ವಿರಾಟ್ Kohli ಯ ದಾಖಲೆ ಮುರಿದ ಶುಭಮನ್ ಗಿಲ್

ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ 6 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಈ ಪಂದ್ಯದಲ್ಲಿ ನಾಯಕ ಶುಭಮನ್ ಗಿಲ್ ಅವರ ಅದ್ಭುತ ಅರ್ಧಶತಕ ತಂಡದ ಗೆಲುವಿಗೆ ಪ್ರಮುಖ ಕಾರಣವಾಗಿದ್ದು, ಇದೇ ವೇಳೆ ಅವರು ಕಿಂಗ್ Kohli ಹೆಸರಿನಲ್ಲಿದ್ದ ಮಹತ್ವದ ದಾಖಲೆಯನ್ನೂ ಮುರಿದಿದ್ದಾರೆ.
75 ಎಸೆತಗಳಲ್ಲಿ 80 ರನ್
ಬರ್ಮಿಂಗ್ಹ್ಯಾಮ್ನ ಎಡ್ಜ್ಬಾಸ್ಟನ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ 259 ರನ್ಗಳ ಗುರಿ ಬೆನ್ನಟ್ಟಿದ ಭಾರತಕ್ಕೆ ಗಿಲ್ 75 ಎಸೆತಗಳಲ್ಲಿ 80 ರನ್ಗಳ ಅಮೋಘ ಇನ್ನಿಂಗ್ಸ್ ಆಡಿದರು. 11 ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಸಿದ ಗಿಲ್, ಉಪನಾಯಕ ಶ್ರೇಯಸ್ ಅಯ್ಯರ್ ಜೊತೆ ಮೂರನೇ ವಿಕೆಟ್ಗೆ 101 ರನ್ಗಳ ಅಮೂಲ್ಯ ಜೊತೆಯಾಟ ಕಟ್ಟಿದರು. ಆದರೆ ಸ್ನಾಯು ಸೆಳೆತದಿಂದಾಗಿ ಅವರು ನಿವೃತ್ತರಾಗಬೇಕಾಯಿತು.

500ಕ್ಕೂ ಹೆಚ್ಚು ಅಂತರರಾಷ್ಟ್ರೀಯ ರನ್
ಈ ಇನ್ನಿಂಗ್ಸ್ನೊಂದಿಗೆ ಎಡ್ಜ್ಬಾಸ್ಟನ್ನಲ್ಲಿ ಭಾರತದ ನಾಯಕನಾಗಿ ಗಿಲ್ ಅವರ ಒಟ್ಟು ಅಂತರರಾಷ್ಟ್ರೀಯ ರನ್ಗಳ ಸಂಖ್ಯೆ 510ಕ್ಕೆ ಏರಿಕೆಯಾಗಿದೆ. ಇದರೊಂದಿಗೆ ಇಂಗ್ಲೆಂಡ್ನ ಒಂದೇ ಕ್ರೀಡಾಂಗಣದಲ್ಲಿ 500ಕ್ಕೂ ಹೆಚ್ಚು ಅಂತರರಾಷ್ಟ್ರೀಯ ರನ್ ಗಳಿಸಿದ ಮೊದಲ ಭಾರತೀಯ ನಾಯಕ ಎಂಬ ಅಪರೂಪದ ದಾಖಲೆಯನ್ನು ಅವರು ತಮ್ಮದಾಗಿಸಿಕೊಂಡಿದ್ದಾರೆ.
ಇದನ್ನು ಓದಿ : ಕಿಂಗ್ ಕೊಹ್ಲಿಯನ್ನೇ ಹಿಂದಿಕ್ಕಿದ ಶುಭ್ಮನ್ ಗಿಲ್
Kohli ದಾಖಲೆ ಮುರಿದ ಗಿಲ್
ಈ ಹಿಂದೆ ಎಡ್ಜ್ಬಾಸ್ಟನ್ನಲ್ಲಿ ಭಾರತದ ನಾಯಕನಾಗಿ ಅತಿ ಹೆಚ್ಚು ರನ್ ಗಳಿಸಿದ್ದ ದಾಖಲೆಯು ವಿರಾಟ್ ಕೊಹ್ಲಿ ಹೆಸರಿನಲ್ಲಿತ್ತು.
ಕೊಹ್ಲಿ ಐದು ಪಂದ್ಯಗಳ ಆರು ಇನ್ನಿಂಗ್ಸ್ಗಳಲ್ಲಿ 469 ರನ್ ಗಳಿಸಿದ್ದರು. ಗಿಲ್ ಇದೀಗ ಆ ದಾಖಲೆಯನ್ನು ಹಿಂದಿಕ್ಕಿದ್ದಾರೆ.

