ವಚನಾನಂದ ಶ್ರೀಗಳ ವಿರುದ್ಧ POCSO ಕೇಸ್ – ಇಂದು ಹೈಕೋರ್ಟ್ನಿಂದ ಜಾಮೀನು ಭವಿಷ್ಯ ನಿರ್ಧಾರ

ಪೋಕ್ಸೋ ಪ್ರಕರಣದಲ್ಲಿ ಸಿಲುಕಿರುವ ಹರಿಹರದ ವಚನಾನಂದ ಶ್ರೀಗಳಿಗೆ ಬಂಧನದ ಭೀತಿ ಎದುರಾಗಿದೆ. ಶ್ರೀಗಳಿಗೆ ಮಂಜೂರಾಗಿರುವ ನಿರೀಕ್ಷಣಾ ಜಾಮೀನನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಯ ಕುರಿತು ಇಂದು ಹೈಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಲಿದೆ.

ಹೈಕೋರ್ಟ್ ಮೆಟ್ಟಿಲೇರಿದ್ದ ಸಂತ್ರಸ್ತ ಬಾಲಕನ ತಾಯಿ
ವಚನಾನಂದ ಶ್ರೀಗಳಿಗೆ ನೀಡಲಾಗಿರುವ ನಿರೀಕ್ಷಣಾ ಜಾಮೀನನ್ನು ಪ್ರಶ್ನಿಸಿ ಸಂತ್ರಸ್ತ ಬಾಲಕನ ತಾಯಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಹಿಂದೆ ಪ್ರಕರಣದ ವಿಚಾರಣೆ ನಡೆಸಿದ್ದ ಹೈಕೋರ್ಟ್, ಶ್ರೀಗಳಿಗೆ ನಿರೀಕ್ಷಣಾ ಜಾಮೀನು ನೀಡಿರುವ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು.
ಇದನ್ನು ಓದಿ : ವಚನಾನಂದ ಸ್ವಾಮೀಜಿ ವಿರುದ್ಧದ POCSO ಪ್ರಕರಣದಲ್ಲಿ ಹೈಕೋರ್ಟ್ ಅಸಮಾಧಾನ..!!

POCSO ಕೇಸ್ ದಾಖಲಿಸುವುದಾಗಿ ಬೆದರಿಕೆ
ಜೂನ್ 23ರಂದು ನಡೆದ ಸುದೀರ್ಘ ವಾದ ಮಂಡನೆ ವೇಳೆ ಸ್ವಾಮೀಜಿಗಳ ಪರ ವಕೀಲರು, ಟ್ರಸ್ಟ್ ಪದಾಧಿಕಾರಿಗಳೊಂದಿಗೆ ಭಿನ್ನಾಭಿಪ್ರಾಯ ಇದ್ದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸುವ ಬೆದರಿಕೆ ಇತ್ತು ಎಂದು ನ್ಯಾಯಾಲಯದ ಗಮನಕ್ಕೆ ತಂದಿದ್ದರು. ಇದೇ ಕಾರಣಕ್ಕಾಗಿ ಮುನ್ನೆಚ್ಚರಿಕೆ ಕ್ರಮವಾಗಿ ನಿರೀಕ್ಷಣಾ ಜಾಮೀನು ಪಡೆದಿದ್ದೇವೆ ಎಂದು ವಾದ ಮಂಡಿಸಿದರು.
ಆದರೆ ಈ ವಾದವನ್ನು ಆಲಿಸಿದ ಹೈಕೋರ್ಟ್, ಬಾಲಕರ ಸುರಕ್ಷತೆಗೆ ಸಂಬಂಧಿಸಿದ ಗಂಭೀರ ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ನೀಡುವುದು ಸೂಕ್ತವಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿತ್ತು. ಇಂತಹ ಪ್ರಕರಣಗಳಲ್ಲಿ ನಿಯಮಿತ ಜಾಮೀನಿಗೆ ಅರ್ಜಿ ಸಲ್ಲಿಸುವುದೇ ಸರಿಯಾದ ಕ್ರಮ ಎಂದು ನ್ಯಾಯಾಲಯ ಸೂಚಿಸಿತ್ತು.

ಇಂದು ಹೈಕೋರ್ಟ್ನಿಂದ ಜಾಮೀನು ಭವಿಷ್ಯ ನಿರ್ಧಾರ
ನ್ಯಾಯಾಲಯದ ಹಿಂದಿನ ಕಠಿಣ ನಿಲುವುಗಳನ್ನು ಗಮನಿಸಿದರೆ, ಇಂದು ಹೊರಬೀಳಲಿರುವ ಹೈಕೋರ್ಟ್ ತೀರ್ಪು ಸ್ವಾಮೀಜಿಗಳ ವಿರುದ್ಧವಾಗಿ ಬರುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದ್ದು, ವಚನಾನಂದ ಶ್ರೀಗಳಿಗೆ ಬಂಧನದ ತೂಗುಗತ್ತಿ ಎದುರಾಗಿದೆ.
ಇದನ್ನು ನೋಡಿ : 42 BIKE ಕದ್ದಿದ್ದ ಖತರ್ನಾಕ್ ಕಳ್ಳ ಸೆರೆ ಹೀರೋ ಹೋಂಡಾ ಬೈಕ್ಗಳೇ ಇವನ ಟಾರ್ಗೆಟ್





