Bengaluru : ಶಿಕ್ಷಣ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ – ವಿದ್ಯಾರ್ಥಿಗಳು, ಶಿಕ್ಷಕರಿಗೂ ಡಿಜಿಟಲ್ ಹಾಜರಿ ಕಡ್ಡಾಯ.

Bengaluru : ಇನ್ನೇನು ಕೆಲವೇ ದಿನಗಳಲ್ಲಿ ಬೇಸಿಗೆ ರಜೆ ಅಂತ್ಯವಾಗುತ್ತಿದ್ದು, ಜೂನ್ 1ರಿಂದ ರಾಜ್ಯಾದ್ಯಂತ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಪುನರಾರಂಭವಾಗಲಿವೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಹೊಸಮಾರ್ಗಸೂಚಿಯನ್ನು ಪ್ರಕಟಿಸಿದ್ದು, ಶಾಲೆಗಳ ಸುರಕ್ಷತೆ, ಹಾಜರಿ ವ್ಯವಸ್ಥೆ ಮತ್ತು ಬೋಧನಾ ವಿಧಾನಗಳ ಬಗ್ಗೆ ಹಲವು ಪ್ರಮುಖ ಸೂಚನೆಗಳನ್ನು ನೀಡಿದೆ.
ಶಾಲೆಗಳ ಸುರಕ್ಷತೆಗೆ ಆದ್ಯತೆ
ಶಾಲಾ ಕಟ್ಟಡಗಳು, ಶೌಚಾಲಯಗಳು ಹಾಗೂ ಅಡುಗೆ ಕೋಣೆಗಳು ಶಿಥಿಲಗೊಂಡಿದ್ದರೆ ಅವುಗಳನ್ನು ತಕ್ಷಣ ಸ್ಥಳೀಯ ಸಂಸ್ಥೆಗಳ ಸಹಕಾರದಿಂದ ದುರಸ್ತಿ ಅಥವಾ ತೆರವುಗೊಳಿಸಲು ಸೂಚಿಸಲಾಗಿದೆ. ಮಳೆಗಾಲ ಆರಂಭಕ್ಕೂ ಮುನ್ನ ಶಾಲೆ ಕಟ್ಟಡದ ಸುರಕ್ಷತೆಗೆ ಕ್ರಮ ವಹಿಸಲು ಮಾರ್ಗಸೂಚಿಯಲ್ಲಿ ಸೂಚಿಸಲಾಗಿದೆ.
ಇದನ್ನು ಓದಿ : ರಾಜ್ಯದಲ್ಲಿ 40 ಸಾವಿರ ಸರ್ಕಾರಿ ಶಾಲೆಗಳು ಮುಚ್ಚುವ ಭೀತಿ!

ಮುಖ್ಯ ಮಾರ್ಗಸೂಚಿಯ ಅಂಶಗಳು – Bengaluru
- 6 ರಿಂದ 14 ವರ್ಷದ ಮಕ್ಕಳು ಶಾಲೆಯಿಂದ ಹೊರಗುಳಿಯದಂತೆ ಕ್ರಮ ಕೈಗೊಳ್ಳಬೇಕು
- ಪೂರ್ವಾನುಮತಿ ಪಡೆದ ಶಾಲೆಗಳಲ್ಲಿ ಉರ್ದು–ಇಂಗ್ಲೀಷ್ ದ್ವಿಭಾಷಾ ಬೋಧನಾ ಪದ್ಧತಿ ಜಾರಿಗೆ ಸೂಚನೆ
- ಮೇ 28ರೊಳಗೆ ಶಾಲೆಗಳ ಸ್ವಚ್ಛತೆ, ಕುಡಿಯುವ ನೀರು ಹಾಗೂ ಸುರಕ್ಷತಾ ತಪಾಸಣೆ ಪೂರ್ಣಗೊಳಿಸಬೇಕು
- ಮೇ 29ರಂದು ಮುಖ್ಯ ಶಿಕ್ಷಕರು ಮತ್ತು ಸಹ ಶಿಕ್ಷಕರು ಕಡ್ಡಾಯವಾಗಿ ಶಾಲೆಗೆ ಹಾಜರಾಗಿ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು
- ಜೂನ್ 1ರಂದು ಶಾಲಾ ಪ್ರಾರಂಭ ಹಾಗೂ ಹೊಸ ದಾಖಲಾತಿ ಪ್ರಕ್ರಿಯೆ ಆರಂಭ
- ಜೂನ್ 30ರಂದು ದಾಖಲಾತಿ ಆಂದೋಲನ ಮುಕ್ತಾಯಗೊಳ್ಳಲಿದೆ
- ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಡಿಜಿಟಲ್ ಹಾಜರಿ ಕಡ್ಡಾಯಗೊಳಿಸಲಾಗಿದೆ

ಶಿಕ್ಷಣ ಇಲಾಖೆಯು ಈ ಕ್ರಮಗಳ ಮೂಲಕ ಶಾಲೆಗಳ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವುದರ ಜೊತೆಗೆ ಸುರಕ್ಷಿತ ಮತ್ತು ವ್ಯವಸ್ಥಿತ ಕಲಿಕಾ ವಾತಾವರಣವನ್ನು ಖಚಿತಪಡಿಸಲು ಮುಂದಾಗಿದೆ.
ಇದನ್ನು ನೋಡಿ : CONGRESS ಪಕ್ಷದಲ್ಲಿ ಇರುಸು ಮುರಿಸು ಇದ್ಯಾ-ಶಾಸಕ S.R.SRINIVAS ಶಾಕಿಂಗ್ ಹೇಳಿಕೆ




