ಕಾಂಗ್ರೆಸ್ ಸಂಘಟನೆಯಲ್ಲಿ Siddu ಗೆ ಮತ್ತಷ್ಟು ಬಲ – ಕಾಂಗ್ರೆಸ್ CWC ಸದಸ್ಯರಾಗಿ ಸಿದ್ದು ನೇಮಕ

ಕಾಂಗ್ರೆಸ್ ಹೈಕಮಾಂಡ್ ಹಿರಿಯ ನಾಯಕ ಸಿದ್ದರಾಮಯ್ಯ ಅವರಿಗೆ ಮಹತ್ವದ ಜವಾಬ್ದಾರಿಯೊಂದನ್ನ ನೀಡಿದೆ. ಕಾಂಗ್ರೆಸ್ನ ಅತ್ಯುನ್ನತ ನಿರ್ಧಾರ ಕೈಗೊಳ್ಳುವ ಸಮಿತಿಯಾದ ಕಾಂಗ್ರೆಸ್ ವರ್ಕಿಂಗ್ ಕಮಿಟಿ, ಅಂದರೆ, CWC ಸದಸ್ಯರಾಗಿ ಸಿದ್ದರಾಮಯ್ಯ ಅವರನ್ನ ನೇಮಕ ಮಾಡಿ ಅಧಿಕೃತ ಆದೇಶ ಹೊರಡಿಸಿದೆ.
ಈ ಮೂಲಕ ರಾಜ್ಯ ರಾಜಕೀಯದ ಜೊತೆಗೆ ರಾಷ್ಟ್ರೀಯ ಮಟ್ಟದಲ್ಲೂ ಸಿದ್ದು ಪಾತ್ರ ಮತ್ತಷ್ಟು ವಿಸ್ತಾರಗೊಂಡಿದೆ.

ಕಾಂಗ್ರೆಸ್ CWC ಸದಸ್ಯರಾಗಿ ಸಿದ್ದು ನೇಮಕ
ಇನ್ನು ಈವರೆಗೆ ಕಾಂಗ್ರೆಸ್ ವರ್ಕಿಂಗ್ ಕಮಿಟಿಯ ವಿಶೇಷ ಆಹ್ವಾನಿತ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದ Siddu , ಇದೀಗ ಪೂರ್ಣ ಪ್ರಮಾಣದ ಸದಸ್ಯರಾಗಿ ನೇಮಕಗೊಂಡಿದ್ದಾರೆ. ರಾಜ್ಯದಲ್ಲಿ ಕೋರ್ ಕಮಿಟಿ ರಚನೆಗೆ ಸಿದ್ದರಾಮಯ್ಯ ಒತ್ತಾಯಿಸುತ್ತಿದ್ದ ಹಿನ್ನಲೆ, ಅದರ ನೇತೃತ್ವ ವಹಿಸುವ ಲೆಕ್ಕಾಚಾರವೂ ನಡೆದಿತ್ತು. ಈ ಬೆಳವಣಿಗೆಗಳ ನಡುವೆಯೇ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರಿಗೆ ರಾಷ್ಟ್ರೀಯ ಮಟ್ಟದ ಸ್ಥಾನಮಾನ ನೀಡಿ ಮಹತ್ವದ ಸಂದೇಶ ರವಾನಿಸಿದ್ದು, ಕರ್ನಾಟಕದ ರಾಜಕೀಯದಲ್ಲಿ ಅವರ ಅನುಭವ ಹಾಗೂ ಪಕ್ಷದ ಮೇಲಿನ ನಿಷ್ಠೆಗೆ ನೀಡಿದ ಗೌರವ ಎನ್ನಲಾಗುತ್ತಿದೆ.
ಇದನ್ನು ಓದಿ : ಹೇಗಿತ್ತು ಸಿದ್ದರಾಮಯ್ಯನವರ ಸುದೀರ್ಘ ರಾಜಕಾರಣದ ಹಾದಿ? ಇಲ್ಲಿದೆ

ಕಾಂಗ್ರೆಸ್ ಸಂಘಟನೆಯಲ್ಲಿ Siddu ಗೆ ಮತ್ತಷ್ಟು ಬಲ
ಇನ್ನು ರಾಜ್ಯ ರಾಜಕೀಯದಾಚೆಗೂ ರಾಷ್ಟ್ರೀಯ ರಾಜಕೀಯದಲ್ಲಿ ಸಿದ್ದರಾಮಯ್ಯ ಅವರನ್ನು ಸಕ್ರಿಯವಾಗಿಡುವ ಉದ್ದೇಶದಿಂದಲೇ ಈ ಮಹತ್ವದ ಜವಾಬ್ದಾರಿ ನೀಡಲಾಗಿದೆ ಎನ್ನಲಾಗುತ್ತಿದೆ. ಇನ್ನು ಪಕ್ಷದ ರಾಷ್ಟ್ರೀಯ ಸಂಘಟನೆಯಲ್ಲಿ ಅವರ ಸ್ಥಾನಮಾನ ಮತ್ತಷ್ಟು ಬಲಗೊಂಡಿದ್ದು, ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಮಟ್ಟದ ರಾಜಕೀಯ ಬೆಳವಣಿಗೆಗಳಲ್ಲೂ ಸಿದ್ದರಾಮಯ್ಯ ಅವರ ಪ್ರಭಾವ ಹೆಚ್ಚಾಗುವ ಸಾಧ್ಯತೆ ಇದೆ.

ಅತ್ಯುನ್ನತ ಸಂಘಟನಾ ವೇದಿಕೆಯಲ್ಲಿ ಸ್ಥಾನ ನೀಡಿ ಗೌರವ
ಒಟ್ಟಿನಲ್ಲಿ ಮುಖ್ಯಮಂತ್ರಿ ಹುದ್ದೆಯಿಂದ ಹೊರಬಂದ ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರಿಗೆ ಅತ್ಯುನ್ನತ ಸಂಘಟನಾ ವೇದಿಕೆಯಲ್ಲಿ ಸ್ಥಾನ ನೀಡಿ ಗೌರವ ಸಲ್ಲಿಸಿದ್ದು, ಇದು ಸಿದ್ದರಾಮಯ್ಯ ಅವರ ರಾಜಕೀಯ ಪ್ರಭಾವಕ್ಕೆ ಮತ್ತೊಂದು ಮುದ್ರೆ ಬಿದ್ದಂತಾಗಿದೆ.

ಇದನ್ನು ನೋಡಿ : DKS ಪದಗ್ರಹಣಕ್ಕೆ ಅಭಿಮಾನಿಗಳಲ್ಲಿ ಸಂಭ್ರಮೋತ್ಸವ- ಲಕ್ಷ ಲಕ್ಷ ಲಾಡು ತಯಾರಿಸಿ, ಹಂಚಿಕೆ




