ನಟ Jayam Ravi ಮನೆಯಲ್ಲಿ ಕಳ್ಳತನ : ಕಾರು ಚಾಲಕನ ಬಂಧನ; ವಜ್ರದ ಸರಕ್ಕಾಗಿ ಹುಡುಕಾಟ

ಖ್ಯಾತ ತಮಿಳು ನಟ ರವಿ ಮೋಹನ್ (ಜಯಂ ರವಿ) ಅವರ ಚೆನ್ನೈನ ನಿವಾಸದಲ್ಲಿ ನಡೆದಿದ್ದ ಕಳ್ಳತನ (Theft) ಪ್ರಕರಣಕ್ಕೆ ಸಂಬಂಧಿಸಿದಂತೆ Ravi Mohan ಅವರ ಕಾರು ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ 2.5 ಲಕ್ಷ ರೂಪಾಯಿ ನಗದನ್ನು ವಶಪಡಿಸಿಕೊಂಡಿದ್ದಾರೆ.

10 ಲಕ್ಷ ರೂಪಾಯಿ ಮೌಲ್ಯದ ವಜ್ರದ ಹಾರ ಮತ್ತು ನಗದು ಕಳವು
ಚೆನ್ನೈನ ಇಂಜಂಬಾಕ್ಕಂನಲ್ಲಿರುವ ನಟ ರವಿ ಮೋಹನ್ ಅವರ ನಿವಾಸದಲ್ಲಿ ಜೂನ್ 22ರಂದು ಬೆಲೆಬಾಳುವ ವಸ್ತುಗಳು ನಾಪತ್ತೆಯಾಗಿದ್ದವು. ಈ ಕುರಿತು ನಟನ ಮ್ಯಾನೇಜರ್ ನೀಲಾಂಕರೈ ಪೊಲೀಸ್ ಠಾಣೆಗೆ ದೂರು ನೀಡಿದ್ದು, 10 ಲಕ್ಷ ರೂಪಾಯಿ ಮೌಲ್ಯದ ವಜ್ರದ ಹಾರ ಹಾಗೂ ನಗದು ಕಳವಾಗಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು.
ಇದಕ್ಕೂ ಮುನ್ನ, ಮನೆಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಕಳ್ಳತನ ಮಾಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿತ್ತು. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಮನೆಯಲ್ಲಿ ಇದ್ದ ಸಿಬ್ಬಂದಿಯನ್ನು ಬಿಡುಗಡೆಗೊಳಿಸಿ, ಕಾನೂನು ಪ್ರಕಾರ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದರು.
ಇದನ್ನು ಓದಿ : ಮನೆಯ ಬೀಗ ಮುರಿದು 10 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಕಳ್ಳತನ

ಆರೋಪಿಯಿಂದ 2.5 ಲಕ್ಷ ರೂಪಾಯಿ ನಗದ ವಶ
ತನಿಖೆ ವೇಳೆ ಕಳೆದ ಆರು ತಿಂಗಳಿನಿಂದ ರವಿ ಮೋಹನ್ ಅವರ ಬಳಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ ರಾಜೇಶ್ ಎಂಬಾತನ ಮೇಲೆ ಅನುಮಾನ ವ್ಯಕ್ತವಾಯಿತು.
ಇನ್ನು ವಿಚಾರಣೆ ವೇಳೆ ಲಾಕರ್ ತೆರೆದು ಹಣ ಕದ್ದಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯಿಂದ 2.5 ಲಕ್ಷ ರೂಪಾಯಿ ನಗದನ್ನು ವಶಪಡಿಸಿಕೊಂಡು ನಟನಿಗೆ ಹಸ್ತಾಂತರಿಸಲಾಗಿದೆ.
ವಜ್ರದ ಹಾರ ಇನ್ನೂ ಸಿಕ್ಕಿಲ್ಲ
ಆದರೆ ದೂರಿನಲ್ಲಿ ಉಲ್ಲೇಖಿಸಿರುವ ಸುಮಾರು 10 ಲಕ್ಷ ರೂಪಾಯಿ ಮೌಲ್ಯದ ವಜ್ರದ ಹಾರ ಇನ್ನೂ ಸಿಕ್ಕಿಲ್ಲ.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ವಜ್ರದ ಹಾರ ಪತ್ತೆಗಾಗಿ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ಇದನ್ನು ನೋಡಿ : ಬೆಳ್ಳಂ ಬೆಳಗ್ಗೆ ಜೆಸಿಬಿ ಘರ್ಜನೆ – ಪುಟ್ಪಾತ್ ಒತ್ತುವರಿ ತೆರವು




