CM ಡಿಕೆಶಿ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ ಫೈನಲ್ – ಯಾರಿಗೆ ಯಾವ ಇಲಾಖೆ ಹೊಣೆ?

ಹಲವು ಸುತ್ತಿನ ಸಭೆ ಹಾಗೂ ಚರ್ಚೆಗಳ ಬಳಿಕ CM ಡಿ.ಕೆ. ಶಿವಕುಮಾರ್ ನೇತೃತ್ವದ ಸಚಿವ ಸಂಪುಟದಲ್ಲಿ ಖಾತೆ ಹಂಚಿಕೆ ಮಾಡಲಾಗಿದೆ. . ಚಲುವರಾಯಸ್ವಾಮಿ ಅವರಿಗೆ ಕೃಷಿ, ಜಮೀರ್ ಅಹ್ಮದ್ ಅವರಿಗೆ ಗೃಹ ಮತ್ತು ವಕ್ಫ್ ಖಾತೆಯನ್ನು ನೀಡಲಾಗಿದೆ.
ಕೆ.ಎಚ್. ಮುನಿಯಪ್ಪ ಅವರಿಗೆ ಯಾವ ಖಾತೆ ನೀಡಲಾಗಿದೆ?
ಸಿದ್ದರಾಮಯ್ಯ ನೇತೃತ್ವದ ಹಿಂದಿನ ಸಂಪುಟದಲ್ಲಿ ಕೆ.ಎಚ್. ಮುನಿಯಪ್ಪ ಅವರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ನೀಡಲಾಗಿತ್ತು. ಈ ಬಾರಿ ಮುನಿಯಪ್ಪ ಅವರು ಸಮಾಜ ಕಲ್ಯಾಣ ಖಾತೆ ನೀಡುವಂತೆ ಒತ್ತಾಯಿಸಿದ್ದರು ಎನ್ನಲಾಗಿದ್ದು, ಅದರಂತೆ ಅವರಿಗೆ ಸಮಾಜ ಕಲ್ಯಾಣ ಇಲಾಖೆಯ ಜವಾಬ್ದಾರಿ ನೀಡಲಾಗಿದೆ.

ಇದನ್ನು ಓದಿ : ನೂತನ ಸಚಿವರಿಗೆ ಇವತ್ತೇ ಖಾತೆ ಹಂಚಿಕೆ ಮಾಡುತ್ತೇವೆ – CM
19 ಸಚಿವರ ಪೈಕಿ 13 ಮಂದಿಗೆ ಖಾತೆ ಹಂಚಿಕೆ
ಪ್ರಮಾಣವಚನ ಸ್ವೀಕರಿಸಿದ 19 ಸಚಿವರ ಪೈಕಿ 13 ಮಂದಿಗೆ ಖಾತೆ ಹಂಚಿಕೆ ಮಾಡಲಾಗಿದೆ. ಉಳಿದ ಆರು ಸಚಿವರಿಗೆ ಇನ್ನೂ ಖಾತೆ ಹಂಚಿಕೆಯಾಗಬೇಕಿದೆ. ಎಲ್ಲಾ ಪ್ರಕ್ರಿಯೆ ಅಂತಿಮಗೊಂಡ ಬಳಿಕ ಸಚಿವರ ಖಾತೆ ಹಂಚಿಕೆ ಪಟ್ಟಿಯನ್ನು ರಾಜ್ಯಪಾಲರ ಕಚೇರಿಗೆ ಕಳುಹಿಸುವ ಸಾಧ್ಯತೆ ಇದೆ.

ಯಾರಿಗೆ ಯಾವ ಖಾತೆ?
| ಸಚಿವರು | ಖಾತೆ |
|---|---|
| ಎನ್. ಚಲುವರಾಯಸ್ವಾಮಿ | ಕೃಷಿ |
| ರಿಜ್ವಾನ್ ಅರ್ಷದ್ | ಆಹಾರ |
| ಕೆ.ಎಚ್. ಮುನಿಯಪ್ಪ | ಸಮಾಜ ಕಲ್ಯಾಣ |
| ಸಂತೋಷ್ ಲಾಡ್ | ಕಾರ್ಮಿಕ |
| ಬಸಂತಪ್ಪ | ಮೀನುಗಾರಿಕೆ |
| ಮಧು ಬಂಗಾರಪ್ಪ | ಪ್ರಾಥಮಿಕ ಶಿಕ್ಷಣ |
| ರಾಯರೆಡ್ಡಿ | ಉನ್ನತ ಶಿಕ್ಷಣ |
| ಜಮೀರ್ ಅಹ್ಮದ್ ಖಾನ್ | ವಸತಿ ಮತ್ತು ವಕ್ಫ್ |
| ಲಕ್ಷ್ಮಣ ಸವದಿ | ಸಹಕಾರಿ |
| ಅಜಯ್ ಸಿಂಗ್ | ಅರಣ್ಯ |
| ಎಸ್.ಎಸ್. ಮಲ್ಲಿಕಾರ್ಜುನ | ಗಣಿ ಮತ್ತು ಭೂವಿಜ್ಞಾನ |
| ಬಾಲಕೃಷ್ಣ | ಸಣ್ಣ ನೀರಾವರಿ |
| ಪುಟ್ಟರಂಗ ಶೆಟ್ಟಿ | ಪಶು ಸಂಗೋಪನೆ |
ಇದನ್ನು ನೋಡಿ : ಬರ ವೀಕ್ಷಣೆ ಸಂಬಂಧ CM VIDEO ಸಂವಾದ – ಉಸ್ತುವಾರಿ ಅಧಿಕಾರಿಗಳಿಗೆ CM DKS ಸೂಚನೆ




