒಟ್ಟು ಗಳಿಕೆ 120.75 ಕೋಟಿ ರೂಪಾಯಿ ಗ್ರಾಸ್ ಆಗಿದೆ.
ದೇಶಾದ್ಯಂತ ಸಿನಿಮಾ ಬರೋಬ್ಬರಿ 24,579 ಪ್ರದರ್ಶನಗಳನ್ನು ಕಂಡಿದ್ದು, ಹಲವು ಚಿತ್ರಮಂದಿರಗಳಲ್ಲಿ ಭಾರಿ ಜನಸ್ತೋಮ ಕಂಡುಬಂದಿದೆ.
READ THIS : Toxic ಚಿತ್ರದಲ್ಲಿ ಕಿಯಾರಾ ಅಡ್ವಾಣಿ ಪಾತ್ರವೇನು ಗೊತ್ತಾ..?

ಕನ್ನಡಕ್ಕಿಂತ ಹಿಂದಿಯಲ್ಲಿ ಡಬಲ್ ಗಳಿಕೆ
Toxic ಚಿತ್ರದ ಮೊದಲ ದಿನದ ಕಲೆಕ್ಷನ್ನಲ್ಲಿ ಗಮನ ಸೆಳೆದಿರುವುದು ಹಿಂದಿ ಆವೃತ್ತಿಯ ಪ್ರದರ್ಶನ. ಹಿಂದಿ ವರ್ಷನ್ ಮೊದಲ ದಿನವೇ 55 ಕೋಟಿ ರೂಪಾಯಿ ನೆಟ್ ಗಳಿಸಿದ್ದು, ಮೂಲ ಕನ್ನಡ ಆವೃತ್ತಿಗಿಂತಲೂ ಹೆಚ್ಚಿನ ಗಳಿಕೆ ದಾಖಲಿಸಿದೆ.
ಕನ್ನಡ ಆವೃತ್ತಿಯು ಮೊದಲ ದಿನ 23.30 ಕೋಟಿ ರೂಪಾಯಿ ನೆಟ್ ಗಳಿಸಿದೆ. ಇನ್ನು ತೆಲುಗು ಆವೃತ್ತಿ 16 ಕೋಟಿ, ತಮಿಳು ಆವೃತ್ತಿ 5.50 ಕೋಟಿ ಹಾಗೂ ಮಲಯಾಳಂ ಆವೃತ್ತಿ 1.30 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದೆ ಎಂದು ತಿಳಿದುಬಂದಿದೆ.

ವಿದೇಶದಲ್ಲೂ ಯಶ್ ಅಬ್ಬರ
ಭಾರತದ ಹೊರತಾಗಿಯೂ ‘ಟಾಕ್ಸಿಕ್’ಗೆ ಉತ್ತಮ ಆರಂಭ ಸಿಕ್ಕಿದೆ. ವಿದೇಶಿ ಮಾರುಕಟ್ಟೆಯಲ್ಲಿ ಮೊದಲ ದಿನವೇ ಸುಮಾರು 20 ಕೋಟಿ ರೂಪಾಯಿ ಗ್ರಾಸ್ ಗಳಿಕೆ ದಾಖಲಿಸಿದೆ ಎಂದು ವರದಿಯಾಗಿದೆ.
ಭಾರತ ಮತ್ತು ವಿದೇಶಿ ಮಾರುಕಟ್ಟೆಯ ಗಳಿಕೆಯನ್ನು ಒಟ್ಟುಗೂಡಿಸಿದಾಗ ಮೊದಲ ದಿನದ ವಿಶ್ವಾದ್ಯಂತ ಕಲೆಕ್ಷನ್ 140.75 ಕೋಟಿ ರೂಪಾಯಿ ತಲುಪಿದೆ.
ಆರಂಭಿಕ ದಿನವೇ ಇಷ್ಟೊಂದು ದೊಡ್ಡ ಮಟ್ಟದ ಗಳಿಕೆ ಕಂಡಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಚಿತ್ರದ ಬಾಕ್ಸ್ ಆಫೀಸ್ ಓಟ ಮತ್ತಷ್ಟು ವೇಗ ಪಡೆಯುವ ನಿರೀಕ್ಷೆ ಮೂಡಿದೆ.

MUST WATCH : ಇಡೀ ದೇಶಕ್ಕೆ SUGAR SHOCK – ಇಂದಿನ ರೇಟ್ ಕೇಳಿದ್ರೆ ಶಾಕ್ ಆಗ್ತಿರಾ.?




