Murder : ಹಣಕಾಸು ವಿಚಾರಕ್ಕೆ ಆಟೋ ಚಾಲಕನನ್ನು ಹತ್ಯೆಗೈದು ಬಳಿಕ ಹೂತುಹಾಕಿರುವ ಘಟನೆ ಬೆಳಕಿಗೆ ಬಂದಿದೆ.

ಹಣಕಾಸಿನ ವಿಚಾರಕ್ಕೆ ಆಟೋ ಚಾಲಕನನ್ನು ಸ್ನೇಹಿತರೇ ಬರ್ಬರವಾಗಿ ಹತ್ಯೆಗೈದು (Murder) ನಿರ್ಜನ ಪ್ರದೇಶದಲ್ಲಿ ಹೂತುಹಾಕಿದ ಆಘಾತಕಾರಿ ಘಟನೆ ಬೆಂಗಳೂರಿನ ಕುಂಬಳಗೋಡಿನ ರಾಮಸಂದ್ರ ಕೆರೆ ಬಳಿ ಘಟನೆ ನಡೆದಿದೆ. ತಾವರೆಕೆರೆಯ ಉದಯ ಲೇಔಟ್ ನಿವಾಸಿಯಾಗಿದ್ದ ರಕ್ಷಿತ್.ಎನ್ (25) ಹತ್ಯೆಯಾದ ಯುವಕ ಎಂದು ಗುರುತಿಸಲಾಗಿದೆ.
ಹೋದವ ಮರಳಿ ಮನೆಗೆ ಬರಲೇ ಇಲ್ಲ!
ಪ್ಯಾಸೆಂಜರ್ ಆಟೋ ಚಾಲಕರಾಗಿದ್ದ ರಕ್ಷಿತ್ ತನ್ನ ಸ್ನೇಹಿತ ಕಂಬೀಪುರ ನಿವಾಸಿ ಮೊಹಿನ್ ಪಾಶಾಗೆ ಹಣ ನೀಡಿದ್ದ. ಆ ಹಣವನ್ನು ವಾಪಸ್ ಪಡೆಯಲು ಮೇ 24ರಂದು ಸಂಜೆ ಮನೆಯಿಂದ ಹೊರಟಿದ್ದ ರಕ್ಷಿತ್ ನಂತರ ಮರಳಿ ಬಂದೇ ಇಲ್ಲ.

ಇದನ್ನು ಓದಿ : ಪರ ಪುರುಷನ ಜೊತೆ ಅಕ್ರಮ ಸಂಬಂಧ ಶಂಕೆ – ಅಕ್ಕನ ಕತ್ತು ಸೀಳಿ ಕೊಂದ ತಮ್ಮ..!!
ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರ ಹತ್ಯೆ
ಮರುದಿನ ಮೇ 25ರಂದು ರಕ್ಷಿತ್ ತಾಯಿ ಕಂಬೀಪುರಕ್ಕೆ ತೆರಳಿ ಮೋಹಿನ್ ಪಾಶಾನ ಬಳಿ ಮಗನ ಬಗ್ಗೆ ವಿಚಾರಿಸಿದ್ದಾಗ ಅಸಲಿ ಸತ್ಯ ಹೊರಬಂದಿದೆ. ಆರೋಪಿಗಳು ಹಣಕಾಸಿನ ವಿಚಾರಕ್ಕೆ ರಕ್ಷಿತ್ ಜೊತೆ ಗಲಾಟೆ ಮಾಡಿಕೊಂಡು ಆತನ ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆಗೈದು, ನಂತರ ರಾಮಸಂದ್ರದ ಕೆರೆಯ ಬಳಿ ಹೂತಿರುವುದಾಗಿ ಹಾಗೂ ಆತನ ಆಟೋವನ್ನು ಜ್ಞಾನಭಾರತಿ ಬಳಿ ಬಿಟ್ಟಿರುವುದಾಗಿ ಮೋಹಿನ್ ಪಾಶಾ ಬಾಯ್ಬಿಟ್ಟಿದ್ದಾನೆ.
ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು – Murder
ಈ ಸಂಬಂಧ ರಕ್ಷಿತ್ ತಾಯಿ ನೀಡಿದ ದೂರು ಆಧರಿಸಿ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಮೊಹಿನ್ ಪಾಶಾನನ್ನು ಪೊಲೀಸರು ಬಂಧಿಸಿದ್ದು, ಮತ್ತೊಬ್ಬ ಆರೋಪಿ ಹಸನ್ಗಾಗಿ ಹುಡುಕಾಟ ಮುಂದುವರೆದಿದೆ.

Murder – ತನಿಖೆ ಮುಂದುವರಿಕೆ
ರಾಮಸಂದ್ರದ ಕೆರೆಯ ಬಳಿ ಹೂತಿರುವುದಾಗಿ ರಕ್ಷಿತ್ ಮೃತದೇಹವನ್ನು ಈಗಾಗಲೇ ಹೊರತೆಗೆಯಲಾಗಿದ್ದು, ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಘಟನೆ ಸಂಬಂಧ ತನಿಖೆ ಮುಂದುವರಿದಿದೆ.
ಇದನ್ನು ನೋಡಿ : ನ್ಯಾಯ ಬೆಲೆ ಅಂಗಡಿಗಳಲ್ಲಿ SERVER PROBLEM – RATIONಗಾಗಿ ಗಂಟೆಗಟ್ಟಲೆ ಫುಲ್ ಕ್ಯೂ.. ಕ್ಯೂ..!




