Ramanagara ದ ಬಾಲಗೇರಿಯಲ್ಲಿ ಮನೆ ಪಕ್ಕ ಬೆಳೆದಿದ್ದ ತರಕಾರಿ ಗಿಡಗಳನ್ನು ಹಸು ಮೇಯ್ದ ವಿಚಾರಕ್ಕೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯಗೊಂಡಿದೆ.

Ramanagara ಜಿಲ್ಲೆಯಲ್ಲಿ ಅಕ್ಕಪಕ್ಕದ ಮನೆಯವರ ನಡುವಿನ ಸಣ್ಣ ವಿವಾದ ದುರಂತ ಅಂತ್ಯ ಕಂಡಿದೆ. ಮನೆ ಪಕ್ಕ ಬೆಳೆದಿದ್ದ ತರಕಾರಿ ಗಿಡಗಳನ್ನು ಹಸು ಮೇಯ್ದ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.
ಈ ಘಟನೆ ರಾಮನಗರ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯ ಬಾಲಗೇರಿ ಪ್ರದೇಶದಲ್ಲಿ ನಡೆದಿದೆ.
ಮೃತ ಮಹಿಳೆ ಯಾರು?
ಮೃತ ಮಹಿಳೆಯನ್ನು ಜಯಮ್ಮ (55) ಎಂದು ಗುರುತಿಸಲಾಗಿದೆ.ಜಯಮ್ಮ ಮತ್ತು ಪಕ್ಕದ ಮನೆಯ ನಿವಾಸಿ ಶ್ರೀನಿವಾಸ್ ಅವರ ಕುಟುಂಬಗಳು ನೆರೆಹೊರೆಯವರಾಗಿದ್ದು, ಹಲವು ವರ್ಷಗಳಿಂದ ಅಕ್ಕಪಕ್ಕದಲ್ಲೇ ವಾಸಿಸುತ್ತಿದ್ದರು.
MUST READ : Parameshwar , KN Rajanna ಗೆ ಗೌರವ ಡಾಕ್ಟರೇಟ್ ನೀಡದಿರಲು ತುಮಕೂರು ವಿವಿ ನಿರ್ಧಾರ..!!

ಗಲಾಟೆಗೆ ಕಾರಣವಾದುದು ಏನು?
ಜಯಮ್ಮ ಅವರು ಮನೆಯ ಪಕ್ಕ ಬೆಳೆಸಿದ್ದ ತರಕಾರಿ ಗಿಡಗಳನ್ನು ಶ್ರೀನಿವಾಸ್ಗೆ ಸೇರಿದ ಹಸು ಮೇಯ್ದಿದೆ ಎನ್ನಲಾಗಿದ್ದು, ಇದೇ ವಿಷಯಕ್ಕೆ ಎರಡೂ ಕುಟುಂಬಗಳ ನಡುವೆ ವಾಗ್ವಾದ ನಡೆದಿದೆ.ವಾದವಿವಾದ ತೀವ್ರಗೊಂಡು ಗಲಾಟೆಯ ರೂಪ ಪಡೆದುಕೊಂಡಿದೆ.
ಹಲ್ಲೆಯಲ್ಲಿ ಗಂಭೀರ ಗಾಯ
ಗಲಾಟೆ ವೇಳೆ ಶ್ರೀನಿವಾಸ್ ಜಯಮ್ಮ ಅವರ ಕಪಾಳಕ್ಕೆ ಹೊಡೆದಿದ್ದಾನೆ ಎಂದು ಆರೋಪಿಸಲಾಗಿದೆ.ಹಲ್ಲೆಯ ಪರಿಣಾಮ ಜಯಮ್ಮ ಅವರು ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಕೂಡಲೇ ಕುಟುಂಬಸ್ಥರು ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು.
ಆದರೆ, ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು, ಬಳಿಕ ಜಯಮ್ಮ ಮೃತಪಟ್ಟಿದ್ದಾರೆ.

ಆರೋಪಿ ಪೊಲೀಸ್ ವಶಕ್ಕೆ
ಮಹಿಳೆಯ ಸಾವಿನ ಬಳಿಕ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ.ಆರೋಪಿ ಎಂದು ಹೇಳಲಾಗುತ್ತಿರುವ ಶ್ರೀನಿವಾಸ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಈ ಸಂಬಂಧ ರಾಮನಗರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಯ ನಿಖರ ಕಾರಣ ಮತ್ತು ಸಾವಿನ ಹಿನ್ನೆಲೆ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
MUST WATCH : DKS ಪಟ್ಟಾಭಿಷೇಕಕ್ಕೆ ಭರ್ಜರಿ ತಯಾರಿ – ಫ್ಲೆಕ್ಸ್, ಬ್ಯಾನರ್ ಕಟ್ಟುವವರಿಗೆ ಹೈಕೋರ್ಟ್ ಶಾಕ್ | BENGALURU NEWS |




