Samantha ತಾಯಿ ಆಗುತ್ತಿರುವುದು ನಿಜ – ಕೊನೆಗೂ ಸಿಕ್ತು ಗುಡ್ ನ್ಯೂಸ್

‘ಮಾ ಇಂಟಿ ಬಂಗಾರಂ’ ಸಿನಿಮಾ ಗೆದ್ದ ಖುಷಿಯಲ್ಲಿ ನಟಿ ಸಮಂತಾ ಮಾತನಾಡುವಾಗ ಎಲ್ಲರ ಗಮನ ಅವರ ಹೊಟ್ಟೆಯ ಮೇಲೆ ನೆಟ್ಟಿತ್ತು. ಅವರು ತಾಯಿ ಆಗುತ್ತಿದ್ದಾರೆ ಎಂದು ಎಲ್ಲರೂ ಭಾವಿಸಿದ್ದರು. ಈಗ ಈ ಊಹೆ ಸರಿಯಾಗಿದೆ. ಸಮಂತಾ ತಾಯಿ ಆಗುತ್ತಿರುವ ವಿಷಯವನ್ನು ಅವರ ಆಪ್ತರೇ ಖಚಿತಪಡಿಸಿದ್ದಾರೆ.

ಮೂರೇ ದಿನಕ್ಕೆ 40+ ಕೋಟಿ ಕಲೆಕ್ಷನ್?
ಇತ್ತೀಚೆಗೆ ಬಿಡುಗಡೆಯಾದ ‘ಮಾ ಇಂಟಿ ಬಂಗಾರಂ’ ಚಿತ್ರ ಉತ್ತಮ ಪ್ರದರ್ಶನ ಕಾಣುತ್ತಿದೆ. ಚಿತ್ರದ ಯಶಸ್ಸಿನ ಖುಷಿಯಲ್ಲಿರುವ ಸಮಂತಾ ಅವರ ಬಗ್ಗೆ ಈಗ ವೈಯಕ್ತಿಕ ಜೀವನದ ವಿಚಾರವೇ ಹೆಚ್ಚು ಗಮನ ಸೆಳೆಯುತ್ತಿದೆ.
ಸಕ್ಸಸ್ ಮೀಟ್ನಲ್ಲಿ ಕಾಣಿಸಿಕೊಂಡ ಸಮಂತಾ
ಚಿತ್ರದ ಸಕ್ಸಸ್ ಮೀಟ್ ಕಾರ್ಯಕ್ರಮದಲ್ಲಿ ಸಮಂತಾ ಕಾಣಿಸಿಕೊಂಡ ವೇಳೆ ಅವರು ಧರಿಸಿದ್ದ ಉಡುಪಿನ ಕಾರಣದಿಂದ ಪ್ರೆಗ್ನೆನ್ಸಿ ಕುರಿತ ಊಹಾಪೋಹಗಳು ಆರಂಭವಾಗಿದ್ದವು. ಕಾರ್ಯಕ್ರಮದ ಬಳಿಕ ಸೋಶಿಯಲ್ ಮಿಡಯಾಗಳಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು.
ಇದನ್ನು ಓದಿ : ಅಭಿಮಾನಿಗಳ ವರ್ತನೆಗೆ ನಟಿ ಸಮಂತಾ ಕಸಿವಿಸಿ

Samantha ಪ್ರೆಗ್ನೆನ್ಸಿ ಬಗ್ಗೆ ನಿರ್ದೇಶಕಿ ನಂದಿನಿ ರೆಡ್ಡಿ ಹೇಳಿದ್ದೇನು?
ಸಮಂತಾ ಆಪ್ತ ಗೆಳತಿ ಹಾಗೂ ಮಾ ಇಂಟಿ ಬಂಗಾರಂ ನಿರ್ದೇಶಕಿ ನಂದಿನಿ ರೆಡ್ಡಿ ಸಿನೇಮಾ ಎಕ್ಸ್ಪ್ರೆಸ್’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದು, ‘ಅವಳ ಪ್ರೆಗ್ನೆನ್ಸಿ ಸರಿಯಾದ ಹಾಗೂ ಸುಂದರ ಸಮಯದಲ್ಲಿ ಬಂದಿದೆ. ನಮ್ಮ ಸಿನಿಮಾ ಮಾ ಇಂಟಿ ಬಂಗಾರಂ ಯುಶಸ್ಸು ಕಂಡಿದೆ’ ಎಂದು ಅವರು ಹೇಳಿದ್ದಾರೆ. ಈ ಮೂಲಕ ಸಮಂತಾ ತಾಯಿ ಆಗುತ್ತಿರುವ ವಿಷಯ ಬಹುತೇಕ ಅಧಿಕೃತವಾದಂತೆ ಆಗಿದೆ.

ಆದರೆ ಈವರೆಗೂ ಸಮಂತಾ ಅವರ ಕಡೆಯಿಂದ ಯಾವುದೇ ಅಧಿಕೃತ ಘೋಷಣೆ ಹೊರಬಂದಿಲ್ಲ. ಹೀಗಾಗಿ ಅಭಿಮಾನಿಗಳು ನಟಿಯಿಂದಲೇ ಅಧಿಕೃತ ಮಾಹಿತಿ ಸಿಗಲಿ ಎಂದು ಎದುರು ನೋಡುತ್ತಿದ್ದಾರೆ.
ಇದನ್ನು ನೋಡಿ : ಮೊದಲು ಗ್ರಾ.ಪಂ. ಚುನಾವಣೆ ಗೆದ್ದು ತೋರಿಸಲಿ – KPCC ಅಧ್ಯಕ್ಷ HARIPRASADಗೆ SREERAMULU ಸವಾಲು




