ಇನ್ನು ಮುಂದೆ ಸದಾಶಿವನಗರ ನಿವಾಸದಲ್ಲಿ ಯಾರನ್ನೂ ಭೇಟಿ ಮಾಡುವುದಿಲ್ಲ. ಸಾರ್ವಜನಿಕರು, ಶಾಸಕರು ಹಾಗೂ ಕಾರ್ಯಕರ್ತರು ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಭೇಟಿ ಮಾಡಬಹುದು ಎಂದು DK Shivakumar ತಿಳಿಸಿದ್ದಾರೆ.

ಇನ್ನು ಮುಂದೆ ಸದಾಶಿವನಗರ ನಿವಾಸದಲ್ಲಿ ಸಾರ್ವಜನಿಕರನ್ನು ಭೇಟಿ ಮಾಡುವುದಿಲ್ಲ ಎಂದು ಉಪ ಮುಖ್ಯಮಂತ್ರಿ DK Shivakumar ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಅವರು, ಅನಿವಾರ್ಯ ಕಾರಣಗಳಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಅಹವಾಲು ಸ್ವೀಕಾರ
ಸಾರ್ವಜನಿಕರು, ಶಾಸಕರು, ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಸೇರಿದಂತೆ ಎಲ್ಲರನ್ನೂ ಇನ್ನು ಮುಂದೆ ಗೃಹ ಕಚೇರಿ ‘ಕೃಷ್ಣಾ’ ದಲ್ಲೇ ಭೇಟಿ ಮಾಡುವುದಾಗಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
MUST READ : Kalaburagi : ಕೃಷಿ ಹೊಂಡದಲ್ಲಿ ಮುಳುಗಿ ಚಿಕ್ಕಪ್ಪ- ಮಗನ ದುರ್ಮರಣ..!!

ಅಹವಾಲುಗಳು, ಮನವಿಗಳು ಹಾಗೂ ವಿವಿಧ ಸಾರ್ವಜನಿಕ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಜನರು ನೇರವಾಗಿ ಗೃಹ ಕಚೇರಿಗೆ ಭೇಟಿ ನೀಡಬಹುದು ಎಂದು ಅವರು ತಿಳಿಸಿದ್ದಾರೆ.
ನಿವಾಸಕ್ಕೆ ಬಾರದಂತೆ ಮನವಿ
ಸದಾಶಿವನಗರ ನಿವಾಸಕ್ಕೆ ಬರುವ ತೊಂದರೆ ಯಾರೂ ತೆಗೆದುಕೊಳ್ಳಬಾರದು ಎಂದು ಮನವಿ ಮಾಡಿರುವ ಅವರು, ಈ ನಿರ್ಧಾರವನ್ನು ತಪ್ಪಾಗಿ ಅರ್ಥೈಸಿಕೊಳ್ಳಬಾರದು ಹಾಗೂ ಅನ್ಯಥಾ ಭಾವಿಸಬಾರದು ಎಂದು ಸ್ಪಷ್ಟಪಡಿಸಿದ್ದಾರೆ.

ಆಡಳಿತಾತ್ಮಕ ಕಾರಣದಿಂದ ನಿರ್ಧಾರ
ಅನಿವಾರ್ಯ ಆಡಳಿತಾತ್ಮಕ ಹಾಗೂ ವೈಯಕ್ತಿಕ ಕಾರಣಗಳಿಂದ ಸದಾಶಿವನಗರ ನಿವಾಸದಲ್ಲಿ ಭೇಟಿಗಳನ್ನು ನಿಲ್ಲಿಸಲಾಗಿದ್ದು, ಎಲ್ಲಾ ಅಧಿಕೃತ ಹಾಗೂ ಸಾರ್ವಜನಿಕ ಭೇಟಿಗಳನ್ನು ಇನ್ನು ಮುಂದೆ ‘ಕೃಷ್ಣಾ’ ಗೃಹ ಕಚೇರಿಯಲ್ಲೇ ನಡೆಸಲಾಗುತ್ತದೆ.
ಈ ಕ್ರಮದಿಂದ ಸಾರ್ವಜನಿಕರ ಭೇಟಿಗಳನ್ನು ಹೆಚ್ಚು ವ್ಯವಸ್ಥಿತವಾಗಿ ನಿರ್ವಹಿಸಲು ಸಾಧ್ಯವಾಗಲಿದೆ ಎಂದು ತಿಳಿದುಬಂದಿದೆ.
MUST WATCH : ಆರ್ ಎಸ್ ಎಸ್ , ಬಿಜೆಪಿ ವಿರುದ್ಧ ಸಿದ್ದು ಗುಡುಗು ಹರಿಪ್ರಸಾದ್ ಜೊತೆ ನಿಲ್ಲುವಂತೆ ಸಲಹೆ




