ತೆಲುಗು ಚಿತ್ರರಂಗದಲ್ಲಿ ಇತಿಹಾಸ ಬರೆದ Samantha – ಹಲವು ದಾಖಲೆ ದೂಳಿಪಟ

ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ಋತ್ ಪ್ರಭು ಅವರ ‘ಮಾ ಇಂಟಿ ಬಂಗಾರಂ’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, 100 ಕೋಟಿ ರೂಪಾಯಿ ಕ್ಲಬ್ಗೆ ಸೇರುವ ಹಂತದಲ್ಲಿದೆ. ವಿಶ್ವದಾದ್ಯಂತ ಈಗಾಗಲೇ ಸುಮಾರು 98 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿರುವ ಈ ಚಿತ್ರ, ತೆಲುಗು ಚಿತ್ರರಂಗದಲ್ಲಿ ಹೊಸ ದಾಖಲೆ ಬರೆಯುವತ್ತ ಹೆಜ್ಜೆ ಇಟ್ಟಿದೆ.
ಟೀಕೆಗಳಿಗೆ ತಮ್ಮ ಅಭಿನಯದ ಮೂಲಕವೇ ಉತ್ತರ
ಕಳೆದ ವರ್ಷ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಸಮಂತಾ, ಚಿತ್ರರಂಗದಲ್ಲಿ ಅವಕಾಶಗಳು ಕಡಿಮೆಯಾಗಿವೆ ಎಂದು ಹೇಳಿದ್ದರು. ಅಲ್ಲದೆ, ಹಲವು ಸಿನಿ ವಿಶ್ಲೇಷಕರು ಅವರ ಸಿನಿ ಪಯಣ ಅಂತ್ಯ ಹಂತಕ್ಕೆ ತಲುಪಿದೆ ಎಂದು ಅಭಿಪ್ರಾಯಪಟ್ಟಿದ್ದರು.
ಆದರೆ ‘ಮಾ ಇಂಟಿ ಬಂಗಾರಂ’ ಚಿತ್ರದ ಯಶಸ್ಸಿನ ಮೂಲಕ ಸಮಂತಾ ಎಲ್ಲ ಟೀಕೆಗಳಿಗೆ ತಮ್ಮ ಅಭಿನಯದ ಮೂಲಕವೇ ಉತ್ತರ ನೀಡಿದ್ದಾರೆ.

ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಹೊಸ ದಾಖಲೆ
ಇತ್ತೀಚಿನ ದಿನಗಳಲ್ಲಿ 100 ಕೋಟಿ ರೂಪಾಯಿ ಗಳಿಕೆ ಮಾಡುವುದು ದೊಡ್ಡ ವಿಷಯವಲ್ಲದಿದ್ದರೂ, ಮಹಿಳಾ ಪ್ರಧಾನ ಸಿನಿಮಾ ಆ ಸಾಧನೆ ಮಾಡುತ್ತಿರುವುದು ಅಪರೂಪ.
‘ಮಾ ಇಂಟಿ ಬಂಗಾರಂ’ ಸಿನಿಮಾ 100 ಕೋಟಿ ಕ್ಲಬ್ ಪ್ರವೇಶಿಸಿದರೆ, ದಕ್ಷಿಣ ಭಾರತದ ಚಿತ್ರರಂಗದ ಇತಿಹಾಸದಲ್ಲಿ ಈ ಸಾಧನೆ ಮಾಡುವ ಎರಡನೇ ಮಹಿಳಾ ಪ್ರಧಾನ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
ಇದನ್ನು ಓದಿ : ದೇವರ ಮಕ್ಕಳ ಜೊತೆ ದೀಪಾವಳಿ ಆಚರಿಸಿದ ಸಮಂತಾ

