Mantralaya ರಾಯರ ಮಠದ ಕಾಣಿಕೆ ಹುಂಡಿ ಎಣಿಕೆ ಮುಕ್ತಾಯ – 21 ದಿನದಲ್ಲಿ 3.72 ಕೋಟಿ ರೂ. ಕಾಣಿಕೆ ಸಂಗ್ರಹ

ಕಲಿಯುಗ ಕಾಮಧೇನು ಎಂದೇ ಭಕ್ತರಿಂದ ಆರಾಧಿಸಲ್ಪಡುವ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಭಕ್ತರ ಕಾಣಿಕೆ ಹರಿದುಬಂದಿದೆ. ಜೂನ್ ತಿಂಗಳ 21 ದಿನಗಳ ಹುಂಡಿ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು, ಒಟ್ಟು 3 ಕೋಟಿ 72 ಲಕ್ಷ ರೂಪಾಯಿಗೂ ಅಧಿಕ ಕಾಣಿಕೆ ಸಂಗ್ರಹವಾಗಿದೆ.
ಪ್ರತಿ ತಿಂಗಳಿನಂತೆ ಈ ಬಾರಿಯೂ ಮಠಕ್ಕೆ ಭಕ್ತರು ದಂಡು
ಪ್ರತಿ ತಿಂಗಳಿನಂತೆ ಈ ಬಾರಿಯೂ ರಾಜ್ಯ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು Mantralaya ಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದು ಕಾಣಿಕೆ ಸಲ್ಲಿಸಿದ್ದಾರೆ. ಇದರ ಪರಿಣಾಮವಾಗಿ ಹುಂಡಿಯಲ್ಲಿ ಕೋಟ್ಯಂತರ ರೂಪಾಯಿ ಸಂಗ್ರಹವಾಗಿದೆ.

ಹುಂಡಿ ಎಣಿಕೆ ವಿವರ
• ಒಟ್ಟು ಕಾಣಿಕೆ – ₹3.72 ಕೋಟಿ
• ಕರೆನ್ಸಿ ನೋಟುಗಳು – ₹3,61,40,030
• ನಾಣ್ಯಗಳು – ₹11,02,500
ನಗದು ಕಾಣಿಕೆಯ ಜೊತೆಗೆ ಭಕ್ತರು ಚಿನ್ನ ಮತ್ತು ಬೆಳ್ಳಿಯನ್ನೂ ಕಾಣಿಕೆ ರೂಪದಲ್ಲಿ ಅರ್ಪಿಸಿದ್ದಾರೆ. ಹುಂಡಿ ಎಣಿಕೆಯಲ್ಲಿ 67 ಗ್ರಾಂ ಚಿನ್ನ ಹಾಗೂ 511 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ.
ಇದನ್ನು ಓದಿ : ಮಂತ್ರಾಲಯಕ್ಕೂ ತಟ್ಟಿದ ನೀರಿನ ಸಮಸ್ಯೆ – ಭಕ್ತರ ಪುಣ್ಯಸ್ನಾನಕ್ಕೂ ಪರದಾಟ

ಚಿನ್ನ-ಬೆಳ್ಳಿ ಕಾಣಿಕೆ
• ಚಿನ್ನ – 67 ಗ್ರಾಂ
• ಬೆಳ್ಳಿ – 511 ಗ್ರಾಂ
ಮಂತ್ರಾಲಯ ರಾಯರ ಮಠದಲ್ಲಿ ನಡೆದ ಹುಂಡಿ ಎಣಿಕೆ ಕಾರ್ಯದಲ್ಲಿ ಮಠದ ನೂರಾರು ಸಿಬ್ಬಂದಿ, ಕರಸೇವಕರು ಹಾಗೂ ಭಜನಾ ಮಂಡಳಿಯ ಸದಸ್ಯರು ಭಾಗವಹಿಸಿದರು. ಮುಜರಾಯಿ ಇಲಾಖೆ ಅಧಿಕಾರಿಗಳು ಮತ್ತು ಮಠದ ಆಡಳಿತ ಮಂಡಳಿಯ ಅಧಿಕಾರಿಗಳು ಎಣಿಕೆ ಕಾರ್ಯದ ಮೇಲ್ವಿಚಾರಣೆ ನಡೆಸಿದರು.
ಗುರುರಾಘವೇಂದ್ರ ಸ್ವಾಮಿಗಳ ಮೇಲಿನ ಭಕ್ತರ ಅಪಾರ ನಂಬಿಕೆ ಮತ್ತು ಭಕ್ತಿಭಾವಕ್ಕೆ ಈ ಕಾಣಿಕೆ ಸಂಗ್ರಹ ಸಾಕ್ಷಿಯಾಗಿದ್ದು, ಪ್ರತಿದಿನವೂ ಸಾವಿರಾರು ಭಕ್ತರು ಮಂತ್ರಾಲಯಕ್ಕೆ ಭೇಟಿ ನೀಡುತ್ತಿದ್ದಾರೆ.

ಇದನ್ನು ನೋಡಿ : ನಟಿ KRISHI THAPANDA ಮನೆಯಲ್ಲಿ ಗೆಳೆಯ VAISHAK ಆತ್ಮಹ*




