ಕಂಠಪೂರ್ತಿ ಕುಡಿದು Air Gun ನಿಂದ 45 ನಿಮಿಷ ಮನಸೋಇಚ್ಛೆ ಫೈರ್ ಮಾಡಿದ ಟೆಕ್ಕಿ!

ಟೆಕ್ಕಿಯೊಬ್ಬ ಏರ್ಗನ್ ಮೂಲಕ ಕಾರ್ ಪಾರ್ಕಿಂಗ್ ಶೆಡ್ ಮೇಲೆ ಫೈರಿಂಗ್ ಮಾಡಿದ ಘಟನೆ ಬೆಂಗಳೂರಿನ ಆನೇಕಲ್ನ ಬಂಡಾಪುರ ಸಮೀಪದ ಸಿಪಾನಿ ಅಪಾರ್ಟ್ಮೆಂಟ್ನಲ್ಲಿ ನಡೆದಿದೆ. ಲಕ್ನೋ ಮೂಲದ ಅನುರಾಗ್ ತಿವಾರಿ ಎಂಬಾತ ಕುಡಿದ ಮತ್ತಿನಲ್ಲಿ ಈ ಕೃತ್ಯ ಎಸಗಿದ್ದಾನೆ.
ಇದನ್ನು ಓದಿ : ಫೈರಿಂಗ್ ಮಾಡಿ ಮಚ್ಚಿನಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ!

ಕಂಠಪೂರ್ತಿ ಕುಡಿದು Air Gun ನಿಂದ ಫೈರಿಂಗ್
ಈತ ವೈಟ್ಫೀಲ್ಡ್ನ ಖಾಸಗಿ ಕಂಪನಿಯಲ್ಲಿ ಐಟಿ ಉದ್ಯೋಗಿಯಾಗಿದ್ದ. ಕಳೆದ ಎಂಟು ತಿಂಗಳಿನಿಂದ ಪ್ಲಾಟ್ ಬಾಡಿಗೆಗೆ ಪಡೆದು ವಾಸ ಮಾಡುತ್ತಿದ್ದ. ಕಳೆದ ರಾತ್ರಿ ಕಂಠ ಪೂರ್ತಿ ಕುಡಿದು, ಪೋನಿನಲ್ಲಿ ಜೋರಾಗಿ ಕೂಗಾಡಿ ಮಾತನಾಡುತ್ತಾ. ಬಳಿಕ ಬಾಲ್ಕನಿಯಿಂದ ಏರ್ಗನ್ ಮೂಲಕ 45 ನಿಮಿಷಗಳ ಕಾಲ, ಕಾರು ಮತ್ತು ಪಾರ್ಕಿಂಗ್ ಶೇಡ್ ಶೀಟ್ಗಳ ಮೇಲೆ ಫೈರ್ ಮಾಡಿದ್ದಾನೆ.
ಸೆಕ್ಯುರಿಟಿ ಗಾರ್ಡ್ಗಳ ಮೇಲೂ ದಾಳಿ
ಶಬ್ದ ಕೇಳಿಸಿಕೊಂಡು ಅಲ್ಲಿಗೆ ಬಂದಿದ್ದ ಸೆಕ್ಯುರಿಟಿ ಗಾರ್ಡ್ಗಳ ಮೇಲೂ ದಾಳಿ ಮಾಡಿದ್ದು, ಅವರು ಕೂಡಲೇ ಸೂರ್ಯನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇನ್ನು ಸ್ಥಳಕ್ಕೆ ಬಂದ ಪೊಲೀಸರು ಆರೋಪಿ ಅನುರಾಗ್ ತಿವಾರಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನು ನೋಡಿ : SHORT CIRCUTEಗೆ ಹೊತ್ತಿ ಉರಿದ ಮನೆ – ಲಕ್ಷಾಂತರ ಮೌಲ್ಯದ ವಸ್ತುಗಳು ನಾಶ




