ನೂತನ ದಾಖಲೆಯ ಸನಿಹದಲ್ಲಿ Rishabh Pant !

ಭಾರತ ಹಾಗೂ ಅಫ್ಘಾನಿಸ್ತಾನ (IND vs AFG) ನಡುವಿನ ರೆಡ್ ಬಾಲ್ ಮತ್ತು ವೈಟ್ ಬಾಲ್ ಸರಣಿಗಳ ಆರಂಭಕ್ಕೆ ಕೇವಲ ಒಂದು ದಿನ ಬಾಕಿಯಿದೆ. ಉಭಯ ತಂಡಗಳು ಏಕೈಕ ಟೆಸ್ಟ್ ಹಾಗೂ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮುಖಾಮುಖಿಯಾಗಲಿವೆ. ಅಂದ ಹಾಗೆ ಏಕೈಕ ಟೆಸ್ಟ್ ಪಂದ್ಯವು ಜೂನ್ 6ರಂದು ನವ ಚಂಡೀಗಢದ ಮುಲ್ಲಾನ್ಪುರದಲ್ಲಿರುವ ಮಹಾರಾಜ ಯದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ.

ನೂತನ ದಾಖಲೆಯ ಸನಿಹದಲ್ಲಿ ರಿಷಭ್ ಪಂತ್!
ಈ ಪಂದ್ಯದಲ್ಲಿ ಭಾರತದ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ( Rishabh Pant ) ಮಹತ್ವದ ದಾಖಲೆಯೊಂದನ್ನು ಬರೆಯಲಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ ಈಗಾಗಲೇ ಉತ್ತಮ ದಾಖಲೆ ಹೊಂದಿರುವ ಪಂತ್, ತಮ್ಮ ವೈಟ್ ಬಾಲ್ ಪ್ರದರ್ಶನದಲ್ಲಿ ಮಾತ್ರ ನಿರೀಕ್ಷಿತ ಮಟ್ಟ ತಲುಪಲು ವಿಫಲರಾಗಿದ್ದಾರೆ.
ಇದನ್ನು ಓದಿ : ಪಂದ್ಯ ಗೆದ್ರೂ ರಿಷಭ್ಗೆ ಶಾಕ್ – ಪಂತ್ಗೆ 12 ಲಕ್ಷ ರೂಪಾಯಿ ದಂಡ!
ಟೆಸ್ಟ್ ವೃತ್ತಿಜೀವನದಲ್ಲಿ 94 ಸಿಕ್ಸರ್ಗಳು
ಸದ್ಯ ಪಂತ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 94 ಸಿಕ್ಸರ್ಗಳನ್ನು ಬಾರಿಸಿದ್ದಾರೆ. ಈ ಪಂದ್ಯದಲ್ಲಿ ಅವರು ಇನ್ನೂ 6 ಸಿಕ್ಸರ್ಗಳನ್ನು ಬಾರಿಸಿದರೆ, 100 ಟೆಸ್ಟ್ ಸಿಕ್ಸರ್ಗಳನ್ನು ಪೂರ್ಣಗೊಳಿಸಿದ ಮೊದಲ ಭಾರತೀಯ ಬ್ಯಾಟ್ಸ್ಮನ್ ಎಂಬ ಐತಿಹಾಸಿಕ ದಾಖಲೆ ನಿರ್ಮಿಸುವ ಅವಕಾಶ ಅವರಿಗಿದೆ.

LSG ತಂಡದ ನಾಯಕತ್ವಕ್ಕೆ Rishabh Pant ಗುಡ್ಬೈ
ರಿಷಭ್ ಪಂತ್ ನಾಯಕತ್ವದಲ್ಲಿ ಎಲ್ಎಸ್ಜಿ ತಂಡ ಐಪಿಎಲ್ ಟೂರ್ನಿಯ ಪ್ಲೇಆಫ್ಸ್ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಯಿತು. ಟೂರ್ನಿಯಿಂದ ಎಲಿಮಿನೇಟ್ ಆದ ಮೊದಲ ತಂಡ ಕೂಡ ಲಖನೌ. ತಮ್ಮ ನಾಯಕತ್ವದಲ್ಲಿ ಸತತ ಎರಡೂ ಸೀಸನ್ಗಳಲ್ಲಿ ವೈಫಲ್ಯ ಅನುಭವಿಸಿದ ಕಾರಣ ರಿಷಭ್ ಪಂತ್ ಲಖನೌ ಸೂಪರ್ ಜಯಂಟ್ಸ್ ತಂಡದ ನಾಯಕತ್ವಕ್ಕೆ ಗುಡ್ಬೈ ಹೇಳಿದ್ದರು. ಇದೀಗ ಆಫ್ಘನ್ ಎದುರು ರೆಡ್ ಬಾಲ್ ಪಂದ್ಯದಲ್ಲಿ ಉತ್ತಮವಾಗಿ ಬ್ಯಾಟ್ ಮಾಡಲು ಪಂತ್ ಎದುರು ನೋಡುತ್ತಿದ್ದಾರೆ.
ಇದನ್ನು ನೋಡಿ : ಡಿಕೆಶಿ ಸಿಎಂ ಆಗಿ 48 ಗಂಟೆ ಕಳೆದಿಲ್ಲ – ಆಗಲೇ ಈಗಾಗಿದೆ ಎಂದ VIJAYENDRA.!





