ರಾಜ್ಯದಲ್ಲಿ ಮತ್ತೊಂದು Election ಫಿಕ್ಸ್ – ಯಾವುದರ ಚುನಾವಣೆ?

ವಿಧಾನ ಪರಿಷತ್ನ 7 ಮಂದಿ ಸದಸ್ಯರ ಅಧಿಕಾರವಧಿ ಜೂನ್ 26ಕ್ಕೆ ಮುಕ್ತಾಯಗೊಳ್ಳಲಿದ್ದು, ವಿಧಾನಪರಿಷತ್ ಚುನಾವಣೆಗೆ ಈಗಾಗಲೇ ಡೇಟ್ ಫಿಕ್ಸ್ ಆಗಿದೆ. ವಿಧಾನ ಪರಿಷತ್ನ ಕಾಂಗ್ರೆಸ್ನ 3 ಮಂದಿ ಸದಸ್ಯರು, 3 ಮಂದಿ ಬಿಜೆಪಿ ಸದಸ್ಯರು ಹಾಗೂ ಜೆಡಿಎಸ್ನ ಓರ್ವ ಸದಸ್ಯರ ಅವಧಿ ಮುಕ್ತಾಯವಾಗ್ತಾ ಇದ್ದು, ತೆರವಾಗುವ 7 ವಿಧಾನಪರಿಷತ್ ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿದೆ.

ಪರಿಷತ್ ಚುನಾವಣೆ ಹಿನ್ನೆಲೆ ಆಕಾಂಕ್ಷಿಗಳಿಂದ ಲಾಭಿ
ವಿಧಾನ ಪರಿಷತ್ ಸದಸ್ಯರಾದ ಕಾಂಗ್ರೆಸ್ನ ಬಿ.ಕೆ ಹರಿಪ್ರಸಾದ್, ನಾಸೀರ್ ಅಹ್ಮದ್, ತಿಪ್ಪಣ್ಣ, ಬಿಜೆಪಿಯ ಪ್ರತಾಪ್ ಸಿಂಹ, ಎಂ.ಟಿಬಿ ನಾಗರಾಜು, ಸುನೀಲ್ ವಲ್ಯಾಪುರ ಹಾಗೂ ಜೆಡಿಎಸ್ನ ಗೋವಿಂದರಾಜು ಅವರ ಅವಧಿ ಜೂನ್ 26 ರಂದು ಕೊನೆಗೊಳ್ಳಲಿದೆ. ತೆರವಾಗಲಿರುವ 7 ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ಜೂನ್ 18 ರಂದು ಚುನಾವಣೆ ನಡೆಯಲಿದ್ದು, ಅಂದೇ ಫಲಿತಾಂಶ ಹೊರಬೀಳಲಿದೆ. ಇತ್ತ ಪರಿಷತ್ Election ಗೆ ದಿನಾಂಕ ಘೋಷಣೆ ಆದ ಬೆನ್ನಲ್ಲೇ ಆಕಾಂಕ್ಷಿಗಳು ಪರಿಷತ್ ಸ್ಥಾನಕ್ಕೆ ಪೈಪೋಟಿ ನಡೆಸುತ್ತಿದ್ದು, ತಂತ್ರಗಳನ್ನು ಹೆಣೆಯುತ್ತಿದ್ದಾರೆ.
ಇದನ್ನು ಓದಿ : ಜೂನ್ 20-24ರೊಳಗೆ ಐದು ಪಾಲಿಕೆಗಳ ಚುನಾವಣೆ..!

ವಿಧಾನ ಪರಿಷತ್ Election – 1 ಸ್ಥಾನಗಳನ್ನು ಕಳೆದುಕೊಳ್ಳುವ ಸಾಧ್ಯತೆ
ಇನ್ನು ವಿಧಾನ ಸಭೆಯ ಹಾಲಿ ಬಲಾಬಲದ ಅನ್ವಯ 7 ಪರಿಷತ್ ಸ್ಥಾನಗಳ ಪೈಕಿ 5 ಸ್ಥಾನಗಳು ಕಾಂಗ್ರೆಸ್ ಮತ್ತು 2 ಸ್ಥಾನಗಳು ಬಿಜೆಪಿ ಪಾಲಾಗುವ ಸಾಧ್ಯತೆ ಇದೆ. ಆ ಮೂಲಕ ಕಾಂಗ್ರೆಸ್ 2 ಸ್ಥಾನಗಳನ್ನು ಹೆಚ್ಚಿಸಿಕೊಂಡರೆ, ವಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ತಲಾ 1 ಸ್ಥಾನಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