ಒಂದೇ ಸ್ಥಳದಲ್ಲಿ 500 ಕ್ಕೂ ಹೆಚ್ಚು ರನ್ ಗಳಿಸಿದ ಏಳನೇ ನಾಯಕ
ಇದಲ್ಲದೆ, ಸುನಿಲ್ ಗವಾಸ್ಕರ್, ಮೊಹಮ್ಮದ್ ಅಜರುದ್ದೀನ್, ಸೌರವ್ ಗಂಗೂಲಿ, ಎಂಎಸ್ ಧೋನಿ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಬಳಿಕ ಒಂದೇ ಕ್ರೀಡಾಂಗಣದಲ್ಲಿ 500ಕ್ಕೂ ಹೆಚ್ಚು ಅಂತರರಾಷ್ಟ್ರೀಯ ರನ್ ಗಳಿಸಿದ ಭಾರತದ ಏಳನೇ ನಾಯಕರಾಗಿ ಗಿಲ್ ಹೊರಹೊಮ್ಮಿದ್ದಾರೆ.
ಒಂದೇ ಕ್ರೀಡಾಂಗಣದಲ್ಲಿ ಭಾರತದ ನಾಯಕನಾಗಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಇನ್ನೂ ಮೊಹಮ್ಮದ್ ಅಜರುದ್ದೀನ್ ಹೆಸರಿನಲ್ಲಿದೆ. ಅವರು 1990ರಿಂದ 1999ರ ಅವಧಿಯಲ್ಲಿ ಶಾರ್ಜಾ ಕ್ರೀಡಾಂಗಣದಲ್ಲಿ ನಾಯಕನಾಗಿ 954 ರನ್ ಕಲೆಹಾಕಿದ್ದರು.

ವಿಶ್ವ ದಾಖಲೆ ಯಾರ ಹೆಸರಿನಲ್ಲಿದೆ?
ಒಂದೇ ಸ್ಥಳದಲ್ಲಿ ನಾಯಕನಾಗಿ ಅತಿ ಹೆಚ್ಚು ರನ್ ಗಳಿಸಿದ ವಿಶ್ವ ದಾಖಲೆ ಆಸ್ಟ್ರೇಲಿಯಾದ ಮಾಜಿ ನಾಯಕ ಅಲನ್ ಬಾರ್ಡರ್ ಅವರದ್ದಾಗಿದೆ.
ಬಾರ್ಡರ್ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಾಯಕನಾಗಿ 48 ಪಂದ್ಯಗಳನ್ನು ಆಡಿದ್ದಾರೆ ಮತ್ತು 48 ಇನ್ನಿಂಗ್ಸ್ಗಳಲ್ಲಿ 1,670 ರನ್ ಗಳಿಸಿದ್ದಾರೆ.
ಇಂಗ್ಲೆಂಡ್ನ ಒಂದೇ ಕ್ರೀಡಾಂಗಣದಲ್ಲಿ ಭಾರತೀಯ ನಾಯಕರ ಅತಿ ಹೆಚ್ಚು ರನ್
- ಶುಭಮನ್ ಗಿಲ್ – 510 ರನ್
- ವಿರಾಟ್ ಕೊಹ್ಲಿ – 469 ರನ್
- ಮೊಹಮ್ಮದ್ ಅಜರುದ್ದೀನ್ – 322 ರನ್

ಇದನ್ನು ನೋಡಿ : ಜೈಲಿನಿಂದ ಮೂವರು ಕೈದಿಗಳು ಪರಾರಿ ಕೇಸ್ – PRIYANK KHARGE ವಿರುದ್ಧ ಮಾಜಿ ಸಚಿವ ವಾಗ್ದಾಳಿ




