Gruha Jyothi ಫಲಾನುಭವಿಗಳಿಗೆ ಬೆಸ್ಕಾಂ ಅಪ್ಡೇಟ್ಸ್: ಜುಲೈನಲ್ಲಿ ಮೀಟರ್ ರೀಡಿಂಗ್ ಇಲ್ಲ, 3 ತಿಂಗಳ ಬಿಲ್ ಪಾವತಿಸಬೇಕು!

ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಮನೆ-ಮನೆ ಪರಿಶೀಲನೆ ಹಿನ್ನೆಲೆಯಲ್ಲಿ ಜಾತಿ ಪ್ರಮಾಣ ಪತ್ರ ಕಡ್ಡಾಯ ಎಂಬ ಗೊಂದಲಕ್ಕೆ ಬೆಸ್ಕಾಂ ತೆರೆ ಎಳೆದಿದೆ. ಜಾತಿ ಪ್ರಮಾಣ ಪತ್ರ ನೀಡುವುದು ಕಡ್ಡಾಯವಲ್ಲ, ಅದು ಕೇವಲ ಐಚ್ಛಿಕ ಮಾಹಿತಿ ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ.
ಮನೆ-ಮನೆಗೆ ಭೇಟಿ ನೀಡಿ ದಾಖಲೆ ಪರಿಶೀಲನೆ
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ Gruha Jyothi ಯೋಜನೆಯ ಫಲಾನುಭವಿಗಳ ಮರು ಪರಿಶೀಲನಾ ಕಾರ್ಯ ಜುಲೈ 1ರಿಂದ ರಾಜ್ಯಾದ್ಯಂತ ನಡೆಯುತ್ತಿದೆ. ಬೆಸ್ಕಾಂ ಸೇರಿದಂತೆ ಎಲ್ಲಾ ಎಸ್ಕಾಂಗಳ ಸಿಬ್ಬಂದಿ ಮನೆ-ಮನೆಗೆ ಭೇಟಿ ನೀಡಿ ಫಲಾನುಭವಿಗಳ ಮಾಹಿತಿ ಹಾಗೂ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

ಬೆಸ್ಕಾಂನಿಂದ ಅಧಿಕೃತ ಆದೇಶ
ಜುಲೈ 1ರಿಂದ ರಾಜ್ಯದಲ್ಲಿ ನಡೆಯುತ್ತಿರುವ ಗೃಹಜ್ಯೋತಿ ಫಲಾನುಭವಿಗಳ ಪರಿಶೀಲನೆ ನಡೆದಿದೆ ಎಂದು ಮಾಧ್ಯಮ ಪ್ರಕಟಣೆ ಮೂಲಕ ಬೆಸ್ಕಾಂ ಮಾಹಿತಿ ನೀಡಿದೆ. ಗೃಹ ಜ್ಯೋತಿ ಪರಿಶೀಲನೆ ಅರ್ಜಿ ಭರ್ತಿ ಮಾಡಿ ಹಾಗೂ ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳು ತಮ್ಮ ಮನೆಗೆ ಭೇಟಿ ನೀಡುವ ಮೀಟರ್ ರೀಡರ್ಗಳು ಹಾಗೂ ಬೆಸ್ಕಾಂ ಸಿಬ್ಬಂದಿಗಳಿಗೆ ಪೂರ್ಣ ಸಹಕಾರ ನೀಡುವಂತೆ ಸರ್ಕಾರ ಮನವಿ ಮಾಡಿದೆ.
ಇದನ್ನು ಓದಿ : ಗೃಹಜ್ಯೋತಿ ಫಲಾನುಭವಿಗಳೇ ಉಚಿತ ವಿದ್ಯುತ್ ಪಡೆಯಲು ಈ ದಾಖಲೆ ಕಡ್ಡಾಯ
ಮನೆ ಭೇಟಿ ವೇಳೆ ಸಂಗ್ರಹಿಸುವ ಮಾಹಿತಿ
- ವಿದ್ಯುತ್ ಸರಬರಾಜು ಕಂಪನಿಯ ಹೆಸರು
- ವಿದ್ಯುತ್ ಬಿಲ್ ಖಾತೆ ಸಂಖ್ಯೆ
- ಆಧಾರ್ನಲ್ಲಿರುವಂತೆ ಫಲಾನುಭವಿಯ ಹೆಸರು
- ಆಧಾರ್ ಸಂಖ್ಯೆ
- ಸ್ವಂತ ಅಥವಾ ಬಾಡಿಗೆ ಮನೆಯ ವಿವರ
- ಪಡಿತರ ಚೀಟಿ ಮಾಹಿತಿ
- ಮತದಾರರ ಗುರುತಿನ ಚೀಟಿ (EPIC) ಸಂಖ್ಯೆ
- ಜಾತಿ ವಿವರ (ಐಚ್ಛಿಕ)
- ತೆರಿಗೆ ವಿವರ
- ಫಲಾನುಭವಿಯ ವೃತ್ತಿ

ಮೊಬೈಲ್ ಆಪ್ ಮೂಲಕ ಮಾಹಿತಿ ಸಂಗ್ರಹ
ಬಾಡಿಗೆದಾರರು ಬಾಡಿಗೆ ಒಪ್ಪಂದ ಪತ್ರವನ್ನು ನೀಡಬೇಕಾಗುತ್ತದೆ. ಮೀಟರ್ ರೀಡರ್ಗಳು ಹಾಗೂ ಎಸ್ಕಾಂ ಸಿಬ್ಬಂದಿ ಮೊಬೈಲ್ ಆ್ಯಪ್ ಮೂಲಕ ಸ್ಥಳದಲ್ಲೇ ಮಾಹಿತಿಯನ್ನು ದಾಖಲಿಸಿ, ಘೋಷಣಾ ಪತ್ರ ಭರ್ತಿ ಮಾಡುವ ಮೂಲಕ ಪರಿಶೀಲನಾ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತಿದ್ದಾರೆ.
ಪ್ರತಿ ತಿಂಗಳು ಗರಿಷ್ಠ 200 ಉಚಿತ
ಗೃಹಜ್ಯೋತಿ ಯೋಜನೆಯಡಿ ಗೃಹ ಬಳಕೆದಾರರಿಗೆ ಪ್ರತಿ ತಿಂಗಳು ಗರಿಷ್ಠ 200 ಯೂನಿಟ್ವರೆಗೆ ಉಚಿತ ವಿದ್ಯುತ್ ಸೌಲಭ್ಯ ನೀಡಲಾಗುತ್ತಿದೆ. ಈ ಯೋಜನೆ ಕೇವಲ ಗೃಹ ಬಳಕೆಯ ವಿದ್ಯುತ್ ಸಂಪರ್ಕಗಳಿಗೆ ಮಾತ್ರ ಅನ್ವಯವಾಗಿದ್ದು, ವಾಣಿಜ್ಯ ವಿದ್ಯುತ್ ಸಂಪರ್ಕಗಳಿಗೆ ಅನ್ವಯಿಸುವುದಿಲ್ಲ.

ಇದನ್ನು ನೋಡಿ : ಡಿಕೆ ಸರ್ಕಾರಕ್ಕೆ ತಿಂಗಳ ಸಂಭ್ರಮ ಇರಬಹುದು! ಆದ್ರೆ ರೈತರಿಗೆ, ನಾಡಿನ ಜನತೆಗೆ ಏನಿದೆ..!?




