Murder|ಸಹೋದರರ ಜಗಳ ಕೊಲೆಯಲ್ಲಿ ಅಂತ್ಯ.. ಬೆಚ್ಚಿ ಬಿದ್ದ ಜನತೆ

ಹುಟ್ಟುತ್ತಾ ಅಣ್ಣ- ತಮ್ಮಂದಿರು ಬೆಳೆಯುತ್ತಾ ಬೆಳೆಯುತ್ತಾ ದಾಯಾದಿಗಳು ಅನ್ನೋ ಮಾತನ್ನ ಇಲ್ಲೊಬ್ಬ ಸಹೋದರರು ಫ್ರೂ ಮಾಡಿದ್ದಾರೆ. ಪಿತ್ರಾರ್ಜಿತಾ ಆಸ್ತಿ ವಿಚಾರವಾಗಿ ಸಹೋದರರ ನಡುವೆ ಜಗಳ ಆಗಿ ಕೊಲೆಯಲ್ಲಿ ಅಂತ್ಯವಾಗಿದೆ. ಸಹೋದರನನ್ನೇ ಕಲ್ಲಿಂದ ಹೊಡೆದು ಭೀಕರವಾಗಿ Murder ಮಾಡಿರುವ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಬಮ್ಮನಹಳ್ಳಿ-ಹನುಮಸಾಗರ ಗ್ರಾಮದಲ್ಲಿ ನಡೆದಿದೆ.
ಕಲ್ಲಿನಿಂದ ಹೊಡೆದು ಕೊಲೆ
ಹಾನಗಲ್ ತಾಲೂಕಿನ ಬಮ್ಮನಹಳ್ಳಿ-ಹನುಮಸಾಗರ ಗ್ರಾಮದ ಸಂತೋಷ ಮುರಿಗೇಪ್ಪ ಸವಣೂರನನ್ನು ಆತನ ಸಹೋದರನಾದ ಕುಮಾರ ಮುರಿಗೇಪ್ಪ ಸವಣೂರು ಕಲ್ಲಿನಿಂದ ಹೊಡೆದು ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ. ನಿನ್ನೆ ರಾತ್ರಿ ಸಂತೋಷ್ ಹಾಗೂ ಕುಟುಂಬಸ್ಥರು ಮನೆ ಮುಂದೆ ಕುಳಿತು ಮಾತನಾಡುತ್ತಿದ್ದರು.
ಇದನ್ನು ಓದಿ : ಚಿತ್ರದುರ್ಗದಲ್ಲಿ ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಬಾವನನ್ನೇ ಕೊಲೆ

ಸಹೋದರರ ಜಗಳ ಕೊಲೆಯಲ್ಲಿ ಅಂತ್ಯ
ಈ ವೇಳೆ ಸಂತೋಷ್ ಸಹೋದರ ಕುಮಾರ್ ಪಿತ್ರರ್ಜಿತ ಆಸ್ತಿಯನ್ನಯ ತನ್ನ ಹೆಸರಿಗೆ ಮಾಡಿಕೊಡುವಂತೆ ತಾಯಿಯೊಂದಿಗೆ ಜಗಳ ಮಾಡಿದ್ದಾನೆ. ಈ ವೇಳೆ ಸಂತೋಷ್ ಮಧ್ಯಪ್ರವೇಶಿಸಿದ್ದ. ಕೋಪಗೊಂಡಿದ್ದ ಕುಮಾರ್ ಸಹೋದರ ಅಂತಾನೂ ನೋಡದೇ ಸಂತೋಷ್ಗೆ ಬೆದರಿಕೆ ಹಾಕಿ ಕಾಲಿನಿಂದ ಒದ್ದಿದ್ದಾನೆ. ಸಂತೋಷ್ ಕೆಳಗೆ ಬೀಳ್ತಿದ್ದಂತೆ ಅಲ್ಲೇ ಇದ್ದ ಕಲ್ಲಿನಿಂದ ತಲೆಗೆ ಹೊಡೆದಿದ್ದಾನೆ. ಗಂಭೀರ ಗಾಯಗೊಂಡ ಸಂತೋಷ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಆರೋಪಿಸಲಾಗಿದೆ.
Murder – ಹಾನಗಲ್ ಪೊಲೀಸ್ ಠಾಣೆಗೆ ದೂರು
ಇನ್ನು ಘಟನೆ ಸಂಬಂಧ ಮೃತ ಸಂತೋಷ್ ತಾಯಿ ಅಕ್ಕಮ್ಮ ಹಾನಗಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಹಾನಗಲ್ ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.
ಇದನ್ನು ನೋಡಿ : ಅಡಿಕೆ ಕೊಯ್ಯಲು ಹೋಗಿ ದುರಂತ – ಕರೆಂಟ್ ಶಾಕ್ ಹೊಡೆದು ಯುವಕ ಸಾ*