ಈ ಹಿಂದೆ ಅನುಷ್ಕಾ ಶೆಟ್ಟಿ ಅಭಿನಯದ ‘ರುದ್ರಮ್ಮದೇವಿ’ ಸುಮಾರು 86 ಕೋಟಿ ರೂಪಾಯಿ ಹಾಗೂ ‘ಅರುಂಧತಿ’ 2009ರಲ್ಲೇ 75 ಕೋಟಿ ರೂಪಾಯಿ ಗಳಿಕೆ ಮಾಡಿದ್ದವು.
ಕೀರ್ತಿ ಸುರೇಶ್ ನಟನೆಯ ‘ಮಹಾನಟಿ’ ಕೂಡ 90 ಕೋಟಿ ರೂಪಾಯಿಯ ಸಮೀಪ ಕಲೆಕ್ಷನ್ ಮಾಡಿತ್ತು. ಇದೀಗ ಈ ಎಲ್ಲ ದಾಖಲೆಗಳನ್ನು ‘ಮಾ ಇಂಟಿ ಬಂಗಾರಂ’ ಹಿಂದಿಕ್ಕಿದೆ.
ದಕ್ಷಿಣ ಭಾರತದಲ್ಲಿ ಎರಡನೇ 100 ಕೋಟಿ ಮಹಿಳಾ ಪ್ರಧಾನ ಸಿನಿಮಾ?
ಕಳೆದ ವರ್ಷ ಬಿಡುಗಡೆಯಾಗಿದ್ದ ಮಲಯಾಳಂನ ‘ಲೋಕಃ: ಚಾಪ್ಟರ್ 1’ ಸಿನಿಮಾ ಸುಮಾರು 300 ಕೋಟಿ ರೂಪಾಯಿ ಗಳಿಕೆ ಮಾಡಿ ದಕ್ಷಿಣ ಭಾರತದ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಮಹಿಳಾ ಪ್ರಧಾನ ಸಿನಿಮಾ ಎಂಬ ದಾಖಲೆ ನಿರ್ಮಿಸಿತ್ತು.
ಇದೀಗ ಸಮಂತಾ ಅಭಿನಯದ ‘ಮಾ ಇಂಟಿ ಬಂಗಾರಂ’ 100 ಕೋಟಿ ಗಡಿ ದಾಟುವ ಮೂಲಕ ಮತ್ತೊಂದು ಮೈಲಿಗಲ್ಲು ನಿರ್ಮಿಸಲು ಸಜ್ಜಾಗಿದೆ.

ಎರಡನೇ ಭಾಗಕ್ಕೂ ಸಿದ್ಧತೆ
‘ಮಾ ಇಂಟಿ ಬಂಗಾರಂ’ ಚಿತ್ರದ ಭರ್ಜರಿ ಯಶಸ್ಸಿನ ಬೆನ್ನಲ್ಲೇ ಇದರ ಎರಡನೇ ಭಾಗವೂ ಬರಲಿದೆ ಎಂದು ಚಿತ್ರತಂಡ ಈಗಾಗಲೇ ಘೋಷಿಸಿದೆ.
ಸಮಂತಾ ಅವರ ಆಪ್ತ ಸ್ನೇಹಿತೆ ನಂದಿನಿ ರೆಡ್ಡಿ ಚಿತ್ರಕ್ಕೆ ನಿರ್ದೇಶನ ಮಾಡಿದ್ದು, ಸಮಂತಾ ಹಾಗೂ ಅವರ ಪತಿ ರಾಜ್ ನಿಧಿಮೋರು ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ.
ಇದನ್ನು ನೋಡಿ : ಲಾರಿ, ಕ್ರೂಸರ್ ನಡುವೆ ಭೀಕರ ಡಿಕ್ಕಿ ಪ್ರವಾಸಕ್ಕೆ ತೆರಳುತ್ತಿದ್ದ 7 ಮಂದಿ ಸಾ*
ಚಿತ್ರದಲ್ಲಿ ಸಮಂತಾ ಜೊತೆಗೆ ಕನ್ನಡದ ನಟ ದಿಗಂತ್ ಮಂಚಾಲೆ ಹಾಗೂ ಗುಲ್ಷನ್ ದೇವಯ್ಯ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.





